ಕಳಸ ತಾಲೂಕಿನಲ್ಲಿ ಹೆಚ್ಚಿದ ಗೋವುಗಳ ಕಳ್ಳತನ!
* ಸತ್ತ ಬಿಡಾಡಿ ದನಗಳನ್ನು ರಸ್ತೆ ಬದಿಯಲ್ಲಿ ಎಸೆದ ನೀಚರು
* ಕಳಸದ ಸಂಸೆ ಭಾಗದಲ್ಲಿ ಅತಿ ಹೆಚ್ಚು ಗೋವು ಸಾಗಾಟ
* ಭಜರಂಗದಳ ಕಾರ್ಯಕರ್ತರ ಮಿಂಚಿನ ಕಾರ್ಯಾಚರಣೆ
* ಗೋ ಕಳ್ಳ ಸಾಗಾಟ ವಾಹನ ಪೋಲೀಸರ ವಶಕ್ಕೆ
NAMMUR EXPRESS NEWS
ಕಳಸ: ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಮಾವಿನ ಕೆರೆ ಗ್ರಾಮ ಕಚ್ಚುಗಾನೆ ಬಳಿ ಸತ್ತ ಗೋವುಗಳನ್ನು ರಾತ್ರೋ ರಾತ್ರಿ ತಂದು ರಸ್ತೆ ಬದಿಯಲ್ಲಿ ಎಸೆದ ಘಟನೆ ನಡೆದಿದೆ.
ಗೋವುಗಳ ಸಾವಿಗೆ ಖಚಿತ ಕಾರಣ ತಿಳಿದುಬಂದಿಲ್ಲ.ಘಟನೆ ಹಿಂದಿನ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಬಜರಂಗದಳ ಕಳಸ ವತಿಯಿಂದ ಪೋಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಯಿತು ಹಾಗೂ ಮೃತ ಗೋವುಗಳ ಅಂತ್ಯಸಂಸ್ಕಾರ ಮಾಡಲಾಯಿತು.
ಸಂಸೆ ಭಾಗದಲ್ಲಿ ಎಗ್ಗಿಲ್ಲದೇ ನಡೆಯತ್ತಿದೆ ಗೋಕಳ್ಳ ಸಾಗಾಟ!?
ಕಳಸ ತಾಲೂಕಿನ ಸಂಸೆ ಭಾಗದಿಂದ ಹೆಚ್ಚಾಗಿ ಗೋಕಳ್ಳ ಸಾಗಾಟ ನಡೆಯುತ್ತಿದ್ದು ಈ ಕೃತ್ಯಕ್ಕೆ ಕಡಿವಾಣ ಹಾಕಬೇಕಿದೆ. ಎಳನೀರು ಮಾರ್ಗವಾಗಿ ದಿಡುಪೆಯಿಂದ ಬೆಳ್ತಂಗಡಿ ಕಡೆ ಗೋವುಗಳ ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವನ್ನು ಬಜರಂಗದಳದ ಕಾರ್ಯಕರ್ತರು ತಡೆದು ಎರಡು ಪಿಕ್ಅಪ್ಗಳನ್ನು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.5 ದನಗಳನ್ನು ರಕ್ಷಿಸಿದ್ದು, ದಾಖಲೆಯಲ್ಲಿದ್ದ ಮಾಹಿತಿಗೂ ಮತ್ತು ಗೋವುಗಳ ಬಣ್ಣಕ್ಕೂ ವ್ಯತ್ಯಾಸವಿದ್ದು ಪಶುವೈದ್ಯರಿಗೆ ಹಣಕೊಟ್ಟು ಈ ಸುಳ್ಳು ದಾಖಲೆ ಸಿದ್ಧಪಡಿಸಲಾಗಿದೆ ಎಂದು ಕಳಸ ಬಜರಂಗದ ಕಾರ್ಯಕರ್ತರು ನೀಡಿದ ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆಸಿ ವಾಹನವನ್ನು ಬೆಳ್ತಂಗಡಿ ಬಜರಂಗದಳ ಕಾರ್ಯಕರ್ತರು ತಡೆದು ಪೋಲೀಸರಿಗೆ ಒಪ್ಪಿಸಿದ್ದಾರೆ.ಈ ಸಂಬಂಧ ಬೆಳ್ತಂಗಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಕಳ್ಳರ ಹಾವಳಿ ಹೆಚ್ಚಳ!
ಕಳಸ ತಾಲೂಕಿನಲ್ಲಿ ಗೋವು ಕಳ್ಳರ ಹಾವಳಿ ಹೆಚ್ಚುತ್ತಿದೆ ಎಂದು ಬಜರಂಗದಳದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಈ ಬಗ್ಗೆ ಉಗ್ರಹೋರಾಟ ನಡೆಸೋದಾಗಿ ಎಚ್ಚರಿಕೆ ನೀಡಿದ್ದಾರೆ.