ಮಾಜಿ ಸಚಿವ ಜೀವರಾಜ್ ವಿರುದ್ಧ ಆತ್ಯಾಚಾರ ಆರೋಪ ಮಾಡಿದ್ದ ಮಹಿಳೆಗೆ ಶಿಕ್ಷೆ!
– ಎನ್.ಆರ್ಪುರ ನ್ಯಾಯಾಲಯ ಆದೇಶ
– ಏನಿದು ಜೀವರಾಜ್ ಮೇಲಿದ್ದ ಕೇಸ್..?
NAMMUR EXPRESS NEWS
ನರಸಿಂಹರಾಜಪುರ: ಮಾಜಿ ಸಚಿವ, ಬಿಜೆಪಿ ಮುಖಂಡ ಡಿ.ಎನ್ ಜೀವರಾಜ್ ವಿರುದ್ಧ 2013ರಲ್ಲಿ ದಾಖಲಾಗಿದ್ದ ಆತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವರಾಜ್ ವಿರುದ್ಧ ಆರೋಪ ಮಾಡಿದ ಮಹಿಳೆಗೆ ಶಿಕ್ಷೆಯಾಗಿದೆ. ಈ ಹಿಂದೆ ಅರಣ್ಯ ಎಂಬುವವರು ಜೀವರಾಜ್ ವಿರುದ್ಧ ಆತ್ಯಾಚಾರದ ಆರೋಪ ಹೊರಿಸಿ ದೂರು ನೀಡಿದ್ದರು. ನಂತರ ಕೋರ್ಟ್ ಆರೋಪದಲ್ಲಿ ಹುರುಳಿಲ್ಲ ಎಂದು ಕೇಸ್ ವಜಾ ಮಾಡಿತ್ತು. ಜೀವರಾಜ್ ನಿರಪರಾಧಿ ಎಂದು ಸಾಬೀತು ಆಗಿತ್ತು.
ಡಿ.ಎನ್.ಜೀವರಾಜ್, ಮಾಜಿ ಪ.ಪಂ ಅಧ್ಯಕ್ಷ ಆಶಿಶ್ ಕುಮಾರ್, ಮಾಜಿ ತಾ.ಪಂ ಅಧ್ಯಕ್ಷ ನಾಗರಾಜ್ ರವರು ನೀಡಿದ್ದ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಅರಣ್ಯ ಮತ್ತು ಮನು ಎಂಬಾತನ ಮೇಲೆ ಮಾನಹಾನಿ ಪ್ರಕರಣವನ್ನು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಎನ್.ಆರ್ ಪುರ ನ್ಯಾಯಾಲಯ ಅರಣ್ಯ ಮತ್ತು ಮನು ತಪ್ಪಿತಸ್ಥರು ಎಂದು ಆದೇಶಿಸಿದೆ.