ಗದ್ದೆ ನಾಟಿ ಕೆಲಸ ಮುಗಿಸಿ ನಿರಾಳರಾಗಿದ್ದ ರೈತರಿಗೆ ನಿದ್ದೆಗೆಡುಸುತ್ತಿವೆ ಕಾಡುಕೋಣ..!!
*ಮಲೆನಾಡಿನಲ್ಲಿ ಜಮೀನಿಗೆ ನುಗ್ಗಿ ಕಾಡುಕೋಣಗಳ ದಾಂಧಲೆ
*ಸುಮಾರು ಎರಡು ಎಕರೆ ಭತ್ತದ ಬೆಳೆ ನಾಶ..!!
NAMMUR EXPRESS NEWS
ಚಿಕ್ಕಮಗಳೂರು: ತಾಲೂಕಿನ ಸಂಗಮೇಶ್ವರ ಪೇಟೆ ಬಳಿಯ ಗೋರಿಗಂಡಿಯ ಬಳಿ ನಾಟಿಯಾಗಿ ಚೆನ್ನಾಗಿ ಬೆಳೆಯುತ್ತಿದ್ದ ಗದ್ದೆಗೆ ಕಾಡುಕೋಣಗಳ ಹಿಂಡು ನುಗ್ಗಿ ಮಾಡಿ ಸುಮಾರು ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಬೆಳೆ ನಾಶ ಮಾಡಿದೆ.
ಗೋರಿಗಂಡಿಯ ದಿನೇಶ್ ಹಾಗೂ ದುಗ್ಗಯ್ಯ ಎಂಬ ರೈತರು ತಮ್ಮ ಜೀವನೋಪಾಯಕ್ಕಾಗಿ ಸುಮಾರು ಎರಡು ಎಕರೆ ಜಮೀನಿನಲ್ಲಿ ಭತ್ತ ನಾಟಿ ಮಾಡಿದ್ದರು. ನಾಟಿಯಾದ ಬೆಳೆಗೆ ಚೆನ್ನಾಗಿ ಕಷ್ಟ ಪಟ್ಟು ಗೊಬ್ಬರ,ನೀರುಗಳ ವ್ಯವಸ್ಥೆ ಮಾಡಿ ಬೆಳೆ ಚೆನ್ನಾಗಿ ಬಂದಿತ್ತು. ಇದನ್ನು ಕಂಡ ರೈತರ ಮೊಗದಲ್ಲಿ ಈ ವರ್ಷದ ಫಸಲು ಚೆನ್ನಾಗಿ ಬರುವ ಕನಸು ಕಟ್ಟಿತ್ತು. ಆದರೆ ಕಳೆದ ಹತ್ತು ದಿನಗಳಿಂದ ನಿರಂತರ ಜಮೀನಿಗೆ ನುಗ್ಗಿದ ಕಾಡುಕೋಣಗಳ ಹಿಂಡು ಬೆಳೆದ ಬೆಳೆಯನ್ನು ಸಂಪೂರ್ಣ ನಾಶ ಮಾಡಿವೆ. ಈ ಮೂಲಕ ರೈತನ ಕನಸಿಗೆ ತಣ್ಣೀರೆರಚಿದೆ. ಸಾಲ ಮಾಡಿ ನಾಟಿ ಮಾಡಿದ ರೈತ ಈಗ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಒಂದೆಡೆ ಒತ್ತುವರಿ ತೆರವು ಮಾಡುತ್ತಿರುವ ಅರಣ್ಯಾಧಿಕಾರಿಗಳು ಇನ್ನೊಂದೆಡೆ ಇರುವ ಅಲ್ಪಸ್ವಲ್ಪ ಜಮೀನನಲ್ಲಿ ಬೆಳೆದ ಬೆಳೆಗೂ ಈ ರೀತಿ ಕಾಡು ಪ್ರಾಣಿಗಳ ದಾಳಿಯಾಗುತ್ತಿರುವುದನ್ನು ಅರಣ್ಯ ಇಲಾಖೆ ಗಮನಹರಿಸದೇ ಕಾಡುಪ್ರಾಣಿಗಳ ದಾಳಿಯಿಂದ ರೈತರ ಬೆಳೆಯನ್ನು ರಕ್ಷಣೆ ಮಾಡದಿರುವ ಬೇಜವಾಬ್ದಾರಿ ನಡೆಗೆ ಆ ಭಾಗದ ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಪ ಇಲಾಖೆ,ಸರ್ಕಾರ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕಾಗಿದೆ.