ಶೃಂಗೇರಿ ಶ್ರೀಶಾರದೆಗೆ ತೆಪ್ಪೋತ್ಸವ ಶಾರದಾ ಶರನ್ನವರಾತ್ರಿಗೆ ತೆರೆ..!!
* ಹುಣ್ಣಿಮೆಯಂದು ಶ್ರೀಶಾರದೆಗೆ ಅಭಿಷೇಕ
* ಏಕನಾರೀಕಿಳ ಗಣಹೋಮ ಪೂರ್ಣಾಹುತಿ,ತೆಪ್ಪೋತ್ಸವ
* ಜಗದ್ಗುರು ವಿದುಶೇಖರ ಭಾರತೀತೀರ್ಥ ಮಹಾಸ್ವಾಮಿಗಳು ಭಾಗಿ
NAMMUR EXPRESS NEWS
ಶೃಂಗೇರಿ: ದಸರಾ ಹುಣ್ಣಿಮೆಯಂದು ಶೃಂಗೇರಿ ಶ್ರೀಶಾರದಾ ಪೀಠದಲ್ಲಿ ಬೆಳಿಗ್ಗೆ ತಾಯಿ ಶಾರದೆಗೆ ಅಭೀಷೇಕ ನೆರವೇರಿದ್ದು,ನಂತರ ಮಠದ ಆವರಣದಲ್ಲಿ ನಡೆಯುತ್ತಿದ್ದ ಏಕನಾರೀಕಿಳ ಗಣಹೋಮದ ಪೂರ್ಣಾಹುತಿ ನೆರವೇರಿತು. ರಾತ್ರಿ ಹೂ ಮತ್ತು ವಿದ್ಯುತ್ ದೀಪಗಳಿಂದ ಅಲಂಕಾರಗೊಂಡ ಸುಂರ ತೆಪ್ಪದಲ್ಲಿ ತುಂಗಾನದಿಯಲ್ಲಿ ಶಾರದೆಗೆ ತೆಪ್ಪೋತ್ಸವ ನೆರವೇರಿತು. ಈ ಎಲ್ಲಾ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀಶ್ರೀವಿಧುಶೇಖರ ಭಾರತೀ ತೀರ್ಥ ಮಹಾಸ್ವಾಮಿಗಳು ಪಾಲ್ಗೊಂಡರು. ಈ ಮೂಲಕ ಶೃಂಗೇರಿ ಶ್ರೀಶಾರದಾಶರನ್ನವರಾತ್ರಿ ತೆರೆ ಕಂಡಿತು.ನೂರಾರು ಜನ ಭಕ್ತಾಧಿಗಳು ಪಾಲ್ಗೊಂಡು ಕಣ್ತುಂಬಿಕೊಂಡರು.