- ಅರ್ಧ ರಾಜ್ಯ ತತ್ತರ, 550ಕ್ಕೂ ಹೆಚ್ಚು ಮನೆ ಜಲಾವೃತ
- ಮಳೆಯಬ್ಬರಕ್ಕೆ11 ಬಲಿ, 30ಕ್ಕೂ ಅಧಿಕ ಕೆರೆ ಕೋಡಿ
NAMMUR EXPRESS NEWS
ಬೆಂಗಳೂರು :ಹಲವು ದಿನಗಳ ಬಿಡುವಿನ ಬಳಿಕ ರಾಜ್ಯದ 13ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮತ್ತೆ ಮಳೆ ಅಬ್ಬರಿಸಿದೆ. ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಮನೆ ಯೊಂದರ ಮೇಲೆ ಗುಡ್ಡ ಕುಸಿದು ಒಂದೇ ಕುಟುಂಬದ ನಾಲ್ವರು ಜೀವಂತ ಸಮಾಧಿ ಆಗಿದ್ದು ಸೇರಿ. ರಾಜ್ಯದಲ್ಲಿ ಮಳೆ ಸಂಬಂಧಿ ಅನಾಹುತಕ್ಕೆ ಮಂಗಳವಾರ ಒಟ್ಟು 11 ಮಂದಿ ಬಲಿಯಾಗಿದ್ದಾರೆ. ಭಟ್ಕಳವೊಂದರಲ್ಲೇ 400ಕ್ಕೂ ಹೆಚ್ಚು ಸೇರಿ ರಾಜ್ಯಾದ್ಯಂತ 550ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.
ಬಿಡದೆ ಸುರಿದ ಮಳೆಯಿಂದಾಗಿ ರಾಜ್ಯಾದ್ಯಂತ 30ಕ್ಕೂ ಹೆಚ್ಚು ಕೆರೆಗಳು ಕೋಡಿ ಬಿದ್ದಿದ್ದು, ಬೆಂಗಳೂರು-ಮೈಸೂರು, ಭಟ್ಕಳ-ಪುಣೆ ಹೆದ್ದಾರಿ ಸೇರಿ 18ಕ್ಕೂ ಕಡೆ ರಸ್ತೆಸಂಪರ್ಕ ಕಡಿತಗೊಂಡಿದೆ. ನೂರಾರು ಹೆಕ್ಟೇರ್ ‘ರೈತರ ಹೊಲಗಳಿಗೆ ನೀರು ನುಗ್ಗಿ ಭಾರೀ ಹಾನಿಯಾಗಿದೆ. ಮಳೆಯಬ್ಬರ ಹಿನ್ನೆಲೆಯಲ್ಲಿ ಗದಗ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳು ಹಾಗೂ ಭಟ್ಕಳ, ಬೈಂದೂರು, ಕುಂದಾಪುರ ತಾಲ್ಲೂಕು ಹಾಗೂ ಸುಬ್ರಹ್ಮಣ್ಯ ಭಾಗದಲ್ಲಿ ಶಾಲಾ-ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿತ್ತು.
ನಾಲ್ವರು ನೀರು ಪಾಲು: ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಹರಿದ ಪರಿಣಾಮ ವಿಜಯನಗರ ಜಿಲ್ಲೆಯ ಗರಗ-ನಾಗಲಾಪುರದಲ್ಲಿ ಹಳ್ಳ ದಾಟಲು ಹೋದರೈತ ಬೊಮ್ಮಪ್ಪ(55), ತುಮಕೂರು ಜಿಲ್ಲೆಶಿರಾದ ಚೆನ್ನನಕುಂಟೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹಳ್ಳದಾಟುವಾಗ ಶಿಕ್ಷಕ ಆರೀಫ್ ಉಲ್ಲಾ(55), ಬಳ್ಳಾರಿಯ ಸಂಡೂರು ತಾಲ್ಲೂಕಿನ ಅಂಕಮನಾಳದಲ್ಲಿ ಬೈಕ್ನಲ್ಲಿ ಸೇತುವೆ ದಾಟುವಾಗ ಕೃಷ್ಣಕುಮಾರ್ ಮತ್ತು ಮೈಸೂರಿನ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಕೆಲ್ಲೂರು ಹೊಸಕೋಟೆ ಸೇತುವೆಯಲ್ಲಿ ಬೈಕ್ನಿಂದ ಕೆಳಗೆ ಬಿದ್ದ ಹೆಲ್ಮೆಟ್ ಎತ್ತಿಕೊಳ್ಳಲು ಹೋಗಿ ಕಾರ್ತಿಕ್ (17) ನೀರುಪಾಲಾಗಿದ್ದಾರೆ.