NAMMUR EXPRESS NEWS
ಧಾರವಾಡ : ಚೆಕ್ ನಲ್ಲಿದ್ದ ಕನ್ನಡ ಅಂಕಿಯನ್ನು ತಪ್ಪಾಗಿ ಅರ್ಥೈಸಿಕೊಂಡ ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಶಾಖೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಬ್ಯಾಂಕಿಗೆ ₹85,177 ದಂಡಪಾವತಿಸುವಂತೆ ಬುಧವಾರ ಆದೇಶಿಸಿದೆ.
ಇಲ್ಲಿನ ಕಲ್ಯಾಣ ನಗರ ನಿವಾಸಿ ವಾದಿರಾಜಚಾರ್ಯ ಇನಂದಾರ ಅವರು ವಿದ್ಯುತ್ ಶುಲ್ಕ ಪಾವತಿಸಲು ಹೆಸ್ಕಾಂಗೆ ₹ 6 ಸಾವಿರ ಮೊತ್ತದ ಚೆಕ್ ನೀಡಿದ್ದರು. ಚೆಕ್ ಅನ್ನು 2020 ರ ಸೆ.3 ರಂದು ನೀಡಲಾಗಿತ್ತು. ಹೆಸ್ಕಾಂನ ಖಾತೆ ಕೆನರಾ ಬ್ಯಾಂಕ್ ನಲ್ಲಿದ್ದುದ್ದರಿಂದ ಅಲ್ಲಿಂದ ಚೆಕ್ ನಗದೀಕರಣಕ್ಕೆ ಎಸ್ಬಿಐಗೆ ಕಳಿಸಲಾಗಿತ್ತು. ದಿನಾಂಕ ನಮೂದಿಸುವಾಗ ಸೆಪ್ಟೆಂಬರ್ ತಿಂಗಳನ್ನು ಕನ್ನಡದ ಅಂಕಿ 9 ಎಂಬುದಾಗಿ ಬರೆದಿದ್ದನ್ನು ತಪ್ಪಾಗಿ 6 ಎಂದು ಬ್ಯಾಂಕ್ ಅಧಿಕಾರಿ ಅರ್ಥೈಸಿಕೊಂಡಿದ್ದರು.
ಕನ್ನಡ ಚೆಕ್ ಅಮಾನ್ಯ : ಎಸ್ಬಿಐಗೆ 85 ಸಾವಿರ ದಂಡ
Related Posts
Add A Comment