ಹೊರನಾಡಲ್ಲೂ ವಸ್ತ್ರ ಸಂಹಿತೆ ಜಾರಿಯಾಯ್ತು!
– ದೇವರ ದರ್ಶನ ಪಡೆಯಲು ಸಾಂಪ್ರದಾಯಿಕ ಉಡುಪು ಕಡ್ಡಾಯ
– ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಹೆಂಗಸರು ಮಾತ್ರವಲ್ಲದೇ ಗಂಡಸರಿಗೂ ಹೊಸ ನಿಯಮ
NAMMUR EXPRESS NEWS
ಹೊರನಾಡು: ಹಿಂದೂ ದೇವಾಲಯಕ್ಕೆ ಭೇಟಿ ನೀಡಿದಾಗ, ಸಾಧಾರಣವಾದ, ಸಂಪ್ರದಾಯಯಿಕ ಬಟ್ಟೆಗಳನ್ನು ಧರಿಸುವುದು ಉತ್ತಮವಾಗಿರುತ್ತದೆ. ಹೀಗಾಗಿ ಈಗಾಗಲೇ ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ಬಂದಿದೆ. ಶೃಂಗೇರಿ ಬಳಿಕ ಈಗ ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ದೇವಾಲಯ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಕೂಡ ವಸ್ತ್ರ ಸಂಹಿತೆ ಜಾರಿಗೆ ಬಂದಿದೆ.
ಯಾವ ಯಾವ ಬಟ್ಟೆ ಹಾಕಬೇಕು?
ಗಂಡಸರು-ಗಂಡು ಮಕ್ಕಳು ಶಲ್ಯ, ಪ್ಯಾಂಟ್, ಪಂಚೆ ಹಾಗೂ ಹೆಂಗಸರು, ಹೆಣ್ಣು-ಮಕ್ಕಳು ಸೀರೆ ಹಾಗೂ ಚೂಡಿದಾರ್ ಗಳಂತಹ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿಕೊಂಡು ಬರುವವರಿಗೆ ಮಾತ್ರ ದೇವಸ್ಥಾನದ ಒಳಗೆ ಹೋಗಿ ಶ್ರೀದೇವರ ದರ್ಶನ ಮಾಡಲು ಅವಕಾಶವಿರುತ್ತದೆ ಎಂದು ಹಾಗೂ ಇವುಗಳನ್ನು ಅನುಸರಿಸಬೇಕಾಗಿ ಆದಿಶಕ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರ ದೇವಸ್ಥಾನ ಶ್ರೀ ್ಷೇ್ರ ಹೊರನಾಡು ದೇವಾಲಯದಲ್ಲಿ ವಿಜ್ಞಾಪನೆ ಮಾಡಿದ್ದಾರೆ. ಭಕ್ತಾದಿಗಳು ತಪ್ಪದೇ ನಿಯಮ ಪಾಲಿಸಬೇಕಾಗಿ ಈ ಮೂಲಕ ವಿನಂತಿಸಲಾಗಿದೆ.