ಕೊಪ್ಪ ಸಮೀಪದ ಶ್ರೀ ಕ್ಷೇತ್ರ ಕುಂಚೂರಲ್ಲಿ ಜಾತ್ರಾ ಸಂಭ್ರಮ!
– ಫೆ 3ರಿಂದ ಫೆ.8ರವರೆಗೆ ಶ್ರೀ ದುರ್ಗಾ ದೇವಿ ಜಾತ್ರೆ: ವಿಶೇಷ ಧಾರ್ಮಿಕ ಕಾರ್ಯಕ್ರಮ: ಫೆ.4ಕ್ಕೆ ರಥೋತ್ಸವ
– ಫೆ.5ರಂದು ಜಿಲ್ಲಾಮಟ್ಟದ ಜಾನಪದ ಗೀತೆ ಗಾಯನ ಸ್ಪರ್ಧೆ
NAMMUR EXPRESS NEWS
ಕೊಪ್ಪ: ಕೊಪ್ಪ ತಾಲೂಕಿನ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ರಥೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಪ್ರಕೃತಿ ಸೌಂದರ್ಯದ ಮಡಿಲಲ್ಲಿ ನೆಲೆಸಿ, ಭಕ್ತರ ಅಭೀಷ್ಟಗಳನ್ನು ನೆರವೇರಿಸುತ್ತಾ ಲೋಕ ಕಲ್ಯಾಣವನ್ನುಂಟುಮಾಡುತ್ತಿರುವ ಶ್ರೀ ದುರ್ಗಾ ದೇವಿಯವರ ಜಾತ್ರೆ ಅಂಗವಾಗಿ 03-02-25 ಸೋಮವಾರ ಬೆಳಿಗ್ಗೆ ಗಣಪತಿ ಪೂಜೆ, ದೇವನಾಂದಿ, ಶ್ರೀ ಚಂಡಿಕಾ ಹೋಮ, ರಥೋತ್ಸವ ಅಂಗವಾಗಿ ಮಹಾ ಸಂಕಲ್ಪ, ಧ್ವಜಾರೋಹಣ, ರಾತ್ರಿ ರಂಗ ಪೂಜೆ ಮತ್ತು ರಾಶಿ ಪೂಜೆ, ದೀಪಾರಾಧನೆ, ಗದ್ದುಗೆ ಉತ್ಸವ ನಡೆಯಲಿದೆ. 04-02-25 ಮಂಗಳವಾರ ಮಧ್ಯಾಹ್ನ 12 ಘಂಟೆಗೆ ಶ್ರೀ ಮನ್ಮಹಾರಥಾರೋಹಣ. ರಾತ್ರಿ 8-00 ಘಂಟೆಗೆ ರಥೋತ್ಸವ. (ಈ ದಿನದ ಸಂಪೂರ್ಣ ವೆಚ್ಚವನ್ನು ಶ್ರೀಮತಿ ಲಕ್ಷ್ಮೀದೇವಿ ಮತ್ತು ಶ್ರೀ ತಮ್ಮಣ್ಣ ಗೌಡ ಮತ್ತು ಮಕ್ಕಳು ಮತ್ತು ಮೊಮ್ಮಕ್ಕಳು, ಹೆಗ್ಗರಸು, ಶೃಂಗೇರಿ ತಾ। ಇವರು ಭರಿಸಿರುತ್ತಾರೆ. 05-02-25 ಬುಧವಾರ ಓಕುಳಿ, ಅವಕೃತ, ತುಲಾಭಾರ, ರಾತ್ರಿ ಉತ್ಸವ, ದೀಪಾರಾಧನೆ, ರಾತ್ರಿ 9 ಘಂಟೆಗೆ ಕೋಲ 06-02-25 ಗುರುವಾರ ಶ್ರೀ ದುರ್ಗಿ ಸಮಾರಾಧನೆ, ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ರಾತ್ರಿ ಮಾರಿ ಮತ್ತು ಭೂತನ ಪೂಜೆ. 07-02-25 ಶುಕ್ರವಾರ ಮಾರಿ ಪೂಜೆ, 08-02-25 ಶನಿವಾರ ಸಂಪ್ರೋಕ್ಷಣೆ ಈ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ. ಶ್ರೀ ದೇವತಾನುಗ್ರಹದಿಂದ ನಡೆಯಲಿರುವ ಈ ಮಹೋತ್ಸವಗಳಿಗೆ ತಾವು ಇಷ್ಟ ಮಿತ್ರರೊಡನೆ ತನು, ಮನ, ಧನದೊಂದಿಗೆ ಭಾಗವಹಿಸಿ, ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಕೋರಿದ್ದಾರೆ.
ಫೆ.5ರಂದು ಜಿಲ್ಲಾಮಟ್ಟದ ಜಾನಪದ ಗೀತೆ ಗಾಯನ ಸ್ಪರ್ಧೆ
ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ ಶ್ರೀ ಕ್ಷೇತ್ರ ಕುಂಚೂರು ಮತ್ತು ಅದ್ದಡ ಗ್ರಾಮಸ್ಥರು ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸೇವಾ ಸಮಿತಿಯ ಸಹಯೋಗದೊಂದಿಗೆ ಫೆ.5ರಂದು ಅಮ್ಮನವರ ಜಾತ್ರಾ ಮಹೋತ್ಸವದ ಪ್ರಯುಕ್ತ ರಾಜ್ಯ ಯುವ ಪ್ರಶಸ್ತಿ ವಿಜೇತ ಜಾನಪದ ಕಲಾವಿದ ದಿ|| ಕುಂಚೂರು ಹರೀಶ್ ಸ್ಮರಣಾರ್ಥ ಚಿಕ್ಕಮಗಳೂರು ಜಿಲ್ಲಾಮಟ್ಟದ ಜಾನಪದ ಗೀತೆ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. ಜಾನಪದ ಗೀತೆ ಗಾಯನ ಸ್ಪರ್ಧೆ 16 ವರ್ಷದ ಒಳಗಿನವರಿಗೆ ಗುಂಪು ಸ್ಪರ್ಧೆ ಶಾಲಾ ವಿಭಾಗ, ನಾಲ್ಕು ಜನರಿಗೆ ಅವಕಾಶ ಸಮಯ ನಾಲ್ಕು ನಿಮಿಷ, 16 ವರ್ಷ ಮೇಲ್ಪಟ್ಟವರಿಗೆ ಯುವಕ ಯುವತಿಯರ ಗುಂಪು ವಿಭಾಗ ಐದು ಜನರ ಜನಕ್ಕೆ ಅವಕಾಶ.5 ನಿಮಿಷ ಸಮಯಾವಕಾಶ ನೀಡಲಾಗಿದೆ. ಅದ್ದಡ ಕುಂಚೂರು ಗ್ರಾಮಸ್ಥರ ಆಶ್ರಯದಲ್ಲಿ ಕಾರ್ಯಕ್ರಮ 05 – 02 – 2025 ಬುಧವಾರ ಬೆಳಗ್ಗೆ 9.30 ಬೆಳ್ಳಿಗೆ ಸ್ಥಳ ಕುಂಚೂರು ದೇವಸ್ಥಾನ ಆವರಣದಲ್ಲಿ ನಡೆಯಲಿದೆ. ಸರ್ವರಿಗೂ ಕೂಡ ಆದರದ ಸ್ವಾಗತವನ್ನು ಈ ಸಮಿತಿಯವರು ತಿಳಿಸಿದ್ದಾರೆ. ಪ್ರಶಸ್ತಿ ಮತ್ತು ಬಹುಮಾನ ಜಾನಪದ ಗೀತಾ ಗಾಯನ ಸ್ಪರ್ಧೆ ಶಾಲಾ ಮಕ್ಕಳ ವಿಭಾಗ
ಪ್ರಥಮ ಬಹುಮಾನ 8000 ರೂ
ದ್ವಿತೀಯ ಬಹುಮಾನ 3000 ರೂ
ತೃತೀಯ ಬಹುಮಾನ 2000 ರೂ + ಆಕರ್ಷಕ ಪಾರಿತೋಷಕ
ಜನಪದ ಗೀತೆ ಗಾಯನ ಸ್ಪರ್ಧೆ ಯುವಕ ಯುವತಿಯರ ವಿಭಾಗ
ಪ್ರಥಮ ಬಹುಮಾನ 10.000 ರೂ
ದ್ವಿತೀಯ ಬಹುಮಾನ 6000 ರೂ
ತೃತೀಯ ಬಹುಮಾನ 4000 ರೂ ಮತ್ತು ಆಕರ್ಷಕ ಪಾರಿತೋಷಕ
ಹೆಸರು ನೋಂದಣಿಗಾಗಿ ಸಂಪರ್ಕ:
ನರ್ತನ್ ಟಿ ಆರ್ 6361885677,
ರಾಜೇಶ್ ಎಸ್ ಎನ್ 9449776899
ಸುಧಾಕರ್ ಡಿ.ಡಿ, 9449205251
ಪ್ರದೀಪ್ ಎಸ್ ಸಿ ಗ್ರಾಮ ಪಂಚಾಯತಿ ಸದಸ್ಯರು 9449205474, ರತ್ನಾಕರ್ ಆರ್ 9480198847