ಬಂಡಿಗಡಿ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಸಾಧನೆ
– ಶೇಕಡಾ 95% ಫಲಿತಾಂಶ: ಇಬ್ಬರು ಅಂಗವಿಕಲ ಮಕ್ಕಳ ಸಾಧನೆ
– ಗ್ರಾಮೀಣ ಶಾಲೆ ಎಲ್ಲಾ ವ್ಯವಸ್ಥೆಯಲ್ಲೂ ನಂಬರ್ 1
NAMMUR EXPRESS NEWS
ಕೊಪ್ಪ: ಕೊಪ್ಪ ತಾಲೂಕಿನ ಬಂಡಿಗಡಿ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಗೆ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಶೇಕಡಾ 95% ಬಂದಿದೆ. ಗ್ರಾಮೀಣ ಭಾಗದ ಈ ಶಾಲೆ ಎಲ್ಲಾ ವಿಭಾಗದಲ್ಲೂ ತಾಲೂಕಿನಲ್ಲಿ ಗಮನ ಸೆಳೆದಿದ್ದು, ಇದೀಗ ಫಲಿತಾಂಶದಲ್ಲೂ ಉತ್ತಮ ಸಾಧನೆ ಮಾಡಿದೆ.
ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು
ಅಜಿತ್ 555/625, ಮೊಹಮದ್ ಅವೆಜ್ 554/625, ನಿತ್ಯ ಶ್ರೀ 524/625, ಹರ್ಷಿತ 517/625, ಶ್ರೇಯ 511/625.
ಇಬ್ಬರು ಅಂಗವಿಕಲ ಮಕ್ಕಳ ಸಾಧನೆ
ಪರೀಕ್ಷೆ ಬರೆದ ವಿದ್ಯಾರ್ಥಿಗಳು 19, ಉತ್ತಿರ್ಣ – 18, ಉನ್ನತ ಶ್ರೇಣಿ – 02, ಪ್ರಥಮ ಶ್ರೇಣಿ -12, ದ್ವಿತೀಯ -02, ತೃತಿಯ -02 ಸ್ಕಂದ ಮತ್ತು ದ್ರುವ ಎಂಬ ಇಬ್ಬರು ವಿದ್ಯಾರ್ಥಿಗಳು ಅಂಗವಿಕಲರಾಗಿದ್ದು, ಶಾಲೆಯ ಶಿಕ್ಷಕರ ಕಠಿಣ ಪರಿಶ್ರಮ ಹಾಗೂ ಸಹಪಾಠಿಗಳ ಸಹಕಾರದೊಂದಿಗೆ ಪರೀಕ್ಷೆ ಬರೆದು ಪ್ರಥಮ ಶ್ರೇಣಿಯಲ್ಲಿ ಉತ್ತಿರ್ಣರಾಗಿ ಇತರರಿಗೆ ಮಾದರಿಯಾಗಿದ್ದಾರೆ. ಉತ್ತಿರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು, ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.