ಕಾಫಿ ನಾಡಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ
– ವಕ್ಫ್ ಕಾಯ್ದೆ ನಿಯಮಗಳನ್ನು ಬದಲಾವಣೆಗೆ ಪಟ್ಟು
– ಚಿಕ್ಕಮಗಳೂರು, ಶೃಂಗೇರಿ, ಎನ್.ಆರ್ ಪುರದಲ್ಲಿ ಪ್ರತಿಭಟನೆ
NAMMUR EXPRESS NEWS
ಶೃಂಗೇರಿ: ವಕ್ಫ್ ಕಾಯ್ದೆ ನಿಯಮಗಳನ್ನು ಬದಲಾವಣೆ ಮಾಡಬೇಕು ಎಂದು ಅಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲಾ ತಾಲೂಕಲ್ಲಿ ಬಿಜೆಪಿ ಪ್ರತಿಭಟನೆ ಮಾಡಿತು. ಉತಾರೆಗಳಲ್ಲಿ ವಕ್ಫ್ ಹೆಸರನ್ನು ತೆಗೆದು ರೈತರ ಹೆಸರನ್ನು ಹಾಕಬೇಕು, ಉತಾರೆಯ ಯಾವುದೇ ಕಾಲಂ ನಲ್ಲಿ ವಕ್ಫ್ ಹೆಸರು ಇರಬಾರದು, ಆಸ್ತಿಗಳಿಗೆ ಸಂಬಂಧಿಸಿದ ವ್ಯಾಜ್ಯಗಳು ನ್ಯಾಯಾಲಯದಲ್ಲಿ ಮಾತ್ರ ವಿಚಾರಣೆಯಾಗಬೇಕು.1974 ರ ವಕ್ಫ್ ಗೆಜೆಟ್ ನೋಟಿಫಿಕೇಶನ್ ಅನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ರದ್ದುಗೊಳಿಸಬೇಕು.ಕೇಂದ್ರ ಸಂಸ್ಕೃತಿ ಇಲಾಖೆ ಹಾಗೂ ಪುರಾತತ್ವ ಇಲಾಖೆಯ ಒಡೆತನ/ನಿರ್ವಹಣೆಯಲ್ಲಿರುವ ಸ್ಮಾರಕಗಳ ದಾಖಲಾತಿ/ಪಹಣಿಯಲ್ಲಿ ವಕ್ಫ್ ಹೆಸರು ಇರಬಾರದು. ಮಠಗಳಿಗೆ, ದೇವಸ್ಥಾನಗಳಿಗೆ, ಶಾಲಾ ಕಾಲೇಜುಗಳಿಗೆ, ಸರ್ಕಾರಿ ಕಚೇರಿಗಳಿಗೆ ನೀಡಿರುವ ನೋಟೀಸನ್ನು ಸಹ ವಾಪಾಸ್ ಪಡೆಯಬೇಕು ಎಂದು ಅಗ್ರಹಿಸಲಾಯಿತು.