ದೀಪಾವಳಿ ಹಬ್ಬ: ಯಾವತ್ತು, ಏನೇನು ವಿಶೇಷ?
– ಹಬ್ಬದ ದಿನ ಹಾಗೂ ಮುಹೂರ್ತ ಯಾವಾಗ?
– ಗೋಪೂಜೆ, ಲಕ್ಷ್ಮಿ ಪೂಜೆ ದೀಪಾವಳಿ ಸಂಭ್ರಮ
NAMMUR EXPRESS NEWS
ದೀಪಾವಳಿ ಎಂದರೆ ಬೆಳಕಿನ ಹಬ್ಬದ ಸಂಭ್ರಮ, ಈ ಹಬ್ಬವನ್ನು ಚಿಕ್ಕ ಮಕ್ಕಳಿಂದ ದೊಡ್ಡವರವರೆಗೂ ಕೂಡ ಸಂಭ್ರಮಿಸುವ ಹಬ್ಬ ಎಂದು ಹೇಳಬಹುದಾಗಿದೆ. ಹಿಂದೂ ಧರ್ಮದಲ್ಲಿ ಆಚರಿಸುವ ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ಪ್ರಾಕೃತಿಕ, ನೈಸರ್ಗಿಕ ಸಂಬಂಧಗಳಿದ್ದರೂ ಎಲ್ಲಾ ಹಬ್ಬಗಳೂ ಮನರಂಜನೆ ಜೊತೆಗೆ ಸಂಬಂಧಗಳನ್ನು ಬೆಸೆಯುವ ಕೊಂಡಿಗಳೇ ಆಗಿವೆ. ದೀಪಾವಳಿ ಹಬ್ಬದಲ್ಲಿ ಎಲ್ಲರೂ ಕೂಡ ಕುಟುಂಬದವರೊಂದಿಗೆ ಸಂಭ್ರಮದಿಂದ ದೀಪ ಹಚ್ಚಿ ಸಂಭ್ರಮದಿಂದ ಪೂಜೆ ಪುನಸ್ಕಾರ ಮಾಡಿ ಆಚರಿಸುವ ಹಬ್ಬವೇ ಈ ದೀಪಾವಳಿ ಹಬ್ಬ.
ದೀಪಾವಳಿ ಹಬ್ಬದ ಸಂಭ್ರಮ ಎಲ್ಲರ ಮನೆಯಲ್ಲಿಯೂ ಕೂಡ ಒಂದು ಸಮಾರಂಭದ ವಾತಾವರಣ ಆಗಿದೆ. ಈ ಹಬ್ಬದಲ್ಲಿ ಯಾವೆಲ್ಲಾ ರೀತಿಯ ವಿಶೇಷತೆಗಳಿವೆ, ಮುಹೂರ್ತ, ಯಾವ ದಿನ ಲಕ್ಷ್ಮಿ ಪೂಜೆ, ಗೋ ಪೂಜೆ ತಿಳಿಯೋಣ.
ಅಕ್ಟೋಬರ್ 30 ಬುಧವಾರದಂದು ನೀರು ತುಂಬುವ ಹಬ್ಬ, ರಾತ್ರಿ ಚಂದ್ರೋದಯದ ಕಾಲದಲ್ಲಿ ಅಭ್ಯಂಜನ ಸ್ನಾನ ಗಂಟೆ 4-30, ಅಕ್ಟೋಬರ್ 31 ಗುರುವಾರ ನರಕ ಚತುರ್ದಶಿ, ಧನಲಕ್ಷ್ಮಿ ಪೂಜೆ, ನವೆಂಬರ್ 1 ಶುಕ್ರವಾರ ಅಮಾವಾಸ್ಯೆ
ನವೆಂಬರ್ 2 ಶನಿವಾರ ಬಲಿಪಾಡ್ಯಮಿ, ಗೋಪೂಜೆ, ದೀಪಾವಳಿ ಹಬ್ಬ ಗಂಟೆ 10:30 ರಿಂದ 1 :30 ರ ಒಳಗೆ, ಸಂಜೆ 6 ಗಂಟೆಯ ನಂತರ ದೀಪ ಹಚ್ಚುವುದು.ನವೆಂಬರ್ 3 ಭಾನುವಾರ ಹಬ್ಬದ ಕರಿನವೆಂಬರ್ 4 ಸೋಮವಾರ ವರ್ಷ ತಡುಕು, ಕದಿರು ತರುವುದು ಸಂಜೆ 6 ಗಂಟೆಯಿಂದ 7.30, 9 ರಿಂದ 10:30, 12ರಿಂದ 1:30ರ ಒಳಗೆ.