Categories
ರಾಜ್ಯ

ಶರಣಾಗತಿಗೆ ನಿರ್ಧರಿಸಿದ 6 ನಕ್ಸಲರು..!!??

ಶರಣಾಗತಿಗೆ ನಿರ್ಧರಿಸಿದ 6 ನಕ್ಸಲರು..!!??
* ಕರ್ನಾಟಕ,ಕೇರಳ, ಆಂಧ್ರಪ್ರದೇಶ ಮೂರು ರಾಜ್ಯಗಳಿಗೆ ಬೇಕಾದ ಮೋಸ್ಟ್ ವಾಂಟೆಡ್ ನಕ್ಸಲರು
* ಶಾಂತಿಗಾಗಿ ನಾಗರೀಕ ವೇದಿಕೆಗೆ ಪತ್ರ ಬರೆದ ನಕ್ಸಲರು

NAMMUR EXPRESS NEWS
ಚಿಕ್ಕಮಗಳೂರು: ಕಳೆದ ಕೆಲವು ದಿನಗಳ ಹಿಂದೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಾಗಿದ್ದು, ಈ ವೇಳೆ ಕೂಂಬಿಂಗ್ ನಡೆಸಿದ ಎಎನ್ಎಫ್ ಸಿಬ್ಬಂಧಿ ನಕ್ಸಲ್ ನಾಯಕ ವಿಕ್ರಂ ಗೌಡನನ್ನು ಎನ್ಕೌಂಟರ್ ಮಾಡಿದ್ದರು. ಈ ಎನ್‌ಕೌಂಟರ್ ಬಳಿಕ ಇದೀಗ 6 ಮಂದಿ ನಕ್ಸಲರು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗತಿಗೆ ನಿರ್ಧರಿಸಿದ್ದು, ಮುಂದಿನ ಮೂರು ದಿನಗಳಲ್ಲಿ ಆರು ನಕ್ಸಲರು ಶರಣಾಗೋ ಸಾಧ್ಯತೆ ಇದೆ ಎನ್ನಲಾಗಿದೆ. ಶರಣಾಗತಿ ಆಗಲು ನಿರ್ಧಾರಿಸಿದ ನಕ್ಸಲರು ಕರ್ನಾಟಕ, ಕೇರಳ, ಆಂಧ್ರಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲರಾಗಿದ್ದು, ಕರ್ನಾಟಕದ ನಕ್ಸಲ್ ತುಂಗಾ ದಳದ ನಕ್ಸಲ್ ನಾಯಕಿ ಮುಂಡಗಾರು ಲತಾ, ಸುಂದರಿ, ವನಜಾಕ್ಷಿ, ದಕ್ಷಿಣ ಭಾರತದ ಮೋಸ್ಟ ವಾಂಟೆಡ್ ನಕ್ಸಲ್ ಜೀಶ ಆಂಧ್ರಪ್ರದೇಶದ ಕೆ. ವಸಂತ್, ಮಾರಪ್ಪ ಅರೋಲಿ ಶರಣಾಗತಿಗೆ ನಿರ್ಧರಿಸಿದ್ದಾರೆ.
ಈ ಬಗ್ಗೆ ಶಾಂತಿಗಾಗಿ ನಕ್ಸಲರು ನಾಗರೀಕ ವೇದಿಕೆಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ವೇದಿಕೆ ಸದಸ್ಯರು ಚರ್ಚಿಸಿದ್ದಾರೆ. ಮೂರು ದಿನಗಳಲ್ಲಿ ಆರು ನಕ್ಸಲರು ಶರಣಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮೂರು ತಿಂಗಳಿನಿಂದ ಚಿಕ್ಕಮಗಳೂರು ಉಡುಪಿ ಭಾಗದಲ್ಲಿ ನಕ್ಸಲ್ ಚಟುವಟಿಕೆ ನಡೆಯುತ್ತಿತ್ತು. ವಿಕ್ರಂ ಎನ್ಕೌಂಟರ್ ಬಳಿಕ ಸರ್ಕಾರ ನಕ್ಸಲರಿಗೆ ಶರಣಾಗತಿಗೆ ಆದ್ಯತೆ ನೀಡಿತ್ತು. ಹಾಗಾಗಿ ಇದೀಗ 6 ನಕ್ಸಲರು ತಾವಾಗಿಯೇ ಶರಣಾಗತಿಗೆ ನಿರ್ಧಾರ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.