ಈಗ ಎಲ್ಲೆಡೆ ಫೇಮಸ್ ಕನ್ನಡ ಮಾತ್ರೆ ಚೀಟಿ ಡಾಕ್ಟರ್!
– ಕನ್ನಡಲ್ಲೇ ಚೀಟಿ ಬರೆದು, ಜನಮನ್ನಣೆ ಗಳಿಸಿದ ವೈದ್ಯ ಡಾ.ಸಂಜಯ್
– ಕೀಲು ಮೂಳೆ ತಜ್ಞ ಡಾ.ಸಂಜಯ್ ಅವರಿಗೆ ವ್ಯಾಪಕ ಜನಮನ್ನಣೆ
NAMMUR EXPRESS NEWS
ಹೊಸದುರ್ಗ : ಚಿತ್ರದುರ್ಗ ಜಿಲ್ಲೆಯಲ್ಲಿಯೇ ಹೆಸರಾಂತ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗದ ವಿವರ, ಮಾತ್ರೆ ಸೇರಿದಂತೆ ಇನ್ನಿತರೆ ಅಂಶಗಳನ್ನು ಕನ್ನಡದಲ್ಲಿ ಬರೆದು, ಪ್ರತಿ ರೋಗಿಗಳಿಗೂ ರೋಗ ಹಾಗೂ ಮಾತ್ರೆಗಳ ಬಗ್ಗೆ ಮಾಹಿತಿ ತಿಳಿಯುವಂತೆ ಮಾಡಿದ ಸ್ವಚ್ಛ ಕನ್ನಡದ ಕೀಲು ಮೂಳೆ ತಜ್ಞ ಡಾ.ಸಂಜಯ್ ಅವರಿಗೆ ವ್ಯಾಪಕ ಜನಮನ್ನಣೆ ದೊರೆತಿದೆ. ಇವರು ಕನ್ನಡದಲ್ಲಿ ಬರೆದಿರುವ ಔಷಧ ಚೀಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈಗ ಇಡೀ ಕರುನಾಡಲ್ಲಿ ಅವರ ಕನ್ನಡ ಪ್ರೇಮ ಹೆಸರಾಗಿದೆ.
ಗುರುವಾರದಿಂದಲೇ ಇವರು ಕನ್ನಡದಲ್ಲಿ ಔಷಧ ಚೀಟಿ ಬರೆಯಲು ಆರಂಭಿಸಿದ್ದಾರೆ. ಡಾ. ಸಂಜಯ್ ಪ್ರೇರಣೆಯಿಂದ ಮತ್ತೊಬ್ಬ ವೈದ್ಯ ಕಿವು ಮೂಗು, ಗಂಟಲು ತಜ್ಞ ಡಾ.ಶಿವಪ್ರಕಾಶ್ ಕೂಡ ಕನ್ನಡದಲ್ಲೇ ಔಷಧ ಚೀಟಿ ಬರೆಯುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಡಾ. ಸಂಜಯ್ ಅವರು, ಕನ್ನಡ ಅಭಿವೃದ್ಧಿ ಪ್ರಾಿಾರದ ಅ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ವೈದ್ಯರು ಚೀಟಿಯನ್ನು ಕನ್ನಡದಲ್ಲಿ ಬರೆಯುವಂತೆ ಸೂಚನೆ ನೀಡಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯ ಆರಂಭಿಸಿದೆ. ಕನ್ನಡ ಸ್ವಲ್ಪ ತೊಡಕಾಯಿತು. ಔಷಧಗಳ ಬಗ್ಗೆ ಸರಾಗವಾಗಿ ಬರೆಯಬಹುದು. ಆದರೆ ರೋಗದ ಲಕ್ಷಣಗಳು ಇಂಗ್ಲೀಷ್ ನಲ್ಲಿದ್ದು, ಕನ್ನಡದಲ್ಲಿ ಬರೆಯುವುದು ಸ್ವಲ್ಪ ಕಷ್ಟ. ಹಾಗಾಗಿ ಇಂಗ್ಲೀಷ್ ಹೆಸರನ್ನೇ ಕನ್ನಡದಲ್ಲಿ ಬರೆದು, ರೋಗಿಗಳಿಗೆ ತಿಳಿಸಿಕೊಡುವ ಸಣ್ಣ ಪ್ರಯತ್ನ ಮಾಡಲಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರು ಕನ್ನಡದಲ್ಲಿ ಔಷಧ ಚೀಟಿ ಬರೆಯಲು ಆರಂಭಿಸಿದ್ದೇವೆ. ಸರ್ಕಾರದ ಆದೇಶ ಬಂದ ನಂತರ ಇತರೆ ವೈದ್ಯರು ಸಹ ಈ ಕಾರ್ಯ ಆರಂಬಿಸುವರು ಎಂದರು.’
ಈ ಮೊದಲು ವೈದ್ಯರು ಬರೆಯುತ್ತಿದ್ದ ಔಷಧಿ ಚೀಟಿಗಳು ಮೆಡಿಕಲ್ ಸ್ಟೋರ್ ಅವರಿಗೆ ಮಾತ್ರ ಅರ್ಥವಾಗುತ್ತಿತ್ತು. ಮನೆಗೆ ಬಂದು ನೋಡಿದರೆ, ಯಾವ ರೋಗ, ಯಾವ ಮಾತ್ರೆ ತಗೋಬೇಕು ಎಂಬುದೇ ಗೊತ್ತಾಗುತ್ತಿರಲಿಲ್ಲ. ಒಮ್ಮೊಮ್ಮೆ ನರ್ಸಿಂಗ್ ವಿದ್ಯಾರ್ಥಿಗಳು ಸಹ ಔಷಧದ ಹೆಸರು ಗೊತ್ತಾಗದೆ ಪರಿತಪಿಸಿದ್ದನ್ನು ಕಂಡಿದ್ದೇನೆ. ಡಾ. ಸಂಜಯ್ ಅವರ ಈ ಕಾರ್ಯ ರೋಗಿಗಳ ಸಮಸ್ಯೆ ನಿವಾರಣೆ ಜೊತೆಗೆ ವೈದ್ಯರ ಕನ್ನಡಾಭಿಮಾನವನ್ನು ಸಹ ಹೆಚ್ಚಿದೆ.