ಕಿಗ್ಗಾ ಋಷ್ಯಶೃಂಗೇಶ್ವರನಿಗೆ ಲಕ್ಷದೀಪೋತ್ಸವ!
– ದೀಪೋತ್ಸವದಲ್ಲಿ ನೂರಾರು ಜನ ಭಾಗಿ
– ದೀಪಾಲಂಕಾರ,ರಂಗೋಲಿಯಿಂದ ಕಂಗೊಳಿಸಿದ ದೇಗುಲ
NAMMUR EXPRESS NEWS
ಶೃಂಗೇರಿ: ಮಳೆ ದೇವರೆಂದೇ ಜಗತ್ಪ್ರಸಿದ್ಧಿಯಾದ ತಾಲೂಕಿನ ಕಿಗ್ಗಾ ಶ್ರೀಶಾಂತಾ ಋಷ್ಯಶೃಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ನೂರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು.
ದೀಪೋತ್ಸವದ ಪ್ರಯುಕ್ತ ದೇವಾಲಯವನ್ನು ವಿಶೇಷ ವಿದ್ಯುತ್ ದೀಪಗಳಿಂದ ಮತ್ತು ರಂಗೋಲಿ, ಹೂವುಗಳಿಂದ ಅಲಂಕರಿಸಲಾಗಿತ್ತು.ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಭಕ್ತಾಧಿಗಳು ಶ್ರದ್ಧೆ,ಭಕ್ತಿಯಿಂದ ದೀಪೋತ್ಸವದಲ್ಲಿ ಪಾಲ್ಗೊಂಡರು. ದೇವಾಲಯದಲ್ಲಿ ವಿಶೇಷ ಪೂಜೆ,ಧಾರ್ಮಿಕ ಆಚರಣೆಗಳ ನಂತರ ದೀಪೋತ್ಸವ ನಡೆಯಿತು,ರಾಜಬೀದಿಯಲ್ಲಿ ಶಾಂತ ಸಮೇತ ಋಷ್ಯಶೃಂಗೇಶ್ವರ ಸ್ವಾಮಿಯ ರಥೋತ್ಸವ ನಡೆಯಿತು. ದೀಪೋತ್ಸವ ಸಮಿತಿಯಿಂದ ಅಚ್ಚುಕಟ್ಟಾಗಿ ಕಾರ್ಯಕ್ರಮದ ನಿರ್ವಹಣೆ ಮಾಡಲಾಯಿತು.