ವರ್ಷಕ್ಕೊಮ್ಮೆ ಹತ್ತುವ ದೇವೀರಮ್ಮ ಬೆಟ್ಟ ಹತ್ತಲು ಸಜ್ಜು!
* ಕಾಫಿನಾಡಲ್ಲಿ ದೀಪಾವಳಿ ಸಂಭ್ರಮದಲ್ಲಿ ವಿಶಿಷ್ಟ ಆಚರಣೆ
* ವರ್ಷಕ್ಕೊಮ್ಮೆ ಬೆಟ್ಟಹತ್ತಿ ದರ್ಶನ ಪಡೆಯೋ ಸಾವಿರಾರು ಜನ
ವಿಶೇಷ ವರದಿ: ಸಚಿನ್ ಶೃಂಗೇರಿ
NAMMUR EXPRESS NEWS
ಚಿಕ್ಕಮಗಳೂರು: ದೀಪಾವಳಿ ಬಂತೆಂದರೆ ಕಾಫಿನಾಡು ಚಿಕ್ಕಮಗಳೂರು ಸೇರಿದಂತೆ ಸುತ್ತಮುತ್ತಲಿನ ಜನರಿಗೆ ಬೆಟ್ಟ ಹತ್ತಿ ದೇವಿರಮ್ಮ ದರ್ಶನ ಮಾಡೋ ತವಕ.
ಪ್ರತಿವರ್ಷ ದೀಪಾವಳಿ ಸಂದರ್ಭದಲ್ಲಿ ನಡೆಯುವ ಈ ಸಂಭ್ರಮದ ಧಾರ್ಮಿಕ ಕಾರ್ಯಕ್ರಮ. ಸಾವಿರಾರು ಪುರುಷ,ಮಹಿಳಾ ಭಕ್ತರು ಬೆಟ್ಟ ಹತ್ತಿ ತಾಯಿ ದೇವೀರಮ್ಮ ದರ್ಶನ ಮಾಡಿ ತಮ್ಮ ಹರಕೆ ತೀರಿಸುತ್ತಾರೆ.
ಈ ಸಾಲಿನ ದಿನಾಂಕ ಘೋಷಿಸಿದ ದೇವಸ್ಥಾನ ಆಡಳಿತ ಸಮಿತಿ
ಪ್ರತಿವರ್ಷದಂತೆ ಈ ವರ್ಷವೂ ಕೂಡ ಬೆಟ್ಟದಲ್ಲಿ ನಡೆಯುವ ಧಾರ್ಮಿಕ ಪೂಜೆಗಳು,ಬೆಟ್ಟ ಹತ್ತಲು, ದೀಪೋತ್ಸವಕ್ಕೆ ಸಮಯವನ್ನು ದೇವಸ್ಥಾನದ ಆಡಳಿತ ಸಮಿತಿ ಘೋಷಿಸಿದೆ. ಬೆಟ್ಟ ಹತ್ತಿ ಬರುವ ಭಕ್ತಾಧಿಗಳಿಗೆ ಕೆಲವು ಅಗತ್ಯ ಸೂಚನೆಗಳನ್ನು ತಿಳಿಸಿದೆ. ಇದರಂತೆ ದಿನಾಂಕ 31:10:2024 ರ ಬೆಳಿಗ್ಗಿನ ಜಾವ 4 ಗಂಟೆಯಿಂದ ಮದ್ಯಾಹ್ನ 2 ಗಂಟೆಯವರೆಗೂ ದೇವಿಯ ದರ್ಶನವಿದ್ದು ಸಂಜೆ 7 ಗಂಟೆಗೆ ಬೆಟ್ಟದಲ್ಲಿ ದೀಪೋತ್ಸವ ಆಚರಿಸಲಾಗುತ್ತದೆ ಎಂದು ತಿಳಿಸಿದೆ.
ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ವಸ್ತ್ರ ಸಂಹಿತೆಯನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ ಹಾಗೂ ಸೂಕ್ತ ಮುಂಜಾಗ್ರತಾ ಸುರಕ್ಷಿತ ಕ್ರಮಗಳನ್ನು ವಹಿಸಿ ಬೆಟ್ಟ ಹತ್ತಿ ತಾಯಿ ದರ್ಶನ ಮಾಡುವಂತೆ ತಿಳಿಸಿದೆ.
ಜಿಲ್ಲೆ ಹೊರ ಜಿಲ್ಲೆಯ ಸಾವಿರಾರು ಜನ ಭಕ್ತಾಧಿಗಳು ಬೆಟ್ಟ ಹತ್ತಿ ದರ್ಶನ ಪಡೆಯಲಿದ್ದು ಇದಕ್ಕಾಗಿ ಸಂಬಂಧಪಟ್ಟ ಇಲಾಖೆಗಳಿಂದ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಪ್ಲಾಸ್ಟಿಕ್,ನೀರಿನ ಬಾಟಲಿ ಬೆಟ್ಟದ ಮೇಲೆ ಎಸೆಯದಿರಿ..!
ಸಾವಿರಾರು ಜನ ಸೇರೋ ಈ ಸಂದರ್ಭದಲ್ಲಿ ಸ್ವಚ್ಛ,ಹಸಿರಿನಿಂದ ಪರಿಶುದ್ಧ ಪರಿಸರ, ಗಾಳಿಯಿಂದ ಕೂಡಿದ ಬೆಟ್ಟದ ಮೇಲೆ ಭಕ್ತಾಧಿಗಳು ತೆಗೆದುಕೊಂಡು ಹೋದ ನೀರಿನ ಬಾಟೆಲ್,ತಿಂಡಿ,ತಿನಿಸುಗಳ ಪೊಟ್ಟಣ,ಇನ್ನಿತರ ಕಸಗಳನ್ನು ಬಿಸಾಡಿ ಪ್ರಕೃತಿಯ ಸೌಂದರ್ಯ,ಶುದ್ಧತೆಯನ್ನು ಕೆಡಸದಿರಿ,ಬೆಟ್ಟದ ನೈರ್ಮಲ್ಯತೆಯನ್ನು ಕಾಪಾಡಿ..!! ಇದು ನಮ್ಮೂರ್ ಎಕ್ಸ್ಪ್ರೆಸ್ ಕಳಕಳಿ..