ಸಲೂನ್ ಅಲ್ಲಿ ಬಾಲಕಿಗೆ ಲೈಂಗಿಕ ದೌರ್ಜನ್ಯ: ಕಡೂರು ಉದ್ವಿಘ್ನ
– ಜನ ಸೇರಿ ಕಟ್ಟಿಂಗ್ ಶಾಪ್ ಮೇಲೆ ಕಲ್ಲು ತೂರಾಟ
– ಓರ್ವನ ಮೇಲೆ ಪೋಕ್ಸೋ ಕೇಸು ದಾಖಲು
NAMMUR EXPRESS NEWS
ಚಿಕ್ಕಮಗಳೂರು: ಅನ್ಯ ಕೋಮಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಕಡೂರು ಪೊಲೀಸರು ಪೋಕ್ಸೋ ಪ್ರಕರಣದಡಿ ಬಂಧಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ
ಕಡೂರು ಪಟ್ಟಣದ ಕೆ.ಹೊಸಳ್ಳಿ ಸಮೀಪದ ಹೆರ್ ಸಲೂನ್ ನಲ್ಲಿ ರಾತ್ರಿ ಮಹಿಳೆಯೊಬ್ಬರು ಐದೂವರೆ ವರ್ಷದ ಮಗಳನ್ನು ಹೇರ್ ಕಟಿಂಗ್ ಗಾಗಿ ಕರೆತಂದಿದ್ದು,ಆ ಸಮಯದಲ್ಲಿ ಬಾಲಕಿಯನ್ನು ಒಳಗೆ ಕಳಿಸಿ ಹಣ ತರಲೆಂದು ತಾಯಿ ಮನೆಗೆ ತೆರಳಿದ್ದಾಳೆ. ಕಟ್ಟಿಂಗ್ ಶಾಪ್ ವ್ಯಕ್ತಿ ಸಲೂನ್ ಬಾಗಿಲು ಹಾಕಿಕೊಂಡು ಮಗುವಿನ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ಮಗು ಕಿರುಚಿಕೊಂಡಿದ್ದು, ಸ್ಥಳಕ್ಕೆ ಬಂದ ತಾಯಿ ಕೂಡ ಕಿರುಚಾಡಿದ್ದಾಳೆ. ಅನ್ಯ ಕೋಮಿನ ಸಾವಿರಾರು ಜನ ಸೇರಿ ಕಟ್ಟಿಂಗ್ ಶಾಪ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಟ್ಟಿಂಗ್ ಶಾಪ್ ವ್ಯಕ್ತಿಯ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಆತನನ್ನ ವಶಕ್ಕೆ ಪಡೆದಿದ್ದಾರೆ
ಕಲ್ಲು ತೂರಾಟದ ವೇಳೆ ನಾಲ್ವರು ಮಹಿಳೆಯರಿಗೆ ಕಲ್ಲು ಬಿದ್ದು ಗಾಯಗಳಾಗಿದ್ದು, ಕಡೂರು ಪಟ್ಟಣದಲ್ಲಿ ಉದ್ವಿಗ್ನದ ವಾತಾವರಣ ನಿರ್ಮಾಣವಾಗಿತ್ತು. ಸಾವಿರಾರು ಜನ ಬೆಂಗಳೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಜಮಾಯಿಸಿ ಪ್ರತಿಭಟನೆಗೂ ಮುಂದಾಗಿದ್ದರು.
ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ತಪ್ಪಿತಸ್ಥನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿ ಆಕ್ರೋಶಿತರನ್ನ ಸಮಾಧಾನ ಪಡಿಸಿ ಎಲ್ಲರನ್ನು ವಾಪಸ್ ಕಳಿಸಿದ್ದಾರೆ. ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಸಲೂನ್ ವ್ಯಕ್ತಿ ಮೇಲೆ ಪೋಕ್ಸ್ ಪ್ರಕರಣ ದಾಖಲಾಗಿದೆ