ಅಜ್ಜಿಯ ಬದುಕಿಗೊಂದು ಸೂರು ಕಲ್ಪಿಸಿದ ಧರ್ಮಸ್ಥಳ ಸಂಸ್ಥೆ!
– ವಯೋವೃದ್ದೆ ಕಮಲಮ್ಮ ಅವರಿಗೆ ವಾತ್ಸಲ್ಯ ಮನೆಯ ಹಸ್ತಾಂತರ
– 70 ವರ್ಷ ಗುಡಿಸಿನಲ್ಲಿಯೇ ಜೀವನ: ಮನೆ ಕನಸು ನನಸು
NAMMUR EXPRESS NEWS
ಹೊಸದುರ್ಗ: ಜೀವನಪೂರ್ತಿ ಪ್ರೀತಿ ವಾತ್ಸಲ್ಯ ತೋರುವವರಿಲ್ಲದ ಅಜ್ಜಿಯ ಬದುಕಿಗೊಂದು ಮನೆ ನಿರ್ಮಿಸಿ ನೆಮ್ಮದಿಯ ಜೀವನಕ್ಕೆ ದಾರಿ ಮಾಡಿಕೊಟ್ಟಿರುವ ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗಡೆಯವರು ರಾಜ್ಯದ ಇಂತಹ ನೂರಾರು ಕುಟುಂಬಗಳ ಬದುಕಿಗೆ ದಾರಿದೀಪವಾಗಿದ್ದಾರೆ ಎಂದು ಚಿತ್ರದುರ್ಗ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಬಿ.ಪಿ.ಓಂಕಾರಪ್ಪ ತಿಳಿಸಿದ್ದಾರೆ.
ಹೊಸದುರ್ಗ ತಾಲೂಕಿನ ಕಸಬಾ ಹೋಬಳಿ ಜೋಡಿ ತುಂಬಿನಕೆರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಲು ರಾಮೇಶ್ವರ ವಲಯದಿಂದ ವಯೋವೃದ್ದೆ ಕಮಲಮ್ಮ ಇವರಿಗೆ ನೂತನವಾಗಿ ಕಟ್ಟಿಸಿ ಕೊಟ್ಟಿರುವ ವಾತ್ಸಲ್ಯ ಮನೆಯ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಚಂದ್ರಶೇಖರ್ ಅವರು ಪೂಜ್ಯ ವೀರೇಂದ್ರ ಹೆಗ್ಡೆಯವರ ಧರ್ಮಪತ್ನಿ ಹೇಮಾವತಿ ಅಮ್ಮನವರ ಆಶಯದಂತೆ ಇಂತಹ ನೊಂದ ಜೀವಿಯನ್ನ ಗುರುತಿಸಿ ಅರ್ಹ ವ್ಯಕ್ತಿಗೆ ಮನೆ ಕಟ್ಟಿಸಿಕೊಟ್ಟು ಅವರ ಬದುಕಿಗೆ ಆಸರೆಯಾಗಿದ್ದಾರೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಗೂಳಿಹಟ್ಟಿ ಕೃಷ್ಣಮೂರ್ತಿ ಮಾತನಾಡಿ, ಕಮಲಮ್ಮನವರ ವೃದ್ಯಾಪ್ಯದ ಬದುಕಿಗೆ ಧರ್ಮಸ್ಥಳ ಸಂಸ್ಥೆ ನಿರ್ಮಿಸಿ ಕೊಟ್ಟಿರುವ ಈ ಮನೆ ಅವರ ನೆಮ್ಮದಿಯ ಬದುಕಿಗೆ ಆಸರೆಯಾಗಿದೆ. ತನ್ನ ನೆಮ್ಮದಿಯ ಬದುಕಿಗೆ ಹಕ್ಕಿಗಳು ಸಹ ಒಂದು ಗೂಡು ಕಟ್ಟಿಕೊಳ್ಳುತ್ತವೆ. ಈ ವೃದ್ಧಾಪ್ಯದ ಸಮಯದಲ್ಲಿ ಯಾರು ಇಲ್ಲದ ಇವರಿಗೆ ಮನೆಯನ್ನು ಕಟ್ಟಿಕೊಳ್ಳಲಾಗದ ಇಂತಹ ಸಂದರ್ಭದಲ್ಲಿ ವಯೋವೃದ್ಧ ಕಮಲಮ್ಮನವರ ನೆಮ್ಮದಿಯ ಬದುಕಿಗೆ ಅತ್ಯುತ್ತಮವಾದ ಮನೆ ನಿರ್ಮಿಸಿ ಕೊಟ್ಟಿರುವ ಧರ್ಮಸ್ಥಳ ಸಂಸ್ಥೆಗೆ ಅಭಿನಂದನೆಗಳು ಮತ್ತು ಅವರಿಗೆ ಬಟ್ಟೆ, ಪಾತ್ರೆ, ಲೋಟ, ತಟ್ಟೆ, ಚೊಂಬು ಸೇರಿದಂತೆ ಇನ್ನಿತರ ಪರಿಕರಗಳನ್ನು ನೀಡಿರುವುದು ಆಶಾದಾಯಕ ಭರವಸೆಯಾಗಿದೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ತುಂಬಿನಕೆರೆ ಬಸವರಾಜ್ ಮಾತನಾಡಿ, ತನ್ನ ಬದುಕಿನದ್ದಕ್ಕೂ ಕಮಲಮ್ಮನವರು ಅನುಭವಿಸಿದ ನರಕಯಾತನೆ ಹೇಳತೀರದು, ಬೇರೆಯವರ ತೋಟದಲ್ಲಿ ಬಿದ್ದ ತೆಂಗಿನ ಗರಿಯ ಕಡ್ಡಿಯನ್ನು ಚಿಗಿದು ಅದರಿಂದ ಬರುವ ಎರಡು ರೂಪಾಯಿಯಲ್ಲಿ ತುತ್ತು ಅಕ್ಕಿ ಖರೀದಿಸಿ ಜೀವಿಸುತ್ತಿದ್ದರು.ರಾತ್ರಿ ಊರಿಗೆ ಬಂದು ಉಳಿದುಕೊಳ್ಳಲು ಒಂದು ಮನೆಯೂ ಇರಲಿಲ್ಲ. ನಮ್ಮ ಮನೆಯ ಪಕ್ಕದಲ್ಲಿ ಒಂದು ಗುಡಿಸಲು ನಿರ್ಮಿಸಿಕೊಟ್ಟೆವು ತನ್ನ ಬದುಕಿನ 70 ವರ್ಷಗಳ ವರಗೆ ಆ ಗುಡಿಸಿನನಲ್ಲಿಯೇ ಜೀವನ ನಡೆಸಿದರು . ಜೀವನದಲ್ಲಿ ನಮ್ಮ ನಮ್ಮ ತನ್ನ ಗುಡಿಸಲಿನಲ್ಲಿ ಒಂದು ದಿನವೂ ವಿದ್ಯುತ್ ದೀಪ ಕಂಡಿಲ್ಲ. ಸೀಮೆಎಣ್ಣೆ ಹಾಕಿದ ಬುಡ್ಡಿಯಲ್ಲಿ ಜೀವನ ಕಳೆದರು. ಮಳೆ ಬಂತೆಂದರೆ ಸೋರುವ ಗುಡಿಸಲಿನಲ್ಲಿ ರಾತ್ರಿಯೆಲ್ಲ ಮಳೆಯಲ್ಲಿಯೇ ತೆಂಗಿನ ಮರದ ಗರೆಯಿಂದ ಕಟ್ಟಿದ್ದ ಗುಡಿಸಲಿನಲ್ಲಿಯೇ ಕಾಲ ಕಳೆಯುತ್ತಿದ್ದರು. ಈ ಮನೆಯಲ್ಲಿಯೇ ಇವರ ಅಮೂಲ್ಯ ಜೀವನ ಕಳೆದು ಹೋಗಿವೆ. ಇಷ್ಟೊಂದು ನರಕಯಾತನೇ ಅನುಭವಿಸಿದ ತಾಯಿ ಕಮಲಂಬಳ ಬದುಕಿನಲ್ಲಿ ಧರ್ಮಸ್ಥಳ ಸಂಸ್ಥೆಯವರ ಮನೆ ನಿರ್ಮಾಣದಿಂದ ಕಮಲಮ್ಮನವರ ಭಾಗ್ಯದ ಬಾಗಿಲು ತೆರೆದಿದೆ.ಇನ್ನಾದರೂ ನೆಮ್ಮದಿಯಿಂದ ಕಮಲಮ್ಮನವರು ಬದುಕಲೆಂದು ಆಶಿಸುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಲು ರಾಮೇಶ್ವರ ವಲಯ ಯೋಜನಾಧಿಕಾರಿ ಚಂದ್ರಶೇಖರ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಬೀಸನಹಳ್ಳಿ ಜಗದೀಶ್, ತುಂಬಿನಕೆರೆ ಬಸವರಾಜ್, ತಾಲೂಕಿನ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಶ್ರೀಮತಿ ರತ್ನ ಮೈಪಾಳ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಗಂಗಮ್ಮ,ವಲಯ ಮೇಲ್ವಿಚಾರಕ ಯೋಗೀಶ್ ಸೇವಾ ಪ್ರತಿನಿಧಿ ಹಾಲೇಶ್, ನವ ಜೀವನ ಸಮಿತಿ ಸದಸ್ಯ ಸತೀಶ್ ತುಂಬಿನಕೆರೆ, ಗ್ರಾಮದ ಮುಖಂಡರಾದ ರಾಜಪ್ಪ ರಮೇಶ್ ಹನುಮಂತಪ್ಪ,