ಕೆರೆಯ ಮಧ್ಯದಲ್ಲಿ ಸಿಲುಕಿದ್ದ ಜಿಂಕೆ ಮರಿಯ ರಕ್ಷಣೆ..!
– ಮೂಡಿಗೆರೆಯ ಹೆಗ್ಗುಡ್ಲು ಗ್ರಾಮದಲ್ಲಿ ನಡೆದ ಘಟನೆ
– ಚಾರ್ಮಾಡಿ ಘಾಟಿಯಲ್ಲಿ ಮೋಡ: 2 ಅಪಘಾತ
– ಆಲ್ದೂರು: ಆನೆಗಳ ಪುಂಡಾಟ: ಜನರಿಗೆ ಸಂಕಟ..!
– ಕೊಪ್ಪ, ಶೃಂಗೇರಿಯಲ್ಲಿ ಮಳೆ: ಜನರಿಗೆ ಖುಷ್
NAMMUR EXPRESS NEWS
ಚಿಕ್ಕಮಗಳೂರು: ನಡು ರಾತ್ರಿ ನೀರು ಕುಡಿಯಲು ಬಂದು ಕೆರೆಯಲ್ಲಿ ಸಿಲುಕಿದ್ದ ಜಿಂಕೆ ಮರಿಯನ್ನು ರಕ್ಷಣೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಗ್ಗುಡ್ಲು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಕೆರೆಯ ಮಧ್ಯೆ ಸಿಲುಕಿ ಜಿಂಕೆ ನರಳಾಡುತ್ತಿತ್ತು. ರಾತ್ರಿ ವೇಳೆ ಕೆರೆಯಲ್ಲಿ ನೀರು ಕುಡಿಯಲು ಬಂದು ಸಿಕ್ಕಿಹಾಕಿಕೊಂಡು ಜಿಂಕೆ ಪರಿತಪಿಸುತ್ತಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ಸಹಾಯದಿಂದ ಜಿಂಕೆಯನ್ನು ರಕ್ಷಣೆ ಮಾಡಿದ್ದಾರೆ.
ಚಾರ್ಮಾಡಿ ಘಾಟಿಯಲ್ಲಿ ಮಂಜು: 2 ಅಪಘಾತ
ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಂಜಿನಿಂದಾಗಿ ದಾರಿ ಕಾಣದೆ ಎರಡು ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ಒಂದು ಜಸ್ಟ್ ಮಿಸ್ ಆದಂತಹ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್ನಲ್ಲಿ ನಡೆದಿದೆ. ಬಿದಿರುತಳ ಗ್ರಾಮದ ಬಳಿ ತಡೆಗೋಡೆಗೆ ಬೊಲೆರೋ ಡಿಕ್ಕಿ ಹೊಡೆದರೆ, ಅಣ್ಣಪ್ಪ ಸ್ವಾಮಿ ದೇಗುಲದ ಬಳಿ ಬಸ್ಸು-ಕಾರು ಡಿಕ್ಕಿ ಹೊಡೆದಿವೆ. 2 ಅಪಘಾತದಲ್ಲೂ ಕಾರು-ಬಸ್ಸಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳು ಸಂಭವಿಸಿವೆ.
ನಿಲ್ಲದ ಆನೆಗಳ ಪುಂಡಾಟ: ಜನರಿಗೆ ಸಂಕಟ!
ಆಲ್ದೂರು ಸಮೀಪದ ಬಸರವಳ್ಳಿ ಪಂಚಾಯಿತಿ ವ್ಯಾಪ್ತಿಯ ಅರೇನೂರು ಗ್ರಾಮದ ಮಲ್ಲೇಶ್ ಗೌಡ ಎಂಬುವವರ ತೋಟಕ್ಕೆ ಗುರುವಾರ ರಾತ್ರಿ ಆನೆಗಳ ಹಿಂಡು ನುಗ್ಗಿ 14 ತೆಂಗಿನ ಮರ, ಬಾಳೆ ಗಿಡಗಳು ಮತ್ತು ಅಡಿಕೆ ಗಿಡಗಳನ್ನು ನಾಶಪಡಿಸಿವೆ.ಆನೆಗಳ ಉಪಟಳ ನಿರಂತರವಾಗಿ ಸಾಗಿದ್ದು, ಈಗಾಗಲೇ ಬೆಳೆಗಾರರು ತಮ್ಮ ತೋಟಗಳಿಗೆ ಕೆಲಸಕ್ಕೆ ತೆರಳಲು ಕೂಡ ತೊಂದರೆ ಅನುಭವಿಸುವಂತಾಗಿದೆ.
ಕೊಪ್ಪ, ಶೃಂಗೇರಿಯಲ್ಲಿ ಮಳೆ: ಜನರಿಗೆ ಖುಷ್
ಕೊಪ್ಪ, ಶೃಂಗೇರಿ ಭಾಗದಲ್ಲಿ ಕಳೆದ 3 ದಿನದಿಂದ ಮಳೆ, ಗಾಳಿ, ಮೋಡದ ವಾತಾವರಣ ಕಂಡು ಬರುತ್ತಿದೆ. ದಿನದಲ್ಲಿ ಒಂದು ಬಾರಿ ಭಾರೀ ಮಳೆಯಾಗುತ್ತಿದೆ. ಹಳ್ಳ, ನದಿಗಳ ನೀರಿನಲ್ಲಿ ಕೊಂಚ ಏರಿಕೆ ಆಗಿದೆ.