ಪುಷ್ಪ2 ಸ್ಟಾರ್ ಅಲ್ಲು ಅರ್ಜುನ್ ಅರೆಸ್ಟ್
– ಮಹಿಳಾ ಅಭಿಮಾನಿ ಸಾವು ಪ್ರಕರಣ
– ಹೈದರಾಬಾದ್ನ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಸ್ಥಳಾಂತರ!
NAMMUR EXPRESS NEWS
ಹೈದರಾಬಾದ್ನ ಸಂಧ್ಯಾ ಥಿಯೇಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಅರೆಸ್ಟ್ ಆಗಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಸಖತ್ ಸದ್ದು ಮಾಡಿರುವ ‘ಪುಷ್ಪಾ-2 ದಿ ರೂಲ್’ ಪ್ರೀಮಿಯರ್ ಶೋ ವೇಳೆ ದುರಂತ ಸಂಭವಿಸಿತ್ತು. ಜನಸಂದಣಿಯಿಂದಾಗಿ ಮಹಿಳಾ ಅಭಿಮಾನಿ ರೇವತಿ (35) ಎಂಬುವವರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದರು. 13 ವರ್ಷ ವಯಸ್ಸಿನ ಮಗ ಶ್ರೀ ತೇಜ್ ತೀವ್ರವಾಗಿ ಗಾಯಗೊಂಡಿದ್ದರು. ಸದ್ಯ ಚಿಕಿತ್ಸೆ ಮುಂದುವರಿದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಕ ನಟ ಅಲ್ಲು ಅರ್ಜುನ್ ಅರೆಸ್ಟ್ ಆಗಿದ್ದಾರೆ. ಅವರನ್ನು ಹೈದರಾಬಾದ್ನ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಗಿದೆ.