- ಮತ್ತೂರು ಬಳಿ ಪಡಿತರದಾರರು, ಸ್ಥಳೀಯರಿಂದ ಪ್ರತಿಭಟನೆ
- ಉತ್ತಮ ಪಡಿತರ ವಿತರಿಸಲು ಗ್ರಾಮಸ್ಥರ ಪಟ್ಟು
NAMMUR EXPRESS NEWS
ಮತ್ತೂರು( ಶಿವಮೊಗ್ಗ ಗ್ರಾಮಾಂತರ) : ಗಾಜನೂರು ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಮತ್ತೂರು ಸೊಸೈಟಿಯಲ್ಲಿ ಕಳಪೆ ಅಕ್ಕಿಯನ್ನು ಖಂಡಿಸಿ ಸ್ಥಳೀಯ ಎಲ್ಲಾ ರೇಷನ್ ಕಾರ್ಡ್ ದಾರರು ಸೇರಿ ಪ್ರತಿಭಟನೆಯನ್ನು ಮಾಡಿದ್ದಾರೆ.
ರಾಜ್ಯ ಸರ್ಕಾರ ಕಡು ಬಡವರಿಗಾಗಿ ಮೀಸಲಾಗುವ ಪಡಿತರ ಅಕ್ಕಿ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಬಾರಿ ಮಳೆಯಿಂದಾಗಿ ನಾಟಿ ಗದ್ದೆ ಕೊಚ್ಚಿ ಹೋಗಿದ್ದು ಜನರು ಊಟಕ್ಕೆಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಅದರಲ್ಲೂ ಸರಕಾರ ನೀಡುವ ಉಚಿತ ಅಕ್ಕಿ ಸಹ ಕಳಪೆಯಾಗಿದೆ ಮುಗ್ಗಲು ಹಿಡಿದಿರುವ ಅಕ್ಕಿಯನ್ನು ಜನರಿಗೆ ವಿತರಿಸಲಾಗುತ್ತಿದೆ. ಜಾನುವಾರು ಮತ್ತು ಕೋಳಿಗಳು ಸಹ ಇಂತಹ ಪಡಿತರ ತಿನ್ನಲಾರವು, ಒಳ್ಳೆಯ ಪಡಿತರ ವಿತರಿಸಬೇಕೆಂದು ಗ್ರಾಮಸ್ಥರು ಪ್ರತಿಭಟನೆಯನ್ನು ನಡೆಸಿದ್ದು ಸಂಬಂಧಪಟ್ಟವರು ಬಂದು ಬಗೆಹರಿಸಲು ಪಟ್ಟು ಹಿಡಿದರು. ಬಳಿಕ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು. ಇನ್ನಾದರೂ ಸಂಬಂಧಪಟ್ಟವರು ಗಮನಿಸಿ ಒಳ್ಳೆಯ ಪಡಿತರ ವಿತರಿಸಬೇಕೆಂದು ಗ್ರಾಹಕರು ಒತ್ತಾಯಿಸಿದ್ದಾರೆ.