ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಂಘಕ್ಕೆ ಪೃಥ್ವಿರಾಜ್ ಕೌರಿ!
– ಯುವ ಉದ್ಯಮಿಯಾಗಿ, ಕೊಪ್ಪ ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಸೇವೆ
– ಸಮಸ್ತ ಬಾಂಧವರಿಗೆ ಪೃಥ್ವಿರಾಜ್ ಕೌರಿ ಧನ್ಯವಾದ ಅರ್ಪಣೆ
NAMMUR EXPRESS NEWS
ಕೊಪ್ಪ: ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಯುವ ನಾಯಕರು, ಸಂಘಟಕರು ಆದ ಪೃಥ್ವಿರಾಜ್ ಕೌರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಯುವ ಉದ್ಯಮಿಯಾಗಿ ಅನೇಕ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಪೃಥ್ವಿರಾಜ್ ಅವರು ಕೊಪ್ಪ ತಾಲೂಕಿನಲ್ಲಿ ಸದ್ದಿಲ್ಲದೇ ತಮ್ಮ ಸೇವೆಯಲ್ಲಿದ್ದು ಇದೀಗ ಜಿಲ್ಲಾ ಮಟ್ಟದಲ್ಲಿ ಮಹತ್ವದ ಹುದ್ದೆ ಲಭಿಸಿದೆ. ಪೃಥ್ವಿರಾಜ್ ಅವರು ಒಕ್ಕಲಿಗ ಸಮುದಾಯದ ನಾಯಕರು, ಪ್ರಗತಿ ಪರ ಕೃಷಿಕರು, ದಾನಿಗಳೂ ಆದ ಕೌರಿ ಪ್ರಕಾಶ್ ಪುತ್ರ. ಅವರ ಸ್ನೇಹಿತರು, ಕೊಪ್ಪ ಒಕ್ಕಲಿಗರ ಸಂಘ, ಒಕ್ಕಲಿಗ ಯುವ ವೇದಿಕೆ ಸೇರಿ ಸಂಘ ಸಂಸ್ಥೆಗಳು ಶುಭ ಕೋರಿದ್ದಾರೆ.
ಸಮಸ್ತ ಬಾಂಧವರಿಗೆ ಪೃಥ್ವಿರಾಜ್ ಕೌರಿ ಧನ್ಯವಾದ ಅರ್ಪಣೆ
ನನ್ನೆಲ್ಲಾ ಸ್ನೇಹಿತರೆ, ಹಿತೈಷಿಗಳೇ. ಕಾಲಭೈರವನ ಕೃಪೆ, ಹಾಗೂ ಪರಮಪೂಜ್ಯ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಹಾಗೂ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದಿಂದ ಮತ್ತು ನಿಮ್ಮೆಲ್ಲರ ಹಾರೈಕೆಯಿಂದ ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಕೊಪ್ಪ ತಾಲ್ಲೂಕಿನ ಸಾಮಾನ್ಯ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ನಿಮ್ಮೆಲ್ಲರ ಸಲಹೆ, ಸಹಕಾರ ನಿರಂತರವಾಗಿ ಇರಲಿ ಎಂದು ಪೃಥ್ವಿರಾಜ್ ಕೌರಿ ಧನ್ಯವಾದ ಅರ್ಪಿಸಿದ್ದಾರೆ.