ಮಲೆನಾಡಲ್ಲಿ ಹೆಚ್ಚಾಯ್ತು ರಸ್ತೆ ಅಪಘಾತ!
– ಶೃಂಗೇರಿಯಲ್ಲಿ ಭೀಕರ ರಸ್ತೆ ಅಪಘಾತ: ಒಬ್ಬ ಮಹಿಳೆ ಸ್ಥಳದಲ್ಲೇ ಸಾವು: ಸಾಗರದಲ್ಲಿ ಅಪಘಾತಕ್ಕೆ ಇಬ್ಬರು ಬಲಿ
– ತೀರ್ಥಹಳ್ಳಿಯ ಆರಗ, ಕುಡುಮಲ್ಲಿಗೆಯಲ್ಲೂ ಅಪಘಾತ
NAMMUR EXPRESS NEWS
ಶೃಂಗೇರಿ/ ತೀರ್ಥಹಳ್ಳಿ/ ಸಾಗರ: ಶೃಂಗೇರಿ ತಾಲೂಕಿನ ಶಿಡ್ಲೆ ಬಳಿ ಟಿಟಿ ಹಾಗೂ ಕಾರ್ ನಡುವೆ ಭೀಕರ ಅಪಘಾತ ಸಂಭವಿಸಿ ಒಬ್ಬ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಧರ್ಮಪುರಿ ಮೂಲದ ಭುವನ (65) ಸ್ಥಳದಲ್ಲೇ ಸಾವ್ನಪ್ಪಿರುವ ಮಹಿಳೆ. ಇನ್ನು ಇಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ. ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು. ತಮಿಳುನಾಡಿನಿಂದ ಶೃಂಗೇರಿಗೆ ಆಗಮಿಸಿ ದೇವರ ದರ್ಶನ ಪಡೆದು ಹಿಂತಿರುಗುವಾಗ ಈ ಘಟನೆ ನಡೆದಿದೆ.
ಸಾಗರದಲ್ಲಿ ಅಪಘಾತಕ್ಕೆ ಇಬ್ಬರು ಬಲಿ!
ಸಾಗರ : ಕಾರು ಮತ್ತು ಬಸ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಗರ ತಾಲೂಕು ಆನಂದಪುರದ ಮುರುಘಮಠದ ಸಮೀಪ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ. ಕಾರು ಸಾಗರದಿಂದ ಶಿವಮೊಗ್ಗ ಕಡೆಗೆ ತೆರಳುತ್ತಿತ್ತು. ಬಸ ಶಿವಮೊಗ್ಗದಿಂದ ಸಾಗರ ಕಡೆಗೆ ತೆರಳುತ್ತಿತ್ತು. ಇಬ್ಬರು ಮೃತಪಟ್ಟಿದ್ದು ಅವರ ಗುರುತು ಇನ್ನಷ್ಟೆ ಪತ್ತೆ ಆಗಬೇಕಿದೆ ಸ್ಥಳಕ್ಕೆ ಆನಂದಪುರ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.
ತೀರ್ಥಹಳ್ಳಿಯಲ್ಲಿ ಎರಡು ಕಾರು ಮುಖಾಮುಖಿ ಡಿಕ್ಕಿ!
ಆರಗದಿಂದ ಸಾಗರ ಹೋಗುವ ರಸ್ತೆಯಲ್ಲಿ ಎರಡು ಕಾರುಗಳ ನಡುವೆ ಮಖಾಮುಖಿ ಡಿಕ್ಕಿಯಾಗಿದ್ದು ಭೀಕರ ಅಪಘಾತ ಆಗಿದೆ. ಆದರೆ ಎರಡು ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎರಡು ಕಾರುಗಳು ನಜ್ಜುಗುಜ್ಜಾಗಿದೆ. ಕುಡುಮಲ್ಲಿಗೆಯಲ್ಲಿ ಆಂಬುಲೆನ್ಸ್ ಪಲ್ಟಿ!: ಕುಡುಮಲ್ಲಿಗೆಯಲ್ಲಿ ಶುಕ್ರವಾರ ರಾತ್ರಿ ಆಂಬುಲೆನ್ಸ್ ಪಲ್ಟಿ ಆಗಿದ್ದು, ಮಧ್ಯ ರಸ್ತೆಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಆಗಿತ್ತು.