ಶೃಂಗೇರಿ, ಕೊಪ್ಪದಲ್ಲಿ ಭತ್ತಕ್ಕೆ ರೋಗಗಳ ಕಾಟ!
– ರೈತರು, ಕೂಲಿ ಕಾರ್ಮಿಕರ ಬದುಕಲ್ಲಿ ಕಣ್ಣೀರು
– ಪಾತಾಳಕ್ಕೆ ಬಿದ್ದ ಈರುಳ್ಳಿ, ಆಲೂಗಡ್ಡೆ ದರ!
– ಕಡೂರು, ಬೀರೂರು ಭಾಗದ ರೈತರ ಗೋಳು
NAMMUR EXPRESS NEWS – ಶೃಂಗೇರಿ : ಮಲೆನಾಡಿನ ಹಲವೆಡೆ ಭತ್ತಕ್ಕೆ ರೋಗದ ಕಾಟ ಸಸಿಗೆ ಎಲೆಕಟ್ಟೆ, ಬೆಂಕಿ ಬಾಧೆ ಕಂಡು ಬಂದಿದೆ. ಶೃಂಗೇರಿ, ಕೊಪ್ಪ, ಹರಿಹರಪುರ, ಹಲವು ಭಾಗದಲ್ಲಿ ಮಳೆ ಕೊರತೆಯಿಂದ ಭತ್ತದ ಕೃಷಿಗೆ ಹಿನ್ನಡೆಯಾಗಿರುವುದರ ನಡುವೆ ಲಭ್ಯವಿರುವ ಅಲ್ಪಸ್ವಲ್ಪ ನೀರಿನ ಮೂಲದಿಂದ ನಾಟಿ ಮಾಡಲಾಗಿರುವ ಸಸಿಗೆ ಎಲೆಕಟ್ಟೆ ಮತ್ತು ಬೆಂಕಿ ರೋಗ ಹರಡುತ್ತಿದ್ದು ರೈತರನ್ನು ಆತಂಕಕ್ಕೆ ದೂಡಿದೆ. ಮುಂಗಾರು ವಿಫಲವಾಗಿರುವುದರಿಂದ ಭತ್ತದ ಕೃಷಿಗೆ ಅಡ್ಡಿಯಾಗಿರುವುದು ಒಂದೆಡೆಯಾದರೆ, ನೀರಿನ ಆಶ್ರಯವಿರುವ ಗದ್ದೆಯಲ್ಲಿ ಸಸಿಗಳಿಗೆ ರೋಗ ವ್ಯಾಪಕವಾಗಿ ಹರಡುತ್ತಿದ್ದು ಬೆಳವಣಿಗೆ ಕುಂಠಿತವಾಗಿದೆ. ಶೀಘ್ರದಲ್ಲೇ ವರುಣ ಕೃಪೆ ತೋರದಿದ್ದರೆ ರೋಗ ನಿಯಂತ್ರಣವಾಗದೆ, ಇಳುವರಿ ತೀವ್ರ ಇಳಿತವಾಗಲಿದೆ.
ರೈತರ ಕಣ್ಣೀರು ತಂದ ಈರುಳ್ಳಿ, ಆಲೂಗಡ್ಡೆ!
ಬೀರೂರು: ಮಳೆ ತೀವ್ರ ಕೊರತೆ ಕಾರಣ ಬಯಲು ಭಾಗದ ಜನರ ಬದುಕಿನಾಶ್ರಯದ ಈರುಳ್ಳಿ, ಆಲೂಗೆಡ್ಡೆ ಬೆಳೆ ಸಂಪೂರ್ಣ ಕೈಕೊಟ್ಟಿದ್ದು, ರೈತರು, ಕೂಲಿ ಕಾರ್ಮಿಕರ ಮುಖದಲ್ಲಿ ಚಿಂತೆಯ ಕವಳ ಕಮರುವಂತೆ ಮಾಡಿದೆ. ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳ ರೈತರು ಸಾಂಪ್ರದಾಯಿಕ ಕೃಷಿ ಜತೆಗೆ ಈರುಳ್ಳಿ ಹಾಗೂ ಆಲೂಗೆಡ್ಡೆ ಬಿತ್ತಿದ್ದು ಮುಂಗಾರು ಸಂಪೂರ್ಣ ಕೈಕೊಟ್ಟ ಪರಿಣಾಮ ಬಿತ್ತನೆ ಬೀಜ ಮತ್ತು ಎಳಸು ಬೆಳೆ ಮಣ್ಣುಪಾಲಾಗಿದೆ