ಜೀವನಾನುಭವ ಕಥನ “ಬರೆದಷ್ಟೂ ಮೊಗೆದಷ್ಟೂ ” ಕೃತಿ ಲೋಕಾರ್ಪಣೆ
– ಶೃಂಗೇರಿಯ ಉಳುವೆಬೈಲು ದೇಗುಲದಲ್ಲಿ ಚಿಂತನಾ ವ್ಯಾಟ್ಸಪ್ ಬಳಗ ಗಣಿತವನ ಶಿವಶಂಕರ್ ಅವರ ಕೃತಿ ಬಿಡುಗಡೆ
– ಕನ್ನಡ ಸಾಹಿತ್ಯ ಪರಿಷತ್ ಶೃಂಗೇರಿ ಸಹಯೋಗದಲ್ಲಿ ಕಾರ್ಯಕ್ರಮ
NAMMUR EXPRESS NEWS
ಶೃಂಗೇರಿ: ಶೃಂಗೇರಿಯ ಉಳುವೆಬೈಲು ಪ್ರಸನ್ನ ಮಹಾಗಣಪತಿ ದೇವಾಲಯದಲ್ಲಿ , ಕನ್ನಡ ಸಾಹಿತ್ಯ ಪರಿಷತ್ ಶೃಂಗೇರಿ ಸಹಯೋಗದಲ್ಲಿ ಚಿಂತನಾ ವ್ಯಾಟ್ಸಪ್ ಬಳಗ ಗಣಿತವನ ಶಿವಶಂಕರ್ ಅವರ ಜೀವನಾನುಭವ ಕಥನ ಬರೆದಷ್ಟೂ ಮೊಗೆದಷ್ಟೂ ಕೃತಿ ಲೋಕಾರ್ಪಣೆ ಸಮಾರಂಭ ನಡೆಯಿತು
ಬೀರೂರು ಕ್ಷೇತ್ರಶಿಕ್ಷಣಾಧಿಕಾರಿಗಳು ರುದ್ರಪ್ಪ ಟಿ.ಆರ್ ಬಿಡುಗಡೆಗೊಳಿಸಿ ಮಾತನಾಡಿ, ಚೈತನ್ಯದ ತರಬೇತಿ ದಿನಗಳ ಸಂಭ್ರಮವನ್ನು ನೆನಪಿಸಿಕೊಂಡರು. ಕೃತಿ ಬಿಡುಗಡೆ ಮಾಡಿ ಮಾತನಾಡಿದ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಟಿ.ಎಂ. ಕುಮಾರ್ ಆತ್ಮಕಥನ ಬರೆಯುವುದು ಒಂದು ಸಂಕೀರ್ಣ ಅನುಭವ. ಕೃತಿಕಾರರು ಸರಳವಾಗಿ ತೆರೆದಿಟ್ಟಿದ್ದಾರೆ.ಇದರ ಅನುಭವ ಮುಂದಿನ ಮಡಿಲು ಕೃತಿಯಲ್ಲಿ ನಿಮಗೆ ಕಾಣಸಿಗುತ್ತದೆ ಎಂದರು.ಸಾಹಿತ್ಯ ಪರಿಷತ್ ಅಧ್ಯಕ್ಷ ಶೃಂಗೇರಿ ಸುಬ್ಬಣ್ಣ ಪರಿಷತ್ತಿನ ಒಂದು ತಿಂಗಳ ಕಾರ್ಯಕ್ರಮದ ರೂಪು ರೇಷೆ ವಿವರಿಸಿದರು. ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಸತೀಶ್ ಸಿರಿಗನ್ನಡ ವೇದಿಕೆಯ ಪ್ರಕಾಶ್ ಗಣಿತವನ ಶಿವಶಂಕರ್ ಮಾಧ್ಯಮಿಕ ಶಾಲಾ ಶಿಕ್ಷಕಿ ಶ್ರೀಮತಿ ಜಯಮ್ಮ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಭಾಕರ ಕಾರಂತರು ಆತ್ಮಕಥನ ಮರೆಯುವ ಮುಂಚೆ ಬರೆದದ್ದು ಮೆಚ್ಚುವಂತದ್ದು. ಸರಳವಾಗಿ ಪ್ರಾಮಾಣಿಕವಾಗಿ ಚಿತ್ರಿಸಿದ ಕಾರಣ ಕೃತಿ ಮೌಲ್ಯಯುತವಾಗಿದೆ ಎಂದರು. ಸ್ವಾಮಿ ಅವರು ಚಿಂತನಾಬಳಗ ಕಾರ್ಯಚಿತ್ರಣ ತೆರೆದಿಟ್ಟರು. ಈ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಇಲ್ಲದೆ ಸಂಪೂರ್ಣ ಕಾರ್ಯಕ್ರಮ ಸಂಯೋಜಿಸಿದ ಬಳಗದ ಪರಿಸರ ಕಾಳಜಿ ಗಮನ ಸೆಳೆಯಿತು. ಮಾಧ್ಯಮ ಶಾಲೆಯ ಗುರುಗಳಾದ ಜಯಮ್ಮ ಅವರನ್ನು ಗೌರವಿಸಿದ್ದು ವಿಶೇಷ. ಶಿವಶಂಕರ್ ಸ್ವಾಗತಿಸಿ ಬಳಗದ ಅರ್ಚಿತಾ ನಿರೂಪಿಸಿ ನಿಶ್ಚಲ್ ನಿರ್ವಹಿಸಿ ಸನ್ಮತಿ ವಂದಿಸಿದರು.