ನಾಗರಹಾವನೇ ನುಂಗಿತ್ತು ನಾಗರ ಹಾವು?!
– ಗದಗದ ಶಿರಹಟ್ಟಿಯಲ್ಲೊಂದು ವಿಚಿತ್ರ ಘಟನೆ
– ವಿಚಿತ್ರ ಘಟನೆ ನೋಡಿ ಜನರಿಗೇ ಭಯ
NAMMUR EXPRESS NEWS
ಗದಗ: ನಾಗರ ಹಾವೊಂದು ಇನ್ನೊಂದು ನಾಗರ ಹಾವನ್ನು ನುಂಗಿದ ವಿಚಿತ್ರ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಅನ್ನದಾನೀಶ್ವರ ಪ್ರೌಢಶಾಲೆ ಆವರಣದಲ್ಲಿ ನಡೆದಿಡೆ. ನಾಗರಹಾವು ಗಾತ್ರದಲ್ಲಿ ತನ್ನಷ್ಟೇ ದೊಡ್ಡದಿರುವ ಮತ್ತೊಂದು ನಾಗರಹಾವನ್ನು ಸಾಕಷ್ಟು ನುಂಗಿದ ಸ್ಥಿತಿಯಲ್ಲಿ ಕಂಡುಬಂದಿತ್ತು ಮತ್ತು ಅದು ಹೆಚ್ಚು ಹೆಚ್ಚು ಭಾಗವನ್ನು ನುಂಗಿಕೊಳ್ಳುತ್ತಾ ಸಾಗುತ್ತಿತ್ತು. ಈ ದೃಶ್ಯವನ್ನು ನೋಡಲು ನೂರಾರು ಮಂದಿ ಮಂದಿ ಅಲ್ಲಿ ನೆರೆದಿದ್ದರು. ಕೆಲವರು ಅದನ್ನು ಓಡಿಸಲು ಪ್ರಯತ್ನ ಮಾಡಿದರಾದರೂ ಕೆಲವರು ಹಾಗೆಲ್ಲ ಮಾಡುವುದು ಬೇಡ ಎಂದರು. ಆದರೆ, ನುಂಗಲಾದ ಹಾವು ಹೆಚ್ಚು ಪ್ರತಿರೋಧ ತೋರಿಸುತ್ತಿದ್ದಂತೆ ಕಾಣಲಿಲ್ಲ.
ಒಂದೋ ಅದು ಮೊದಲೇ ಸತ್ತಿರುವ ಸಾಧ್ಯತೆ ಇದೆ. ಇಲ್ಲವೇ ಅದು ನುಂಗಿದ ಬಳಿಕ ಉಸಿರು ಕಳೆದುಕೊಂಡಿರುವ ಸಾಧ್ಯತೆಯೂ ಇದೆ. ಕೆಲವರು ನಾಗರ ಹಾವು ಯಾವುದೇ ಆಹಾರ ಸಿಗದೆ ಈ ರೀತಿಯಾಗಿ ತನ್ನದೇ ಜಾತಿಯ ಹಾವನ್ನು ತಿಂದಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ರೀತಿಯ ವಿದ್ಯಮಾನಗಳು ನಡೆಯುತ್ತವೆ ಎಂದು ಉರಗ ತಜ್ಞರೂ ಹೇಳುತ್ತಾರೆ. ಆದರೆ, ಈ ಘಟನೆಯಲ್ಲಿ ನಿಜ ಸಂಗತಿ ಏನೆಂದು ಗೊತ್ತಿಲ್ಲ. ಸದ್ಯ ಹಾವು ನುಂಗುವ ದೃಶ್ಯ ಸ್ಥಳಿಯರ ಮೊಬೈಲ್ನಲ್ಲಿ ಸೆರೆಯಾಗಿ ಎಲ್ಲೆಡೆ ವೈರಲ್ ಆಗಿದೆ