ಗೌರಿ ಗಣೇಶ ಹಬ್ಬಕ್ಕೆ ಭರ್ಜರಿ ಸಿದ್ಧತೆ!
– ಗೌರಿ ಹಬ್ಬ ಹೆಣ್ಣು ಮಕ್ಕಳ ಹಬ್ಬ: ಎಲ್ಲೆಡೆ ಸಂಭ್ರಮ
– ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಗಣೇಶನ ಮೂರ್ತಿ
NAMMUR EXPRESS NEWS
ಗೌರಿ, ಗಣೇಶ ಹಬ್ಬ ಎಂದರೆ ಎಲ್ಲರಿಗೂ ಸಂಭ್ರಮ. ಎಲ್ಲೆಡೆ ಸಾರ್ವಜನಿಕವಾಗಿ ಗಣೇಶನನ್ನು ಕೂರಿಸಲೆಂದು ಭರ್ಜರಿ ತಯಾರಿಯೂ ನಡೆಯುತ್ತಿದೆ. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಈ ಹಬ್ಬಕ್ಕೆಂದು ಸಾಕಷ್ಟು ತಯಾರಿಯಲ್ಲಿ ಇರುತ್ತಾರೆ. ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನ ತಯಾರಿ ನಡೆಸಿದ್ದಾರೆ.
ಗೌರಿ ಹಬ್ಬ ಹೆಣ್ಣುಮಕ್ಕಳ ಅತ್ಯಂತ ಸಂಭ್ರಮದ ಹಬ್ಬವಾಗಿದೆ. ಈ ಹಬ್ಬದಲ್ಲಿ ತವರು ಮನೆಯಿಂದ ಬರುವ ಉಡುಗೊರೆಯನ್ನ ತುಂಬಾ ಸಂಭ್ರಮದಿಂದ ಹೆಣ್ಣು ಮಕ್ಕಳು ಆಚರಿಸುವ ಹಬ್ಬವೇ ಆಗಿದೆ.
ಹಳ್ಳಿ ಹಳ್ಳಿಗಳಿಂದ ಹಿಡಿದು ಎಲ್ಲಾ ನಗರ ಭಾಗಗಳಲ್ಲೂ ಗಣೇಶ ಕೂರಿಸುವುದು ಎಂದರೆ ಒಂದು ರೀತಿಯ ಸಂಭ್ರಮ.
ಈಗಾಗೇ ಮಾರುಕಟ್ಟೆಯಲ್ಲೂ ಕೂಡ ಗಣೇಶನ ಮೂರ್ತಿಗಳು ಬಂದಿವೆ. ಗಣೇಶನ ಮೂರ್ತಿಗಳನ್ನು ಕೆಲವೊಂದಿಷ್ಟು ಹಳ್ಳಿಗಳಲ್ಲಿ ನಗರ ಪ್ರದೇಶಗಳಲ್ಲಿ ಅದನ್ನ ಬುಕ್ ಮಾಡಿಕೊಂಡು ಹೋಗಿರುತ್ತಾರೆ, ವಿವಿಧ ಬಣ್ಣದ ವಿವಿಧ ವಿನ್ಯಾಸದಲ್ಲಿ ನಾವು ಗಣೇಶನ ಮೂರ್ತಿಯನ್ನು ಮಾರುಕಟ್ಟೆಯಲ್ಲಿ ನೋಡಬಹುದಾಗಿದೆ. ಪರಿಸರ ಸ್ನೇಹಿ ಗಣಪತಿಯನ್ನ ನಾವು ಪೂಜೆ ಮಾಡಿ ಗಣಪತಿ ಹಬ್ಬವನ್ನು ಸಂಭ್ರಮಿಸೋಣ.
ಗಣೇಶ ಹಬ್ಬವನ್ನು ಎಲ್ಲರೂ ಕೂಡ ಸಂಭ್ರಮದಿಂದ ಆಚರಣೆ ಮಾಡುತ್ತಾರೆ, ಮಾರುಕಟ್ಟೆಯಲ್ಲೂ ಕೂಡ ವಿವಿಧ ಬಗೆಯ ಹೂಗಳು ಹಣ್ಣುಗಳು ಕೂಡ ಜನರ ಗಮನ ಸೆಳೆಯುತ್ತದೆ, ಬೆಲೆಗಳು ಕೂಡ ಹೆಚ್ಚಾಗಿದ್ದು ಜನರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಕೂಡ ಇದೆ ಆದರೆ ಗಣಪತಿ ಹಬ್ಬ ಎಂದರೆ ಎಲ್ಲರೂ ಕೂಡ ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ, ಎಲ್ಲಾರ ಮನೆಗಳಲ್ಲಿ ವಿವಿಧ ಬಗೆಯ ತಿಂಡಿ ತಿನಿಸುಗಳನ್ನ ಮಾಡಿ ದೇವರಿಗೆ ನೈವೇದ್ಯವನ್ನ ಇಟ್ಟು ಪೂಜೆ ಪುನಸ್ಕಾರವನ್ನ ಮಾಡಿ ಎಲ್ಲರೂ ಕೂಡ ತುಂಬಾ ಸಂಭ್ರಮದಿಂದ ಸಂಭ್ರಮಿಸುವ ಹಬ್ಬವೇ ಗೌರಿ ಗಣೇಶ ಹಬ್ಬ.