ಹೊಸದುರ್ಗ ನಗರ ಸ್ವಚ್ಛತೆಗೆ ಪೌರಕಾರ್ಮಿಕರೇ ಬೆನ್ನೆಲುಬು
– ಪೊಲೀಸ್ ಇನ್ಸ್ಪೆಕ್ಟರ್ ತಿಮ್ಮಣ್ಣ ಅವರಿಂದ ಪ್ರಶಂಸೆ
– ಪೋಲಿಸ್ ಠಾಣೆಯಲ್ಲಿ ಕಾರ್ಮಿಕ ದಿನಾಚರಣೆ ಸಂಭ್ರಮ
NAMMUR EXPRESS NEWS
ಹೊಸಸುರ್ಗ : ಒಂದು ದೇಶ ಅಭಿವೃದ್ಧಿಯಾಗಬೇಕಾದರೆ ಆದೇಶದ ನಗರಗಳ ಸ್ವಚ್ಛತೆ ಬಹು ಮುಖ್ಯ ಪಾತ್ರವನ್ನು ಪೌರಕಾರ್ಮಿಕರು ವಹಿಸಿರುತ್ತಾರೆ.ಅಂತಹ ಸ್ವಚ್ಛತೆಯನ್ನ ಹೊಸದುರ್ಗ ನಗರದ ಜೊತೆಯಲ್ಲಿ ಅವರ ಕಾರ್ಮಿಕರ ಪಾತ್ರ ಹಾಕಿರುತ್ತದೆ. ಪ್ರತಿದಿನ ದುಡಿಮೆ ಮಾಡಿ ಬದುಕುವ ನೂರು ಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಹೊಸದುರ್ಗ ಪೊಲೀಸ್ ಇನ್ಸಪೆಕ್ಟರ್”ತಿಮ್ಮಣ್ಣ ತಿಳಿಸಿದ್ದಾರೆ.
ಪೋಲಿಸ್ ಠಾಣೆಯಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕರಿಗೆ ಸಿಹಿ ಹಂಚಿ ಶುಭಾಶಯ ಕೋರಿ ಮಾತನಾಡಿದ ಅವರು ಪೌರಕಾರ್ಮಿಕರು ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆಗೆ ನಗರ ಸ್ವಚ್ಛತೆಗೆ ಇಳಿಯುತ್ತಾರೆ. ಸಾರ್ವಜನಿಕರು ಎಲ್ಲೆಂದರಲ್ಲಿ ಹೊಸ ಕಡ್ಡಿಗಳನ್ನ ಬಿಸಾಡುವುದು ಮಾಡಬಾರದು, ನಮ್ಮ ಮನೆಯಂತೆಯೇ ನಮ್ಮ ಊರು ಎಂಬ ಜವಾಬ್ದಾರಿ ನಮಗೆಲ್ಲ ಇರಬೇಕು. ಪೌರಕಾರ್ಮಿಕರು ಬಹುಬೇಗ ಏಳುವುದರಿಂದ ಅವರು ಆರೋಗ್ಯದಲ್ಲಿ ಉತ್ತಮ ಗುಣಮಟ್ಟ ಕಾಪಾಡಿಕೊಳ್ಳುತ್ತಾರೆ. ನಮ್ಮಮ ನಮ್ಮ ಮನೆಯ ಮುಂದಿನ ಸ್ವಚ್ಛತೆಯನ್ನ ನಾವೇ ಮಾಡಿಕೊಂಡಾಗ ಇಡೀ ನಗರವೇ ಸ್ವಚ್ಛವಾಗುತ್ತದೆ. ಪೌರಕಾರ್ಮಿಕರ ಮಕ್ಕಳು ಉನ್ನತ ವ್ಯಾಸಂಗ ಮಾಡಿ ಉನ್ನತ ಹುದ್ದೆಗೆ ಸೇರಿದಾಗ ತಂದೆ-ತಾಯಿಗಳಿಗೆ ನೆಮ್ಮದಿ ಸಿಕ್ಕಂತಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಪಿಎಸ್ಐ ಭೀಮನಗೌಡ ಪಾಟೀಲ್ ಹಾಗೂ ಪೊಲೀಸ್ ಬಂದಿಗಳಾದ ಮಂಜುನಾಥ್ ಗಂಗಾಧರ್ ಜಯರಾಜ್, ಸತ್ಯನಾರಾಯಣ, ಮಧು ಉಮೇಶ್, ಭಾಗವಹಿಸಿದ್ದರು