ಗಣೇಶ ವಿಸರ್ಜನೆಗೆ ಕೇಸರಿ ಮಯವಾದ ಹೊಸದುರ್ಗ!
– ವೈಭವದ ವಿರಾಟ್ ಹಿಂದೂ ಗಣಪತಿ ಶೋಭಾಯಾತ್ರೆ
– ಶೋಭಾಯಾತ್ರೆಯಲ್ಲಿ ರಾರಾಜಿಸಿದ ಕೇಸರಿ ಬಾವುಟಗಳು,
NAMMUR EXPRESS NEWS
ಹೊಸದುರ್ಗ: ಪ್ರತಿವರ್ಷಕ್ಕಿಂತಲೂ ಈ ಬಾರಿಯ ಗಣೇಶ ಮಹೋತ್ಸವ ನಗದೆದಲ್ಲೆಡೆ ಅಲಂಕೃತ ವಿರಾಟರೂಪದ ಹಿಂದೂ ಬಾವುಟಗಳು, ಡಿ ಜೆ ಸದ್ದಿಗೆ ಕುಣಿದ ಕೊಪ್ಪಳ ಹಿಂದೂ ಯುವಕ ಯುವತಿಯರು ಹಾಗೂ ಪುಟಾಣಿ ಮಕ್ಕಳು. ನಗರದಅಂಬೇಡ್ಕರ್ ವೃತ್ತದ ಹಳೆಯ ಪ್ರವಾಸಿ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಿರಾಟ್ ಹಿಂದೂ ಮಹಾಸಾಗರ ಗಣಪತಿಯ 11 ನೇ ವರ್ಷದ ಬೃಹತ್ ಶೋಭಾಯಾತ್ರೆ ಗುರುವಾರ ನಗರದ ಮುಖ್ಯ ರಸ್ತೆಗಳಲ್ಲಿ ವಿಜೃಂಭಣೆಯಿಂದ ಜರುಗಿತು. ಈ ಬಾರಿ ಸಿಂಹಾರೂಡನಾದ ಗಣೇಶ ಮೂರ್ತಿಯನ್ನು ವಿಶೇಷ ಅಲಂಕೃತ ವಾಹನದಲ್ಲಿ ಸ್ವಾಮಿಯನ್ನು ಕೂರಿಸಿ, ರಾಜಬೀದಿ ಉತ್ಸವ ನಡೆಸಿದ್ದು, ಈ ಬಾರಿಯ ವಿಶೇಷವಾಗಿತ್ತು.
*ಕೇಸರಿಮಯವಾದ ಹೊಸದುರ್ಗ ನಗರ *
ಶೋಭಾಯಾತ್ರೆ ಸಾಗುವ ಮುಖ್ಯ ರಸ್ತೆಗಳನ್ನು ಕೇಸರಿ ಬಣ್ಣದ ಬಟ್ಟೆಗಳು ಹಾಗೂ ದ್ವಜಗಳಿಂದ ಹಾಗೂ ತೋರಣಗಳಿಂದ ಸಿಂಗಾರ ಗೊಳಿಸಲಾಗಿತ್ತು. ರಾಜಕೀಯ ನಾಯಕರು, ಸಮಾಜ ಸೇವಕರು, ಗಣಪತಿ ಸೇವಾ ಸಮಿತಿಯ ಸದಸ್ಯರ ಪ್ಲೆಕ್ಸ್ ಗಳಂತೂ ರಸ್ತೆಯೂದ್ದಕ್ಕೂ ರಾರಾಜಿಸುತ್ತಿದ್ದವು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೃಹತ್ ಶೋಭಾಯಾತ್ರೆಗೆ ಚಾಲನೆ ದೊರೆಯಿತು. ಗಣಪತಿ ಮಂಟಪದಿಂದ ಹೊರಟ ಮೆರವಣಿಗೆ ಅಂಬೇಡ್ಕರ್ ಸರ್ಕಲ್, ಗಾಂಧಿ ಸರ್ಕಲ್, ಬಸವೇಶ್ವರ ಸರ್ಕಲ್, ಮದಕರಿ ಸರ್ಕಲ್, ವೀರಭದ್ರೇಶ್ವರ ಸ್ವಾಮಿ ದೇವಾಲಯದ ಮುಂಭಾಗದ ಮೂಲಕ ಮಠದ ಬಾವಿ ಹತ್ತಿರ ತಲುಪಿತು. ನಂತರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ,ವಿಸರ್ಜನೆ ಮಾಡಲಾಯಿತು.
*ಬಿಗಿ ಪೊಲೀಸ್ ಬಂದೋ ಬಸ್ತ್:*
ಶೋಭಾಯಾತ್ರೆಯ ವಿಶೇಷವಾಗಿ ಒಬ್ಬರು ಅಡಿಷನಲ್ ಎಸ್ಪಿ, ಒಬ್ಬರು ಡಿವೈಎಸ್ಪಿ, 4 ಸಿಪಿಐ, 12 ಪಿಎಸ್ಐ, 250 ಪೊಲೀಸ್ ಸಿಬ್ಬಂದಿ, ಒಂದು ಕೆ ಎಸ್ ಆರ್ ಪಿ, 4 ವಿಶೇಷ ಪೊಲೀಸ್ ಪಡೆಗಳನ್ನು ನಿಯೋಜನೆ ಮಾಡಲಾಗಿತ್ತು. ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋ ಬಸ್ತ್ ಮಾಡಲಾಗಿತ್ತು.
*ಡಿಜೆ ಕುಣಿದು ಕುಪ್ಪಳಿಸಿದ ಯುವಕರು:*
ಮೆರವಣಿಗೆಯೂದ್ಧಕ್ಕೂ ಸಾವಿರಾರು ಯುವಕರು ಮತ್ತು ಯುವತಿಯರು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ಭಗವಧ್ವಜ, ಶ್ರೀರಾಮ, ಹನುಮಂತ, ಶಿವಾಜಿ ಇನ್ನಿತರ ಮಹಾನ್ ನಾಯಕರ ಬಾವುಟಗಳನ್ನು ಹಿಡಿದಿದ್ದ ಯುವಕರು ಅತ್ತಿಂದಿತ್ತ ತಿರುಗಿಸುತ್ತ ಕುಣಿದರು. ಬಹುತೇಕರು ಕೇಸರಿ ಶಾಲು, ರುಮಾಲು ಧರಿಸಿ ಗಮನ ಸೆಳೆದರು. ಒಬ್ಬರನ್ನೊಬ್ಬರು ಕೈಗಳನ್ನು ಹಿಡಿಯುತ್ತಾ ‘ಕುಚಿಕು ಕುಚಿಕು’ ಹಾಗೂ ಇನ್ನಿತರ ಡಿಜೆ ಹಾಡುಗಳಿಗೆ ಒಂದಾಗಿ ಹೆಜ್ಜೆ ಹಾಕಿ ಸಂಭ್ರಮಿಸಿದರು.
*ರಾರಾಜಿಸಿದ ಕಿಚ್ಚ ಸುದೀಪ್ ಹಾಗೂ ಡಿ ಬಾಸ್ ದ್ವಜಗಳು *
ಶೋಭ ಯಾತ್ರೆಯಲ್ಲಿ ಹೆಚ್ಚಾಗಿ ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳು ತಮ್ಮ ಇಬ್ಬರೂ ನಾಯಕರ ಬಾವುಟ ಹಿಡಿದು ಹರ್ಷೋದ್ಗಾರ ಕೂಗಿದರು. ದಾರಿ ಯುದ್ಧಕ್ಕೂ ಬಾವುಟಗಳನ್ನು ಹಿಡಿದು ಯುವಕರ ತಂಡ ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು.