ಸರ್ಕಾರಿ ಡಿಗ್ರಿ ಕಾಲೇಜಲ್ಲಿ ಪ್ರಥಮ ವೃತ್ತಿ ಮಾರ್ಗದರ್ಶನ ಕಾರ್ಯಗಾರ
– ಉದ್ಯೋಗ ಬಯಸುವ ಪ್ರತಿಯೊಬ್ಬ ಪದವೀಧರರು ಆರಂಭದಲ್ಲೇ ಎಡವುತ್ತಾರೆ
– ಕೌಶಲ್ಯ ಇದ್ದರೆ ಮಾತ್ರ ಈಗ ಉದ್ಯೋಗ
NAMMUR EXPRESS NEWS
ತೀರ್ಥಹಳ್ಳಿ : ಬಾಳೇಬೈಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಳೆಯ ವಿದ್ಯಾರ್ಥಿಗಳ ಸಂಘ, ಚಾಣಕ್ಯ ವಿಶ್ವವಿದ್ಯಾಲಯ ಬೆಂಗಳೂರು ಇವರ ಸಹಯೋಗದಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಗಾರ ನಡೆಯಿತು.
ಉದ್ಯೋಗ ಅರಸುವ ಪ್ರತಿಯೊಬ್ಬ ಪದವೀಧರರು ಆರಂಭದಲ್ಲೇ ಎಡವುತ್ತಾರೆ. ಕೌಶಲ್ಯದ ಜೊತೆಗೆ ವೃತ್ತಿ ಜೀವನ ನಿರ್ವಹಿಸಲು ವೈಯಕ್ತಿಕ ವರ್ಚಸ್ಸು ಹಿಗ್ಗಿಸಿಕೊಳ್ಳಬೇಕು ಎಂದು ಉಪನ್ಯಾಸ ಪ್ರಶಾಂತ್ ಕುಮಾರ್ ಹೆಚ್.ಪಿ. ಹೇಳಿದರು.
ವಿದ್ಯಾರ್ಥಿಗಲ್ಲಿ ಕೌಶಲ್ಯಗಳು ಇದ್ದಾಗಲೂ ಸಂದರ್ಶನದ ವೇಳೆ ಭಯ, ಹೆದರಿಕೆ, ಅಂಜಿಕೆ ಮುಂತಾದ ಅನೇಕ ಸಮಸ್ಯೆಗಳಿಂದ ಕೆಲಸ ಲಭಿಸುವುದಿಲ್ಲ. ಹೀಗಾಗಿ ವಿದ್ಯಾರ್ಥಿ ಜೀವನದಲ್ಲೇ ವೃತ್ತಿ ಬದುಕು ನಿರ್ವಹಿಸಲು ಸಿದ್ಧರಾಗಬೇಕು. ಕೇವಲ ಪಠ್ಯ ಓದು ಮಾತ್ರ ಸಾಲದು. ಸಮಾಜದಲ್ಲಿ ಆಗುವ ಬದಲಾವಣೆಗಳ ಬಗ್ಗೆ ನಿರಂತರ ತಿಳುವಳಿಕೆ ಪಡೆಯುತ್ತಿರಬೇಕು ಎಂದು ಸಲಹೆ ನೀಡಿದರು.
ರೆಸ್ಯೂಮೆ, ಸಿವಿ ತಯಾರಿಸುವಾಗ ಜಾಣ್ಮೆ ಅಳವಡಿಸಿಕೊಳ್ಳಬೇಕು. ಶೈಕ್ಷಣಿಕ, ವೈಯಕ್ತಿಕ ವಿವರಗಳನ್ನು ಅಚ್ಚುಕಟ್ಟಾಗಿ ಹಾಕಬೇಕು. ಸಂದರ್ಶನದ ವೇಳೆ ಗಮನ ಸೆಳೆಯುವಂತೆ ಕುಳಿತುಕೊಳ್ಳಬೇಕು ಎಂದು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.
“ಜೀವನದ ಶೈಲಿಯನ್ನು ರೂಪಿಸಿಕೊಂಡು ಅಂತಿಮ ವಿದ್ಯಾರ್ಥಿಗಳು ಪ್ರಾಯೋಗಿಕ ಬದುಕಿಗೆ ತಯಾರಾಗಬೇಕು. ಚಟುವಟಿಕೆ ಜೀವನ ಭವಿಷ್ಯ ನಿರ್ಮಿಸುತ್ತದೆ” ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಹೆಚ್.ಡಿ. ಧರ್ಮಣ್ಣ ಹೇಳಿದರು.
ಚಾಣಕ್ಯ ವಿಶ್ಯವಿದ್ಯಾಲಯದ ಉಪನ್ಯಾಸಕ ವೆಂಕಟೇಶ್ ಕೆ. ಮುದೂರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್ ಹೆಚ್.ಸಿ., ಪ್ರಮುಖರಾದ ಪ್ರದೀಪ್, ಮವೀಶ, ಸುನಿಲ್ ಕುಮಾರ್, ಅಮಿತ್, ಸಚಿನ್, ಕವಿರಾಜ್ ಇದ್ದರು.