ಪದೇ ಪದೇ ಕಾಡಾನೆ ಪ್ರತ್ಯಕ್ಷ ಕಣ್ಮುಚ್ಚಿ ಕುಳಿತ ಅರಣ್ಯ ಇಲಾಖೆ..!??
– ಗ್ರಾಮಸ್ಥರಿಗೆ,ಪ್ರಯಾಣಿಕರಿಗೆ ಕಾಣಿಸೋ ಕಾಡಾನೆ ಅರಣ್ಯ ಇಲಾಖೆ ಕಣ್ಣಿಗೆ ಬೀಳ್ತಿಲ್ವಾ..?
– ಅಧಿಕಾರಿಗಳೇ, ಜನಪ್ರತಿನಿಧಿಗಳೇ ಯಾರ ಜೀವದೊಂದಿಗೆ ಚೆಲ್ಲಾಟ
NAMMUR EXPRESS NEWS
ಎನ್.ಆರ್.ಪುರ: ಮಲೆನಾಡಿನಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು,ಇಲಾಖೆ ನಿದ್ದೆಗೆ ಜಾರಿದಂತೆ ಕಾಣುತ್ತಿದೆ.
ಹೌದು ಕೆಲವು ದಿನಗಳ ಹಿಂದಷ್ಟೇ ತಾಲೂಕಿನ ಸೀತೂರಿನಲ್ಲಿ ಹಾಗೂ ಮುತ್ತಿನಕೊಪ್ಪದಲ್ಲಿ ಎರಡು ಜೀವವನ್ನು ಬಲಿ ಪಡೆದ ಕಾಡಾನೆ ಈಗ ತಾಲೂಕಿನ ಆರಂಬಳ್ಳಿ ಮುಖ್ಯ ರಸ್ತೆಯ ಮೂಲೆಗದ್ದೆಯಲ್ಲಿ ಕಾಣಿಸಿಕೊಂಡಿದೆ. ಇದೇ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಆಟೋ ಚಾಲಕರೊಬ್ಬರಿಗೆ ರಸ್ತೆ ಮಧ್ಯದಲ್ಲಿ ಕಾಣಿಸಿದ ಕಾಡಾನೆ ಕಂಡು ಭಯಗೊಂಡಿದ್ದಾರೆ. ತಕ್ಷಣವೇ ತಮ್ಮ ಮೊಬೈಲ್ನಲ್ಲಿ ವೀಡಿಯೋ ಮಾಡಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಈ ಕಾಡು ಪ್ರಾಣಿಗಳಿಂದ ಗ್ರಾಮಸ್ಥರು ದಿನವು ಭಯದಲ್ಲೇ ಜೀವನ ನಡೆಸಬೇಕಾಗಿದೆ.
ಗ್ರಾಮಸ್ಥರಿಗೆ,ಸಾರ್ವಜನಿಕರಿಗೆ ಕಾಣೋ ಕಾಡಾನೆ ಅರಣ್ಯ ಇಲಾಖೆಗೆ ಕಾಣ್ತಿಲ್ಲ ಯಾಕೆ..!!???
ತಾಲೂಕಿನ ಸೀತೂರಿನಲ್ಲಿ ಉಮೇಶ್ ಎಂಬುವರನ್ನು ಬಲಿಪಡೆದು ಇಪ್ಪತ್ತು ದಿನಗಳೊಳಗೆ ಮುತ್ತಿನಕೊಪ್ಪದಲ್ಲಿ ಎಂಬುವವರನ್ನು ಬಲಿಪಡೆದಿದ್ದ ಆನೆ ಹತ್ತು ದಿನಗಳೊಳಗೆ ತಾಲೂಕಿನ ಮೂಲೆಗದ್ದೆ ಎಂಬಲ್ಲಿ ಕಾಣಿಸಿಕೊಂಡಿದೆ. ಪ್ರತಿಬಾರಿಯು ಕಾಡಾನೆಯು ಸಾರ್ವಜನಿಕರಿಗೆ ಕಾಣಿಸುತ್ತಿದೆ ಮಾಹಿತಿ ಇದ್ದರೂ ಅರಣ್ಯ ಇಲಾಖೆಗೆ ಕಾಣಿಸುತ್ತಿಲ್ಲವೇಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಲು ಪ್ರಾರಂಭಿಸಿದೆ. ಮೊದಲ ಘಟನೆ ನಡೆದು ತಿಂಗಳಾದರೂ ಕಾಡನೇ ಅದೇ ತಾಲೂಕಿನ ವ್ಯಾಪ್ತಿಯಲ್ಲಿದ್ದರೂ ಕೂಡ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಆನೆಯನ್ನು ಸೆರೆಹಿಡಿಯಲು ಮುಂದಾಗದೇ ಇರುವುದು ಇವರೆಲ್ಲ ಯಾರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂಬ ಅನುಮಾನ ಜನರಲ್ಲಿ ಮನೆಮಾಡಿದೆ. ಒಂದೆಡೆ ಅರಣ್ಯ ಹಾಗೂ ಕಾಡು ಪ್ರಾಣಿಗಳನ್ನು ರಕ್ಷಿಸಿ ಎಂದು ಹೇಳುತ್ತಿರುವ ಸರ್ಕಾರ,ಇಲಾಖೆ,ಅಧಿಕಾರಗಳು ಸಾಮಾನ್ಯ ಜನರ,ರೈತರ ಜೀವ,ಜೀವನಕ್ಕೆ ಬೆಲೆಯೇ ಇಲ್ಲವೆಂಬಂತೆ ವರ್ತಿಸುತ್ತಿರುವುದು ಆತಂಕದ ಸಂಗತಿಯಾಗಿದೆ.