ವೀಲಿಂಗ್ ಹುಚ್ಚಾಟ: ದತ್ತ ಜಯಂತಿಗೆ ಹೊರಟವರಿಗೆ ಗಾಯ!
– ಸಂಕೀರ್ತನಾ ಯಾತ್ರೆ ವೇಳೆ ಬೈಕ್ ವ್ಹೀಲಿಂಗ್ ಮಾಡಿದ ಪುಂಡರು
– ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಅವರಿಗೆ ಗಾಯ
– ಮೂವರು ಪುಂಡರನ್ನು ವಶಕ್ಕೆ ಪಡೆದ ಪೋಲೀಸರು
NAMMUR EXPRESS NEWS
ಚಿಕ್ಕಮಗಳೂರು: ದತ್ತ ಜಯಂತಿ ಹಿನ್ನೆಲೆ ನಗರದ ತಿಲಕ್ ಪಾರ್ಕ್ ಸಮೀಪ ಸಂಕೀರ್ತನ ಯಾತ್ರೆ ನಡೆಯುವ ವೇಳೆ ಅಪರಿಚಿತ ಬೈಕ್ ಸವಾರರು ವೀಲಿಂಗ್ ನಡೆಸಿದ ಹಿನ್ನೆಲೆ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಗಾಯಗೊಂಡಿದ್ದು, ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೂವರನ್ನು ಬಂಧಿಸಿ, ಮೂರು ಬೈಕುಗಳನ್ನು ವಶಕ್ಕೆ ಪಡೆಯಲಾಗಿದೆ. ತಿಲಕ್ ಪಾರ್ಕ್ ಸಮೀಪ ಸಂಕಿರ್ತನಾ ಯಾತ್ರೆಯ ದೇವರ ಅಡ್ಡೆ ಬರುತ್ತಿದ್ದಾಗ ಏಕಾಏಕಿ ವೀಲಿಂಗ್ ಮಾಡಿಕೊಂಡ ಬಂದಾಗ ಈ ಘಟನೆ ಸಂಭವಿಸಿದ್ದು, ಬೈಕ್ ಸವಾರರು ವೀಲಿಂಗ್ ಮಾಡಿದ್ದು ಯಾಕೆ..?. ಈ ಸಂಬಂಧ ವರದಿ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಆರಂಭವಾಗಿದೆ, ಸಬ್ ಇನ್ಸೆಕ್ಟರ್ ಬಾಬುದ್ದೀನ್ ವರದಿ ಆಧರಿಸಿ ಸುಮೋಟೋ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.
ಘಟನೆಯ ಹಿನ್ನೆಲೆ ಏನು?
ಚಿಕ್ಕಮಗಳೂರು ನಗರದ ವಿವಿಧ ಬಡಾವಣೆಗಳಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಂಕೀರ್ತನ ಯಾತ್ರೆ ನಡೆಯುತ್ತಿದೆ, ಕಳೆದ ರಾತ್ರಿ ವಿಜಯಪುರ ಬಡಾವಣೆಯಲ್ಲೂ ಯಾತ್ರೆ ನಡೆಯುವ ವೇಳೆ ದತ್ತ ವಿಗ್ರಹವನ್ನು ಹೊತ್ತು ತಿಲಕ್ ಪಾರ್ಕ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಮೆರವಣಿಗೆ ಸಾಗುತ್ತಿತ್ತು. ದತ್ತ ಮಾಲಾಧಾರಿಗಳು ಭಜನೆ ಕೀರ್ತನೆ ಹಾಡುತ್ತಾ ಸಾಗುತ್ತಿದ್ದರು. ಈ ವೇಳೆ ತಿಲಕ್ ಪಾರ್ಕ್ ಪಕ್ಕದ ರಸ್ತೆಗೆ ಆಗಮಿಸುತ್ತಿದ್ದಂತೆ ಈ ಘಟನೆ ನಡೆದಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಯುವಕರ ಗುಂಪು ಸೇರಲಾರಂಭಿಸಿತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಘು ಲಾಠಿಚಾರ್ಜ್ ನಡೆಸಿ ಯುವಕರ ಗುಂಪನ್ನು ಚದುರಿಸಿ ವಾತಾವರಣ ತಿಳಿಗೊಳಿಸಿದ್ದಾರೆ.