ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!
– ಕನ್ನಡದ ಖ್ಯಾತ ಸಿನಿಮಾ ಚಾರ್ಲಿ ಮೂಲಕ ಜನರ ಮನ ಗೆದ್ದ ನಾಯಿ
– ಚಾರ್ಲಿಗೆ ಚಿತ್ತಾರ ಸ್ಟಾರ್ ಅವಾರ್ಡ್ಸ್ 2023 ಸ್ಪೆಷಲ್ ಅಪಿಯರೆನ್ಸ್
NAMMUR EXPRESS CINEMA
ಚಾರ್ಲಿ 777 ಸಿನಿಮಾದಲ್ಲಿ ಪ್ರಮುಖ ಪಾತ್ರದಾರಿಯಾಗಿ ಅಭಿನಯಿಸಿದ ಚಾರ್ಲಿ ನಾಯಿ ಈಗ ನಾಡಿನ ಹೆಮ್ಮೆಯ ಪ್ರಶಸ್ತಿಯೊಂದನ್ನು ಗೆದ್ದುಕೊಂಡಿದೆ.
ಕನ್ನಡದ ಚಿತ್ರವೊಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದು ಕೆಜಿಎಫ್ ಬಳಿಕ ಚಾರ್ಲಿ ಸಿನಿಮಾ. ಇಲ್ಲಿ ಚಾರ್ಲಿಯ ಸೆಂಟಿಮೆಂಟ್, ನಟನೆ, ರಕ್ಷಿತ್ ಶೆಟ್ಟಿ ನಟನೆ ಎಲ್ಲವೂ ಗೆದ್ದಿತ್ತು. ಇದೀಗ ‘ಚಾರ್ಲಿಗೆ ಚಿತ್ತಾರ ಸ್ಟಾರ್ ಅವಾರ್ಡ್ಸ್ 2023 ಸ್ಪೆಷಲ್ ಅಪಿಯರೆನ್ಸ್ ಅವಾರ್ಡ್ ಸಿಕ್ಕಿದ್ದು ಖುದ್ದು ಚಾರ್ಲಿ ಕಾರ್ಯಕ್ರಮದಲ್ಲಿ ಹಾಜರಾಗಿ ಪಡೆದುಕೊಂಡಿದೆ.
ಕಿರಣ್ ರಾಜ್ ಚೊಚ್ಚಲ ನಿರ್ದೇಶನದ, ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಚಿತ್ರವು ಒಂದು ವರ್ಷ ಪೂರೈಸಿದ್ದು, ಚಾರ್ಲಿ ಪಾತ್ರದಲ್ಲಿ ಮಿಂಚಿದ್ದ ಲ್ಯಾಬ್ರಡಾರ್ ರಿಟ್ರಿವ ‘ಚಾರ್ಲಿ’ ಗೆ ಚಿತ್ತಾರ ಸ್ಟಾರ್ ಅವಾರ್ಡ್ಸ್ 2023 ನಲ್ಲಿ ಸ್ಪೆಷಲ್ ಅಪಿಯರೆನ್ಸ್ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ವೇದಿಕೆಗೆ ಬಂದ ಚಾರ್ಲಿ ನಾಯಿ ಪ್ರಶಸ್ತಿ ಸ್ವೀಕರಿಸಿ ಸೇರಿದ್ದವರ ಮನಸು ಗೆದ್ದಿದೆ. ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ರಕ್ಷಿತ್,” ಒಂದು ವರ್ಷ ಕಳೆದಿದೆ, ಮತ್ತು ನನ್ನ ಸಹನಟಿ ಹೃದಯಗಳನ್ನು ಗೆಲ್ಲುವುದನ್ನು ಇನ್ನೂ ಕೂಡಾ ಮುಂದುವರೆಸಿದ್ದಾಳೆ. ನಮ್ಮ ಪ್ರೀತಿಯ ಪುಟ್ಟ ಚಾರ್ಲಿ ಚಿತ್ತಾರ ಸ್ಟಾರ್ ಅವಾರ್ಡ್ಸ್ 2023 ನಲ್ಲಿ ಸ್ಪೆಷಲ್ ಅಪಿಯರೆನ್ಸ್ ಪ್ರಶಸ್ತಿಯನ್ನು ಸ್ವೀಕರಿಸಿದ್ದಾಳೆ” ಎಂದಿದ್ದಾರೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶ್ವಾನವೊಂದು ಜನರ ಹೃದಯ ಮಾತ್ರವಲ್ಲದೆ ಪ್ರಶಸ್ತಿಯನ್ನೂ ಗೆದ್ದಿದೆ.
ಭಾರತ ಚಿತ್ರರಂಗದಲ್ಲಿ ಕನ್ನಡದ ಚಿತ್ರವೊಂದು ಈ ರೀತಿಯಲ್ಲಿ ಸದ್ದು ಮಾಡಿದೆ.
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023