ಕಾಫಿನಾಡಲ್ಲಿ ಮಂಗನ ಕಾಯಿಲೆ..!!??
– ಖಾಂಡ್ಯದ ಮತ್ತಿಖಂಡ ಗ್ರಾಮದಲ್ಲಿ ಪ್ರಕರಣ ಪತ್ತೆ
– ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಶಿಫ್ಟ್
NAMMUR EXPRESS NEWS
ಚಿಕ್ಕಮಗಳೂರು/ ಖಾಂಡ್ಯ: ಖಾಂಡ್ಯದ ಮತ್ತಿಖಂಡ ಗ್ರಾಮದಲ್ಲಿ ಯುವಕನೋರ್ವನಿಗೆ ಮಂಗನ ಕಾಯಿಲೆ ಇರುವುದು ಧೃಢಪಟ್ಟಿದೆ. ಆನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಯುವಕನ ರಕ್ತ ಪರೀಕ್ಷೆಯಲ್ಲಿ ಮಂಗನ ಕಾಯಿಲೆ ಇರುವುದು ಧೃಢಪಟ್ಟಿದ್ದು. ಗ್ರಾಮದಲ್ಲಿ ಈಗ ಕಾಯಿಲೆ ಭೀತಿ ಶುರುವಾಗಿದೆ. ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.