ಕಟ್ಟಡ ಕಾರ್ಮಿಕರ ಸಂಘದಿಂದ ಶ್ರಮಿಕೋತ್ಸವ ಕಾರ್ಯಕ್ರಮ..!
– ಶ್ರೀಚಂಡಿಕಾ ಹೋಮ,ಸಮಾವೇಶ,ಸಂತರ್ಪಣೆ
– ಶ್ರೀಶಾರದಾಂಬ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘದಿಂದ ಆಯೋಜನೆ
– ಕಾರ್ಮಿಕರ ಸಹಾಯಕ್ಕೆ ಟ್ರಸ್ಟ್ ಉದ್ಘಾಟಿಸಿದ ಜಗದ್ಗುರುಗಳು,ಶ್ರೀಮಠದಿಂದ ಧನಸಹಾಯ
NAMMUR EXPRESS NEWS
ಶೃಂಗೇರಿ: ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ) ಇದರ ವತಿಯಿಂದ ತಾಲೂಕಿನ ಗೌರೀಶಂಕರ್ ಸಭಾಂಗಣದಲ್ಲಿ ಮೂರನೇ ವರ್ಷದ ಶ್ರಮಿಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಿತ್ತು.ಕಳೆದೆರಡು ಶ್ರಮಿಕೋತ್ಸವದಲ್ಲಿ ಸತ್ಯನಾರಾಯಣ ಪೂಜೆ,ಗಣಹೋಮ ನಡೆಸಿದ್ದ ಸಂಘ ಈ ಬಾರಿ ಶ್ರೀಚಂಡಿಕಾ ಹೋಮ ನಡೆಸಿತು. ಹೋಮದ ಪೂರ್ಣಾಹುತಿಯಲ್ಲಿ ಶೃಂಗೇರಿ ಶ್ರೀಶಾರದಾ ಪೀಠದ ಜಗದ್ಗುರು ಶ್ರೀಶ್ರೀ ವಿಧುಶೇಖರ ಮಹಾಸ್ವಾಮಿಗಳವರು ಭಾಗವಹಿಸಿ ಆಶೀರ್ವಚನ ನೀಡಿದರು.
ಶ್ರೀಶಾರದಾಂಬ ಶ್ರಮಿಕಾ ಸೇವಾ ಟ್ರಸ್ಟ್ ಉದ್ಘಾಟನೆ..
ತಾಲೂಕಿನ ಕಾರ್ಮಿಕರ ಸಂಕಷ್ಟದಲ್ಲಿ ನೆರವಾಗಲು ಶ್ರೀಶಾರದಾಂಬ ಶ್ರಮಿಕಾ ಸೇವಾ ಟ್ರಸ್ಟ್ನ್ನು (ರಿ) ಶ್ರೀಜಗದ್ಗುರು ವಿಧುಶೇಖರ ಭಾರತೀ ತೀರ್ಥ ಮಹಾಸ್ವಾಮಿಗಳು ಉದ್ಘಾಟಿಸಿದರು. ಉದ್ಘಾಟಿಸಿ ಶ್ರೀಮಠದಿಂದ ಟ್ರಸ್ಟ್ಗೆ 3 ಲಕ್ಷ ರೂ.ಗಳ ಸಹಾಯಧನ ನೀಡಿ ಅಶೀರ್ವದಿಸಿದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಮುನಿಸ್ವಾಮಿ.ಕೆ, ಸಂಸದ ಕೋಟಾ ಶ್ರೀನಿವಾಸ ಪೂಜಾರಿ,ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ,ಪಟ್ಟಣ ಪಂಚಾಯ್ತಿ ಅಧ್ಯಕ್ಷ ವೇಣುಗೋಪಾಲ್ ಸೇರಿದಂತೆ ನೂರಾರು ಕಾರ್ಮಿಕರು ಉಪಸ್ಥಿತರಿದ್ದರು.