ಶೃಂಗೇರಿ: ಬೇಗಾರು ಸೊಸೈಟಿಗೆ ಜಿಲ್ಲೆಯ ಉತ್ತಮ ಸೊಸೈಟಿ ಪ್ರಶಸ್ತಿ
* ಚಿಕ್ಕಮಗಳೂರಿನಲ್ಲಿ ನಡೆದ 71 ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ
* ಶೃಂಗೇರಿ ತಾಲೂಕಿನ ಬೇಗಾರಿನಲ್ಲಿರುವ ಸಹಕಾರಿ ಸಂಘ
NAMMUR EXPRESS NEWS
ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಉತ್ತಮ ಸಹಕಾರ ಸಂಘ ಪ್ರಶಸ್ತಿಗೆ ಶೃಂಗೇರಿ ತಾಲೂಕಿನ ಬೇಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆಯ್ಕೆಯಾಗಿದೆ.
ಚಿಕ್ಕಮಗಳೂರಿನ ಒಕ್ಕಲಿಗರ ಭವನದಲ್ಲಿ ನಡೆದ 71 ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಹಕಾರ ಸಂಘದ ಪರವಾಗಿ ಸಂಘದ ನಿರ್ದೇಶಕರಾದ ರವಿಚಂದ್ರನ್ ಅಕ್ಷಲ್ಕೊಡಿಗೆ ಮತ್ತು ಕಾರ್ಯದರ್ಶಿಗಳಾದ ರಾಜೇಂದ್ರ ಅವರು ಪ್ರಶಸ್ತಿ ಸ್ವೀಕರಿಸಿದರು. ಸಂಘದ ಈ ಸಾಧನೆಗೆ ಎಲ್ಲೆಡೆಯಿಂದ ಅಭಿನಂದನೆಗಳು ವ್ಯಕ್ತವಾಗಿದೆ.