ಶಾಸಕ ರಾಜೇಗೌಡಗೆ ಸುಪ್ರೀಂ ಕೋರ್ಟ್ನಲ್ಲಿ ಮತ್ತೆ ಹಿನ್ನಡೆ..!!
– ಚುನಾವಣಾ ಏಣಿಕೆ ಕುರಿತ ಅರ್ಜಿ ವಜಾ ಮಾಡುವಂತೆ ಸಲ್ಲಿಸಿದ್ದ ಅರ್ಜಿ
– ಮಾಜಿ ಶಾಸಕ ಜೀವರಾಜ್ ಸಲ್ಲಿಸಿದ ಅರ್ಜಿ ವಿಚಾರಣೆಯಾಗಬೇಕು – ಸುಪ್ರೀಂ ಕೋರ್ಟ್
– ಮಾಜಿ ಶಾಸಕ ಜೀವರಾಜ್ ಸಲ್ಲಿಸಿದ ಅರ್ಜಿ ಪುರಸ್ಕೃತ
NAMMUR EXPRESS NEWS
ಎನ್.ಆರ್.ಪುರ: ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ಮಾಜಿ ಶಾಸಕ ಡಿ.ಎನ್ ಜೀವರಾಜ್ ಕರ್ನಾಟಕ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಚುನಾವಣಾ ಅರ್ಜಿಯನ್ನು ವಜಾ ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯು ತಿರಸ್ಕೃತಗೊಂಡಿದೆ. ಈ ಮೂಲಕ ಶಾಸಕ ರಾಜೇಗೌಡರಿಗೆ ತೀವ್ರ ಹಿನ್ನಡೆಯಾಡಿದೆ. ಈ ಹಿಂದೆ ಕೂಡ ಕರ್ನಾಟಕ ಹೈಕೋರ್ಟ್ನಲ್ಲಿ ಮಾಜಿ ಶಾಸಕ ಜೀವರಾಜ್ ಸಲ್ಲಿಸಸಿದ್ದ ಚುನಾವಣೆ ಅರ್ಜಿಯನ್ನು ವಜಾ ಮಾಡಬೇಕೆಂದು ಶಾಸಕ ರಾಜೇಗೌಡ ಅವರು ಮೊದಲ ಬಾರಿ ಕೋರಿದ್ದ ಅರ್ಜಿ ಕೂಡ ಹೈ ಕೋರ್ಟ್ ತಿರಸ್ಕರಿಸಿ ವಜಾಗೊಳಿಸಿತ್ತು. ಇದನ್ನು ಮತ್ತೆ ಪ್ರಶ್ನಿಸಿ ಶಾಸಕ ರಾಜೇಗೌಡ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅಂದು ಪ್ರಸಿದ್ಧ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಗ್ವಿ ಮತ್ತು ಕಪಿಲ್ ಸಿಬಲ್ರವರು ಶಾಸಕ ರಾಜೇಗೌಡ ಪರ ವಾದ ಮಂಡಿಸಿ ಹಿನ್ನಡೆ ಅನುಭವಿಸಿದ್ದರು.
ನಂತರ ಶಾಸಕ ರಾಜೇಗೌಡ ಕರ್ನಾಟಕ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ Striking of Pleading ಅರ್ಜಿಯನ್ನ ಕೂಡ 29/11/2024 ರಂದು ಉಚ್ಚನ್ಯಾಯಲಯವು ಎರಡನೇ ಬಾರಿಗೆ ವಜಾ ಮಾಡಿತ್ತು. ಪುನಃ ಶೃಂಗೇರಿ ಶಾಸಕ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇಂದು ಸುಪ್ರೀಂ ಕೋರ್ಟ್ ಮತ್ತೆ ಈ ಅರ್ಜಿಯನ್ನು ಬಾರಿಗೆ ವಜಾ ಮಾಡಿ ಡಿ.ಎನ್ ಜೀವರಾಜ್ ಸಲ್ಲಿಸಸಿದ್ದ ಚುನಾವಣೆ ಅರ್ಜಿ ತನಿಖೆಯಾಗಬೇಕು ಎಂದು ತೀರ್ಪು ನೀಡಿದೆ. ಇಂದು ಪ್ರಸಿದ್ಧ ಹಿರಿಯ ವಕೀಲರಾದ ಶಾಮ್ ದಿವನ್ ಮತ್ತು ದೇವದತ್ತ್ ಕಾಮತ್ ರವರುಗಳು ಶಾಸಕ ರಾಜೇಗೌಡ ಪರ ವಾದ ಮಂಡಿಸಿ ಹಿನ್ನಡೆ ಅನುಭವಿಸಿದ್ದಾರೆ. ಈ ಮೂಲಕ ಡಿ.ಎನ್ ಜೀವರಾಜ್ಗೆ ನ್ಯಾಯಾಂಗ ಹೋರಾಟದಲ್ಲಿ ಮತ್ತೊಂದು ಜಯ ಲಭಿಸಿದಂತಾಗಿದೆ.