ಕೊಪ್ಪ: ಮಳೆಯನ್ನು ಲೆಕ್ಕಿಸದೇ ಆರ್ಎಸ್ಎಸ್ ಪಥಸಂಚಲನ
* ಆರ್ಎಸ್ಎಸ್ಗೆ 100 ವರ್ಷ ತುಂಬುತ್ತಿರುವ ಹಿನ್ನೆಲೆ ಪಥಸಂಚಲನ
* ಮಳೆಯನ್ನು ಲೆಕ್ಕಿಸದೇ ಪಾಲ್ಗೊಂಡ 400ಕ್ಕೂ ಅಧಿಕ ಸ್ವಯಂಸೇವಕರು
NAMMUR EXPRESS NEWS
ಕೊಪ್ಪ: ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಭಾನುವಾರ ಕೊಪ್ಪ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪಥ ಸಂಚಲನ ನಡೆಸಲಾಯಿತು. ಆರ್ಎಸ್ಎಸ್ಗೆ ನೂರು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಜ್ಞಾನ ವಾಹಿನೀ ವಿದ್ಯಾಸಂಸ್ಥೆಯಲ್ಲಿ ಆರಂಭಗೊಂಡ ಪಥಸಂಚಲನ ಎಸ್ಟಿ ರಸ್ತೆ ಮೂಲಕ ಸಾಗಿ ಮುಖ್ಯ ಬಸ್ ನಿಲ್ದಾಣ ತಲುಪಿ, ದ್ಯಾವೇಗೌಡ ವೃತ್ತದ ಮೂಲಕ ಸಾಗಿತು. ಈ ವೇಳೆ ಭಾರಿ ಮಳೆಯಾಗಿದ್ದು, ಮಳೆಯನ್ನೂ ಲೆಕ್ಕಿಸದೇ ಸ್ವಯಂಸೇವಕರು ಪಥಸಂಚಲನ ನಡೆಸಿದರು. ಪಟ್ಟಣ, ಜಯಪುರ, ಹರಿಹರಪುರ, ಕಸಬಾ ಹೋಬಳಿಯಿಂದ 400ಕ್ಕೂ ಹೆಚ್ಚು ಸ್ವಯಂಸೇವಕರು ಪಾಲ್ಗೊಂಡಿದ್ದರು.
ಪಥಸಂಚಲನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಾರ್ಯವಾಹ ಅನಿಲ್ ಶೆಣೈ, ತಾಲೂಕು ಕಾರ್ಯವಾಹ ಸಂದೇಶ್, ಪ್ರಮುಖರಾದ ಟಿ.ಕೆ ನಾರಾಯಣ್, ಅಜಿತ್ ಶೆಣೈ, ಅಸ್ತಿಕ್ ಹೆಬ್ಬಾರ್ ಸೇರಿದಂತೆ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.