ಇನ್ಮುಂದೆ ಕಾಫಿನಾಡಿನಲ್ಲಿ ಪ್ರತಿಭಟನೆ,ಮುಷ್ಕರ,ಧರಣಿಗೆ ಬ್ರೇಕ್..!!??
– ಪ್ರತಿಭಟನೆ,ರಸ್ತೆತಡೆ,ಧರಣಿ ನಡೆಸದಂತೆ ನಿರ್ಬಂಧ ವಿಧಿಸಿ ಆದೇಶ
– ದಿಢೀರ್ ಪ್ರತಿಭಟನೆ,ಮುಷ್ಕರ,ರಸ್ತೆ ತಡೆಯಿಂದ ಹೈರಾಣಾದ ಜಿಲ್ಲಾಡಳಿತ
NAMMUR EXPRESS NEWS
ಚಿಕ್ಕಮಗಳೂರು: ನಿರಂತರ ದಿಢೀರ್ ಪ್ರತಿಭಟನೆ,ಮುಷ್ಕರ,ಧರಣಿ,ರಸ್ತೆ ತಡೆಗಳಿಂದ ಹೈರಾಣಾದ ಜಿಲ್ಲಾಡಳಿತವು ಇನ್ಮುಂದೆ ದಿಢೀರ್ ಪ್ರತಿಭಟನೆಗಳನ್ನು ನಿರ್ಬಂಧ ವಿಧಿಸಿ ಆದೇಶಿಸಿದೆ. ಕಾನೂನು ಸುವ್ಯವಸ್ಥೆಯ ಕಾರಣದಿಂದ ಪ್ರತಿಭಟನೆ,ರಸ್ತೆ ತಡೆ,ಮುಷ್ಕರಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಲಾಗಿದೆ. ಇದರನ್ವಯ ನಗರದ ಹೃದಯ ಭಾಗದವಾದ ಹನುಮಂತಪ್ಪ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸದಂತೆ ಆದೇಶಿಸಿದೆ.ಈ ಸ್ಥಳದಲ್ಲಿ ಶಿಕ್ಷಣ ಸಂಸ್ಥೆಗಳು,ಸರ್ಕಾರಿ ಕಛೇರಿಗಳು ಸೇರಿದಂತೆ ಬಡಾಮಖಾನ್ ದರ್ಗಾ ಕೂಡ ಇರುವುದರಿಂದ ಕಾನೂನು ಸೂಕ್ಷ್ಮತೆಯ ಸಲುವಾಗಿ ನಿರ್ಬಂಧದ ಆದೇಶ ಮಾಡಲಾಗಿದೆ. ರಾಜಕೀಯ ಪಕ್ಷಗಳು,ವಿವಿಧ ಸಂಘ,ಸಂಸ್ಥೆಗಳು,ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆಯಿಂದ ಕಾನೂನು ಸುವ್ಯವಸ್ಥೆ ಕೈಗೊಳ್ಳುವುದು ಕಷ್ಟಕರವಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದ್ದು. ಇದರಿಂದ ಹನುಮಂತಪ್ಪ ಸರ್ಕಲ್ನ 100 ಮೀಟರ್ ವ್ಯಾಪ್ತಿಯಲ್ಲಿ ಧರಣಿ,ಪ್ರತಿಭಟನೆ ನಡೆಸದಂತೆ ಇಂದಿನಿಂದ ಮಾರ್ಚ್ 23 ರ ವರೆಗೂ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಮೀನಾನಾಗರಾಜ್ ಆದೇಶ ಹೊರಡಿಸಿದ್ದಾರೆ.