ಕೃಷ್ಣನನಿಗಿಂದು ಜನ್ಮಾಷ್ಟಮಿ: ಎಲ್ಲೆಡೆ ಮಕ್ಕಳ ಸಂಭ್ರಮ
– ಇಸ್ಕಾನ್, ಉಡುಪಿ ಸೇರಿ ಕೃಷ್ಣ ದೇವಾಲಯಗಳಲ್ಲಿ ಪೂಜೆ
– ಕೃಷ್ಣ ರಾಧೆ ವೇಷ ಸ್ಪರ್ಧೆ: ಸಮಸ್ತ ಜನತೆಗೆ ಶುಭಾಶಯಗಳು
NAMMUR EXPRESS NEWS
ಬಾಲಕನಾಗಿದ್ದಾಗ ಕೃಷ್ಣನ ತುಂಟತನದ ಆಟ ಯೌವನದ ಕೃಷ್ಣಲೀಲೆ ಕುರುಕ್ಷೇತ್ರದಲ್ಲಿ ಬುದ್ಧಿವಂತಿಕೆ ಕೃಷ್ಣನನ್ನು ಹೀಗೆ ಎಂದು ವರ್ಣಿಸಲಸಾಧ್ಯ ಕೃಷ್ಣ ನೋಡಲು ಸ್ತ್ರೀ ಲೋಲನಂತೆ ಕಂಡರೂ ಸಹೃದಯತೆ ಗೋಪಿಕೆಯರ ಗೋವಿಂದ ಸುಭದ್ರ ದ್ರೌಪದಿಯರ ಪ್ರತಿಕ್ಷಣ ಕಾಯುವ ಪ್ರೀತಿಯ ಸಹೋದರ ಯಶೋಧೆಯ ಮುದ್ದು ಕಂದಮ್ಮಸುಧಾಮ ಅರ್ಜುನರ ಪ್ರಿಯಮಿತ್ರ ಭಕ್ತರನ್ನು ಸಲಹುವ ಭಗವಂತ .
ಬಾಲ್ಯದಿಂದಲೂ ಬೆಣ್ಣೆಯೆಂದರೇ ಬಲು ಪ್ರೀತಿ ಯಶೋಧೆ ಬೆಣ್ಣೆ ಕಡೆಯುತ್ತಿದ್ದಂತೆ ಬೆಣ್ಣೆ ಕದ್ದು ತಿನ್ನುತ್ತಿದ್ದ ಬೆಣ್ಣೆ ನಿಲುಕದಂತೆ ಕದ್ದಿಟ್ಟರು ಹುಡುಕಿ ಕದ್ದು ತಿನ್ನುತ್ತಿದ್ದವ ಗೋಕುಲದಲ್ಲಿ ಬಾಲಕೃಷ್ಣ ಕಳ್ಳಕೃಷ್ಣ , ಬೆಣ್ಣೆಕೃಷ್ಣನಾಗಿದ್ದ.
ಆಟ ಆಡುವಾಗ ಮಣ್ಣು ತಿಂದ ಎಂದು ಗದರಿಸಿ ಬಾಯ ತೆರಸಿದ ಯಶೋಧೆ ಕೃಷ್ಣನ ಬಾಯಿಯಲ್ಲಿ ವಿಶ್ವವನ್ನೇ ನೋಡಿ ಕೃಷ್ಣ ಸಾಧಾರಣ ಬಾಲಕನಲ್ಲ ಎಂದು ಅರಿತಿದ್ದಳು.
ಭಾರತ ಮೊದಲೇ ಅವತಾರ ಪುರುಷರ ನಾಡು ಇಲ್ಲಿ ಅವತಾರ ಎತ್ತಿದ್ದವರ ನೆನಪನ್ನು ಹಬ್ಬದಂತೆ ಆಚರಿಸುವ ರೂಢಿ ನಮ್ಮ ಸನಾತನ ಸಂಸ್ಕೃತಿಯದ್ದು
ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುವುದು
ಕೃಷ್ಣನ ಅವತಾರವೇ ಧರ್ಮ ಸಂಸ್ಥಾಪನೆಗೆ ದುಷ್ಟರ ನಾಶಕ್ಕಾಗಿ ಮಹಾವಿಷ್ಣು ಕೃಷ್ಣನ ಅವತಾರ ತಾಳಿ ಗರ್ಭ ಪ್ರವೇಶಿಸುವಾಗಲೇ ಕೃಷ್ಣನನ್ನು ಹೊಸಕಿ ಹಾಕುವ ಹುನ್ನಾರ ನಡೆದಿತ್ತು. ವಿಧಿಲಿಖಿತ ದೇವಕಿಗೆ ಯಾವುದೇ ಅಪಾಯಗಳು ಆಗಿರಲಿಲ್ಲ ದೇವಕಿಯ ಎಂಟನೇ ಮಗನಿಂದ ಸಾವು ಎಂದು ಕಂಸನಿಗೆ ಅಶರೀರವಾಣಿಯಿಂದ ತಿಳಿದಿದ್ದರಿಂದ ಕಂಸ ದೇವಕಿ ಮತ್ತು ವಸುದೇವನನ್ನು ಸೆರೆಮನೆಯಲ್ಲಿರಿಸಿದ್ದ ಕಾರಗೃಹ ಕೊಣೆಯಲ್ಲಿ ಗುಡುಗು ಸಿಡಿಲು ಆರ್ಭಟದ ನಡುವೆಯೂ ಪ್ರಕಾಶಮಾನವಾದ ತೇಜಸ್ಸಿನಿಂದ ಕೋಣೆಯೇ ಬೆಳಗಲಾರಂಭಿಸಿ ನೀಲ ಮೇಘ ಶ್ಯಾಮನ ಜನನವಾಗಿತ್ತು ಕೃಷ್ಣ ಹುಟ್ಟುತ್ತಿದ್ದಂತೆ ಕಾರಾಗೃಹದ ಕೊಠಡಿ ತೆರೆಯಿತು. ಅಲ್ಲಿಂದ ವಸುದೇವದ ಮಗುವನ್ನು ಗೋಕುಲಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿ ಯಮುನಾ ನದಿಯ ದಡಕ್ಕೆ ಬಂದಾಗ ಕೃಷ್ಣನ ಪಾದ ಸ್ಪರ್ಶದಿಂದ ಯಮುನಾ ನದಿ ಇಭ್ಭಾಗವಾಗಿ ಹರಿಯಲಾರಂಭಿಸಿತು. ಮಳೆ ಸುರಿಯುತ್ತಿದ್ದು ಶೇಷ ನಾಗಹೆಡೆ ಬಿಚ್ಚಿ ಮಳೆಯಿಂದ ಕೃಷ್ಣನಿಗೆ ರಕ್ಷಣೆ ನೀಡಿದ್ದ ವಸುದೇವ ಗೋಕುಲದಲ್ಲಿ ಯಶೋಧೆಯೊಡನೆ ಮಗುವನ್ನು ಬಿಟ್ಟು ಬಂದಿದ್ದ. ಗೋಕುಲದಲ್ಲಿ ನಂದ ಮತ್ತು ಯುಶೋಧೆ ಮಗುವಿಗೆ” ಕೃಷ್ಣ” ಎಂದು ನಾಮಕರಣ ಮಾಡಿದರು ಅಲ್ಲಿಂದ ಕೃಷ್ಣ ಗೋಕುಲ ಕೃಷ್ಣನಾಗಿದ್ದ .
ಕಾಳಿಂಗ ಮರ್ಧನ ಮಾಡಿದವ, ಅರಿಷ್ಟಾಸುರನಿಗೆ ಬುದ್ದಿಕಲಿಸಿದವ ಬ್ರಹ್ಮನಿಗೆ ಪಾಠ ಕಲಿಸಿದ ಕೃಷ್ಣ. ಗೋವರ್ಧನ ಿರಿಯನ್ನು ಿರುಬೆರಳಲ್ಲಿ ಎತ್ತಿ ಹಿಡಿದಿವ,ಅಘಾಸುರ ಚಾಣೂರ ಕಂಸನಂತಹ ರಾಕ್ಷಸ ಗುಣದವರ ಸಂಹರಿಸಿ ಧರ್ಮ ಸಂಸ್ಥಾಪನೆಗಾಗಿ ಜನಿಸಿದ ಅವತಾರ ಪುರುಷ.
ಕೃಷ್ಣ ಎಂದರೆ ಚೇಷ್ಟೆಗೆ ಪ್ರಸಿದ್ದಿ ಸಣ್ಣ ಮಗುವಾಗಿದ್ದಾಗ ಯಶೋಧೆಯ ಮಮತೆಯ ಹೊಳೆ ಹರಿಸಿದವ, ಮಿತ್ರನಾಗಿ ಸುಧಾಮನ ದಾರಿದ್ರ್ಯಾ ಪರಿಹರಿಸಿದವ, ತಮ್ಮನಾಗಿ ಬಲರಾಮನಿಗೆ ಜೊತೆಯಾದವ, ಗೊಲ್ಲನಾಗಿ ಗೋವುಗಳ ಪರಿಪಾಲಿಸಿದವ, ಕುರುಕ್ಷೇತ್ರದ ಗೀತಪ್ರದಾಯಕ ಮೀರಾಳಿಗೆ ಮಾದವನಾಗಿ, ಭಕ್ತ ಕುಂಬಾರನಿಗೆ ವಿಠ್ಠಲನಾಗಿ, ಬೆಣ್ಣೆಕೃಷ್ಣ, ಮುದ್ದುಕೃಷ್ಣ, ನೀಲ ಕೃಷ್ಣ ನಾಗಿ ಅವರವರ ಭಾವಕ್ಕೆ ತಕ್ಕಂತೆ ಬೇರೆ ಬೇರೆ ತೆರನಾಗಿ ಅವರು ಇಷ್ಟಪಟ್ಟ ರೀತಿಯಲ್ಲೇ ಅವತಾರಗಳನ್ನು ಎತ್ತಿ ನೂರು ತಪ್ಪುಗಳನ್ನು ಮನ್ನಿಸುವ ಸಮಾಧಾನ ಗುಣದವ ಧರ್ಮ ಪರಿಪಾಲನೆ ನಿಮಿತ್ತಮಾತ್ರನಾಗಿ ಜಗತ್ತನ್ನು ನೋಡುವ ಪರಿ ಧೀನರಿಗೆ ಸಹಾಯ ನೀಡುವ ಹಸ್ತವಾಗಿ ಮಿತ್ರತ್ವಕ್ಕಾಗಿ, ಗುರುವಾಗಿ ಮಾರ್ಗದರ್ಶಿಯಾಗಿ, ಧರ್ಮಕ್ಕಾಗಿ ಶಾಸ್ತ್ರವನೆತ್ತು ಎಂದು ಹೇಳುವ ಪರಮಾತ್ಮನಾದ ಶ್ರೀ ಕೃಷ್ಣನ ಜನ್ಮದಿನವನ್ನು ಜನ್ಮಾಷ್ಟಮಿಯಾಗಿ ಆಚರಿಸುತ್ತೇವೆ.
ಈಗಾಗಲೇ ಉಡುಪಿ ಕೃಷ್ಣ ಮಠ, ಬೆಂಗಳೂರು ಇಸ್ಕಾನ್ ಸೇರಿ ಎಲ್ಲಾ ಕೃಷ್ಣ ದೇವಾಲಯಗಳಲ್ಲಿ ಪೂಜೆ ನಡೆಯುತ್ತಿದೆ.
ಮಕ್ಕಳು ಸಂಭ್ರಮದಿಂದ ಕೃಷ್ಣ ರಾಧೆ ವೇಷ ಹಾಕಿದ್ದಾರೆ.
ಸಮಸ್ತ ಜನತೆಗೆ ಶುಭಾಶಯಗಳು