ಶೃಂಗೇರಿ ಶಾಸಕ ರಾಜೇಗೌಡರಿಗೆ ಸುಪ್ರೀಂ ಕೋರ್ಟಿನಲ್ಲೂ ಹಿನ್ನಡೆ!
* ಜೀವರಾಜ್ ಸಲ್ಲಿಸಿದ್ದ ಅರ್ಜಿ ಅಮಾನ್ಯ ಮಾಡಬೇಕೆಂದು ಸಲ್ಲಿಸಿದ್ದ ಅರ್ಜಿ ತಿರಸ್ಕಾರ
* ರಾಜೇಗೌಡ ಚುನಾವಣೆಯಲ್ಲಿ ಗೆದ್ದಿದ್ದು ಅಕ್ರಮ ಎಂಬ ಅರ್ಜಿ
NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಕರ್ನಾಟಕ ಹೈ ಕೋರ್ಟ್ನಲ್ಲಿ ಮಾಜಿ ಶಾಸಕ ಜೀವರಾಜ್ ಸಲ್ಲಿಸಿದ್ದ ಚುನಾವಣೆ ಅರ್ಜಿಯನ್ನು ಅಮಾನ್ಯ ಮಾಡಬೇಕೆಂದು ಶಾಸಕ ಟಿ.ಡಿ ರಾಜೇಗೌಡ ಅರ್ಜಿ ಸಲ್ಲಿಸಿದ್ದರು ಇದನ್ನು ಕರ್ನಾಟಕ ಹೈ ಕೋರ್ಟ್ ವಜಾಗೊಳಿಸಿಗಿತ್ತು. ಇದನ್ನು ಪ್ರಶ್ನಿಸಿ ಶಾಸಕ ಟಿ.ಡಿ ರಾಜೇಗೌಡ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಈಗ ಅದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ ಅಂಚೆ ಮತಗಳ ತಿರಸ್ಕಾರ ಕಾನೂನು ಬಾಹಿರ ಎಂಬ ಜೀವರಾಜ್ವಾದ ಸಮ್ಮತವಾದದ್ದು ಮತ್ತು ಮತಗಳ ಮರು ಏಣಿಕೆ, ಮಾನ ಹಾನಿಗೆ ಸಂಬಂಧಿಸಿದ ಭಾಷಣ,ಸಾಮಾಜಿಕ ಜಾಲತಾಣಗಳ ಪೋಸ್ಟರ್,ಚುನಾವಣೆ ಅಫಿಡವಿಟ್ನಲ್ಲಿ ಸುಳ್ಳು ಆಸ್ತಿ ಮಾಹಿತಿ ಮತ್ತು ಚುನಾವಣಾ ಅಕ್ರಮಗಳ ಕುರಿತಾದ ಜೀವರಾಜ್ರವರ ವಾದ ಸಾಕ್ಷಿ ಅಂಶಗಳ ಮೇಲೆ ಇತ್ಯರ್ಥವಾಗಬೇಕು ಮತ್ತು ಸಾಕ್ಷಿ ಅಂಶಗಳನ್ನ ಅಂಗೀಕರಿಸುವ ವಿಷಯ,ವಾದ ಆಲಿಸಿದ ನಂತರ ಉಚ್ಚ ನ್ಯಾಯಾಲಯ ನಿರ್ಧರಿಸಬೇಕು ಎಂದು ತೀರ್ಪು ನೀಡಿದೆ.
ಇದರಿಂದಾಗಿ ಚುನಾವಣಾ ಅರ್ಜಿಯ ಸಂಪೂರ್ಣ ಟ್ರಯಲ್ ನಡೆಯಲಿದ್ದು ಶಾಸಕ ಟಿ.ಡಿ ರಾಜೇಗೌಡ ಅದನ್ನು ಎದುರಿಸಬೇಕಾಗಿದೆ.
ಶಾಸಕ ಟಿ.ಡಿ ರಾಜೇಗೌಡ ಪರ ಹಿರಿಯ ವಕೀಲರಾದ ಅಭಿಷೇಕ್ ಸಿಂಗ್ವಿ ಮತ್ತು ಸಂಜಯ್ ನುಲಿ ವಾದಿಸಿದರು, ಮಾಜಿ ಶಾಸಕ ಜೀವರಾಜ್ ಪರ ಹಿರಿಯ ವಕೀಲರಾದ ಮೀನಾಕ್ಷಿ ಅರೋರ ಮತ್ತು ಎಂ ಎಸ್ ಶ್ಯಾಂಸುಂದರ್ ವಾದ ಮಂಡಿಸಿದರು.
ಮಾಜಿ ಶಾಸಕ ಜೀವರಾಜ್ ತಮ್ಮ ಅರ್ಜಿಯಲ್ಲಿ ರಾಜೇಗೌಡರ ಗೆಲುವು ಅಕ್ರಮಗಳಿಂದ ಪಡೆದದ್ದು, ಚುನಾವಣಾ ಅಧಿಕಾರಿಗಳೂ ಸಹ ಮತ ಪರಿಗಣನೆ ಸಂಬಂಧ ತಪ್ಪು ಮಾಡಿದ್ದಾರೆ,ಚುನಾವಣೆ ಸಂದರ್ಭದಲ್ಲಿ ಮಾನ ಹಾನಿ ಭಾಷಣ, ಮಾನ ಹಾನಿ ಪೋಸ್ಟರ್ಗಳು ಹಾಗೂ ಚುನಾವಣೆ ಅಫಿಡವಿಟ್ನಲ್ಲಿ ಸುಳ್ಳು ಆಸ್ತಿ ಮಾಹಿತಿ ನೀಡಿದ್ದಾರೆ ಹಾಗಾಗಿ ಕೇವಲ 200 ಮತಗಳ ಗೆಲುವು ತಪ್ಪಾದದ್ದು ಎಂದು ದೂರಿದ್ದಾರೆ .