Categories
agumbe ಉಡುಪಿ ಉತ್ತರ ಕನ್ನಡ ಕಡೂರು ಕರಾವಳಿ ಕಲಬುರಗಿ ಕಾರವಾರ ಕಾರ್ಕಳ ಕುಂದಾಪುರ ಕೊಪ್ಪ ಗದಗ ಚಿಕ್ಕಬಳ್ಳಾಪುರ ಚಿಕ್ಕಮಗಳೂರು ತೀರ್ಥಹಳ್ಳಿ ತುಮಕೂರು ದಕ್ಷಿಣ ಕನ್ನಡ ಪುತ್ತೂರು ಬೆಂಗಳೂರು ಬೆಳಗಾವಿ ಬೆಳ್ತಂಗಡಿ ಮಂಗಳೂರು ಮಲ್ನಾಡ್ ಮುಲ್ಕಿ ಮೈಸೂರು ರಾಜ್ಯ ವಿಜಯನಗರ ವಿಜಯಪುರ ಶಿವಮೊಗ್ಗ ಶೃಂಗೇರಿ ಸಾಗರ ಹಾವೇರಿ ಹಾಸನ ಹೊಸನಗರ

ಅಯ್ಯೋ ದೇವ್ರೇ..ಈ ವಾರವೂ ಮಳೆ!

ಅಯ್ಯೋ ದೇವ್ರೇ..ಈ ವಾರವೂ ಮಳೆ!
– ಚಂಡಮಾರುತದ ಪ್ರಭಾವದಿಂದ ಭಾರಿ ಮಳೆ ಸಾಧ್ಯತೆ
– ಅಕ್ಟೋಬರ್ 8ರವರೆಗೂ ಗಾಳಿ ಜತೆಗೆ ಮಳೆ ಅಲರ್ಟ್
– ದಸರಾಕ್ಕೂ ಮಳೆ ಅಡ್ಡಿ: ಅಡಿಕೆ ಬೆಳೆಗೆ ಸಂಕಷ್ಟ

 

NAMMUR EXPRESS NEWS
ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪುಗೊಂಡಿದೆ. ಇದರಿಂದಾಗಿ ಕರ್ನಾಟಕ, ಒಡಿಶಾ, ಆಂಧ್ರಪ್ರದೇಶ ಸೇರಿ ಹಲವೆಡೆ ಮಳೆಯಾಗಲಿದೆ. ಈಗಾಗಲೇ ಕಳೆದ 6 ತಿಂಗಳಿಂದ ವಾಡಿಕೆಗಿಂತ ಹೆಚ್ಚು ಮಳೆ ಆಗಿದ್ದು, ರೈತರು ಹೈರಾಣಾಗಿದ್ದಾರೆ. ಇದೀಗ ಮತ್ತೆ ಮೋಡ, ಮಳೆ ಜನ ಜೀವನಕ್ಕೆ ಭಾರೀ ತೊಂದರೆ ಆಗಿದೆ.
ಚಂಡಮಾರುತದ ಪ್ರಭಾವದಿಂದಾಗಿ ಕರಾವಳಿಯಲ್ಲಿ ಗಂಟೆಗೆ 40 ರಿಂದ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಂಡಮಾರುತ ಪ್ರಭಾವ ಕರ್ನಾಟಕದ ಮೇಲೂ ಆಗಲಿದ್ದು, ಅಕ್ಟೋಬರ್ 8ರವರೆಗೆ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ವಿಜಯನಗರ, ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆಯಲ್ಲಿ ಮಳೆಯಾಗಲಿದೆ.
ಯಲ್ಲಾಪುರದಲ್ಲಿ ಭಾರಿ ಮಳೆಯಾಗಿದೆ, ಹೊನ್ನಾವರ, ಆಗುಂಬೆ, ಅಂಕೋಲಾ, ಕ್ಯಾಸಲ್​ರಾಕ್, ಗೇರುಸೊಪ್ಪ, ಮಂಕಿ, ಕದ್ರಾ, ಕಾರವಾರ, ಕೋಟಾ, ಕೊಟ್ಟಿಗೆಹಾರ, ಕುಮಟಾ, ಕುಂದಾಪುರ, ಲೋಂಡಾ, ಮಂಗಳೂರು, ಮುಂಡಗೋಡಿನಲ್ಲಿ ಮಳೆಯಾಗಿದೆ.
ಅಡಿಕೆ ಸೀಸನ್ ಆಗಿರುವುದರಿಂದ ಅಡಿಕೆ ಬೆಳೆ ಗಾರರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಈ ಬಾರಿ ದಸರಾಕ್ಕೂ ಮಳೆ ಹಲವೆಡೆ ಅಡ್ಡಿ ಮಾಡಿದೆ.

Categories
ಗದಗ

ಸಂಪ್ರದಾಯದಂತೆ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದ ಮುಸ್ಲಿಂ ವ್ಯಕ್ತಿ!

ಸಂಪ್ರದಾಯದಂತೆ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದ ಮುಸ್ಲಿಂ ವ್ಯಕ್ತಿ!

* “ದೇವರೊಬ್ಬನೇ ನಾಮ ಹಲವು” ಎಂಬ ಭಾವೈಕ್ಯತೆ ಸಾರಿದ ಮುಸ್ತಾಪ್ ಮತ್ತು ಯಾಸ್ಮಿನಾಬಾನು
* ಮಗನ ಆಸೆಗಾಗಿ ಹಿಂದೂ ಸಂಪ್ರದಾಯದಂತೆ ಗಣೇಶ ಪೂಜೆ!

NAMMUR EXPRESS NEWS
ಗದಗ: ದೇವರು-ಧರ್ಮದ ಹೆಸರಿನಲ್ಲಿ ಕೋಮು ಭಾವನೆ ಕೆರಳಿಸಿ ಸಮಾಜದಲ್ಲಿ ಅಶಾಂತಿಗೆ ಕಾರಣರಾಗುವವರ ನಡುವೆ ಇಲ್ಲೊಬ್ಬ ಮುಸ್ಲಿಂ ಧರ್ಮದ ವ್ಯಕ್ತಿ ತನ್ನ ಮಗನ ಆಸೆ, ಪ್ರೀತಿ, ಹಠಕ್ಕೆ ಕಟ್ಟುಬಿದ್ದು ತನ್ನ ಮನೆಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ “ದೇವರೊಬ್ಬನೇ ನಾಮ ಹಲವು” ಎಂಬ ಭಾವೈಕ್ಯತೆಯ ಸಂದೇಶಕ್ಕೆ ಪೋಷಣೆ ನೀಡಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಮುಸ್ಲಿಂ ಧರ್ಮದ ಮುಸ್ತಾಪ್ ಮಾಬುಸಾಬ್ ಕೋಲ್ಕಾರ ಎಂಬುವವರು ಗಣೇಶ ಚತುರ್ಥಿ ದಿನ ಹಿಂದೂ ಸಂಪ್ರದಾಯದಂತೆ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಭಾವೈಕ್ಯತೆ ಸಾರಿದ್ದಾರೆ.
ಮುಸ್ತಾಪ್ ಮತ್ತು ಯಾಸ್ಮಿನಾಬಾನು ದಂಪತಿಗೆ ಐವರು ಮಕ್ಕಳು.
ಅವರ ಕೊನೆಯ ಮಗ 3 ವರ್ಷದ ಹಜರತಲಿಗೆ ಗಣೇಶ ದೇವರ ಮೂರ್ತಿಯೆಂದರೆ ಬಹಳ ಪ್ರೀತಿ. ದೇವರು-ಧರ್ಮ, ಜಾತಿ ಹೆಸರಿನಲ್ಲಿ ದೇಶ್ಲಿ ಡಯುತ್ತಿರುವ ಅರಾಜಕತೆ, ಧರ್ಮಯುದ್ದದ ಬಗ್ಗೆ ಏನೂ ಅರಿಯದ ಪುಟಾಣಿ ತಾನು ಗಣೇಶನನ್ನು ಮನೆಗೆ ತೆಗೆದುಕೊಂಡು ಹೋಗಬೇಕು. ಎಲ್ಲರಂತೆ ಪೂಜಿಸಬೇಕು, ಪಟಾಕಿ ಹೊಡೆಯಬೇಕು. ಕುಣಿದು ಕುಪ್ಪಳಿಸಬೇಕೆಂಬ ಹಂಬಲ.. ಈ ಬಗ್ಗೆ ತಂದೆ-ತಾಯಿ ಹತ್ತಿರ ಕೇಳಿ ಅತ್ತು ಕರೆದು ಹಠ ಮಾಡಿದ್ದರೂ ತಂದೆ ಹೇಗೂ ಸಮಾಧಾನ ಮಾಡಿ ಮಾತು ಮರೆಸಿದ್ದರು.
ಆದರೆ ಗಣೇಶ ಚತುರ್ಥಿ ದಿನ ಎಲ್ಲರೂ ಮನೆಗೆ ಗಣೇಶ ಮೂರ್ತಿ ತರುವುದನ್ನು ಗಮನಿಸಿದ ಹಜರತಲಿ, ತನ್ನ ಅಣ್ಣನೊಂದಿಗೆ ಗಣೇಶಮೂರ್ತಿ ಮಾರಾಟ ಮಾಡುವಲ್ಲಿಗೆ ಹೋಗಿ ಗಣೇಶನ ಮೂರ್ತಿಯನ್ನು ಮನೆಗೆ ತಂದಿದ್ದಾರೆ. ಇದನ್ನು ಕಂಡ ತಂದೆ-ತಾಯಿ ಒಂದು ಕ್ಷಣ ಮೌನವಾಗಿದ್ದರು. ಗ್ರಾಮೀಣ ಭಾಗದ ಪರಿಸರ, ಜಾತಿ ಧರ್ಮದ ಹಂಗಿಲ್ಲದೇ ಎಲ್ಲರೂಂದಿಗೆ ಸಹೋದರತ್ವ ಭಾವನೆಯಿಂದ ಬದುಕುವುದನ್ನು ಅರಿತ ತಂದೆ-ತಾಯಿ ಮಗನ ಬಗ್ಗೆ ಒಂದಷ್ಟೂ ಬೇಸರ ಮಾಡಿಕೊಳ್ಳದೇ ಗಣೇಶನ ಮೂರ್ತಿಯಿಂದ ಶ್ರದ್ಧಾ ಭಕ್ತಿಯಿಂದ ಬರ ಮಾಡಿಕೊಂಡು ಮನೆಯಲ್ಲಿ ಪ್ರತಿಷ್ಠಾಪಿಸಿ ಹಿಂದೂ ಸಂಪ್ರದಾಯದಂತೆ ಪೂಜಿಸಿದ್ದಾರೆ.
ಮಗ ಹಜರತಲಿಗೆ ಗಣೇಶನ ಮೂರ್ತಿಯೆಂದರೆ ತುಂಬಾ ಇಷ್ಟ.. ಅಂಗನವಾಡಿಯಲ್ಲೂ ರಾಷ್ಟ್ರೀಯ ಹಬ್ಬದ ದಿನ ಹಿಂದೂ ದೇವರ ವೇಷಭೂಷಣ ತೊಡಿಸಿದ್ದೇವೆ. ಮಕ್ಕಳು ದೇವರ ಸಮಾನ ಅಂತಾರೆ, ದೇವರೇ ಮನೆಗೆ ಬಂದಂತಾಗಿದ್ದು ಶೃದ್ಧೆ, ಭಕ್ತಿ, ಸಂಭ್ರಮದಿಂದ ಗಣೇಶನ ಮೂರ್ತಿಯನ್ನು ಪೂಜಿಸುತ್ತೇವೆ. ಪ್ರತಿವರ್ಷವೂ ನಮ್ಮ ಮನೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸುತ್ತೇವೆ ಎಂದು
ಮುಸ್ತಪಾ- ಯಾಸ್ಮಿನಾಬಾನು ಸಂತಸ ವ್ಯಕ್ತಪಡಿಸಿದ್ದಾರೆ.

Categories
ಗದಗ

ಶೀಘ್ರ ದಲ್ಲಿ ಜಿಲ್ಲಾ ಮತ್ತು ತಾಪಂ ಚುನಾವಣೆ?!

ಶೀಘ್ರ ದಲ್ಲಿ ಜಿಲ್ಲಾ ಮತ್ತು ತಾಪಂ ಚುನಾವಣೆ?!

– ಸರ್ಕಾರದಿಂದ ಸಿದ್ಧತೆ: ಕೋರ್ಟ್ ಕಟಕಟೆಗೆ ಮೀಸಲಾತಿ 

– ಜಿಎಸ್ ಟಿ ಹೊಂದಿದವರು, ಇನ್ ಕಮ್ ಟ್ಯಾಕ್ಸ್ ಕಟ್ಟುವವರಿಗೆ ಗ್ಯಾರಂಟಿ

NAMMUR EXPRESS NEWS 

ಗದಗ: ರಾಜ್ಯದಲ್ಲಿ ಶೀಘ್ರ ಜಿಲ್ಲಾ ಮತ್ತು ತಾಪಂ ಚುನಾವಣೆ ಸರ್ಕಾರ ನಡೆಸಲಿದೆ ಎಂದು ಕಾನೂನು ಸಂಸದೀಯ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಹೇಳಿದ್ದಾರೆ.

ಜಿಪಂ, ತಾಪಂ ಮೀಸಲಾತಿ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳಾಗಿವೆ. ಜಿಪಂ, ತಾಪಂ ಮೀಸಲಾತಿ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳಾಗಿವೆ. ಈಗ ಸಿದ್ಧತೆ ನಡೆಸಿದ್ದೇವೆ ಎಂದರು.

ಜಿಪಂ, ತಾಪಂ ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲಾತಿ ಪ್ರಕಟಿಸಲು ಸರ್ಕಾರ ವಿಫಲವಾಗಿದೆ ಎಂದು ಸರ್ಕಾರದ ಕ್ರಮ ಆಕ್ಷೇಪಿಸಿ ರಾಜ್ಯ ಚುನಾವಣಾ ಆಯೋಗ ಹಾಗೂ ಮತ್ತಿತರರು 3 ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು. ರಾಜ್ಯದ ಎಲ್ಲ 31 ಜಿಪಂ ಹಾಗೂ ತಾಪಂ ಕ್ಷೇತ್ರ ಪುನ‌ರ್ ವಿಂಗಡಣೆ ಪೂರ್ಣಗೊಂಡಿದೆ, ಆದರೆ ಮೀಸಲು ನಿಗದಿಗೆ ಅಲ್ಪ ಕಾಲಾವಕಾಶ ಬೇಕಾಗುತ್ತದೆ. ಈ ಬಗ್ಗೆ ನಮ್ಮ ಅಡ್ವಕೇಟ್ ಜನರಲ್ ಈಗಾಗಲೇ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಜಿಲ್ಲಾ ಮತ್ತು ತಾಪಂಗೆ ಕಾನೂನಾತ್ಮಕವಾಗಿ ಚುನಾವಣೆ ನಡೆಸಬೇಕಾಗಿದೆ. ಜಿಪಂ, ತಾಪಂ ಚುನಾವಣೆ ಮಾಡೋದಕ್ಕೆ ಹೆಜ್ಜೆ ಇಡುತ್ತದೆ, ಆದಷ್ಟು ಬೇಗ ಘೋಷಣೆ ಮಾಡುತ್ತೇವೆ. ಜಿಪಂ ತಾಪಂ ಚುನಾವಣೆಯ ವಿಷಯ ನ್ಯಾಯಾಲಯದಲ್ಲಿದೆ ಎಂದರು.

ಜಿಎಸ್ ಟಿ ಹೊಂದಿದವರು, ಇನ್ ಕಮ್ ಟ್ಯಾಕ್ಸ್ ಕಟ್ಟುವವರಿಗೆ ಗ್ಯಾರಂಟಿ

ಗ್ಯಾರಂಟಿ ಸ್ಥಗಿತದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಗ್ಯಾರಂಟಿ ಯೋಜನೆ ಬಂದ್‌ ಆಗಲ್ಲ, ಬಂದ್ ಮಾಡೋದಕ್ಕೆ ಯಾವುದೇ ಕಾರಣ ಇಲ್ಲ. ಜಿಎಸ್ ಟಿ ಹೊಂದಿದವರು, ಇನ್ ಕಮ್ ಟ್ಯಾಕ್ಸ್ ಕಟ್ಟುವವರಿಗೆ ಗ್ಯಾರಂಟಿ ಕೊಡಬಾರದು ಅಂತಾ ಮಾಡಿದ್ದೇವೆ. ತಪ್ಪಿಸಿ, ನುಸುಳಿ ಬಂದವರನ್ನು ತೆಗೆಯುವ ವ್ಯವಸ್ಥೆ ಸದ್ಯದ ನಿಯಮಗಳಲ್ಲಿ ಇದೆ. ಆದರೆ ಗ್ಯಾರಂಟಿ ಕಡಿಮೆಗೊಳಿಸುವುದು, ಸ್ಥಗಿತಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ. ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

Categories
ಗದಗ

ಗದಗದಲ್ಲಿ ಕಾಂಗ್ರೆಸ್‌ ಕಾರ್ಯಕರ್ತನ ಹತ್ಯೆ..!

ಗದಗದಲ್ಲಿ ಕಾಂಗ್ರೆಸ್‌ ಕಾರ್ಯಕರ್ತನ ಹತ್ಯೆ..!
– ಅಟ್ಟಾಡಿಸಿ ಕೊಲೆಗೈದು ಮರಕ್ಕೆ ನೇತುಹಾಕಿದ ದುಷ್ಕರ್ಮಿಗಳು
– ಕೊಲೆಯ ಕಾರಣ ತನಿಕೆಯಿಂದ ತಿಳಿದು ಬರಬೇಕಿದೆ

NAMMUR EXPRESS NEWS
ಗದಗ: ಚಿತ್ರಹಿಂಸೆ ನೀಡಿ ವ್ಯಕ್ತಿಯ ಭೀಕರ ಹತ್ಯೆ ಮಾಡಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ರೋಣ ವಿಧಾನಸಭಾ ಕ್ಷೇತ್ರದ ಡಂಬಳ ಹೋಬಳಿಯ ಗ್ಯಾರಂಟಿ ಫಲಾನುಭವಿಗಳ ಸಮಾವೇಶದ ಹೊತ್ತಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತನೊಬ್ಬನ ಭೀಕರ ಕೊಲೆಯಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಬಳಿ ಜಮೀನೊಂದರಲ್ಲಿ ಮರಕ್ಕೆ ನೇತು ಹಾಕಿದ ಸ್ಥಿತಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತನ ಶವ ನೇತಾಡುತ್ತಿದೆ. ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಪ್ರಮುಖ ಕಾರ್ಯಕರ್ತ ಡೋಣಿ ಗ್ರಾಮದ ಶರಣಪ್ಪ ಸಂದಿಗೌಡ್ರ ಕೊಲೆಗೀಡಾದ ವ್ಯಕ್ತಿ. ಕೊಲೆಗೂ ಮುನ್ನ ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ಮಾಡಿರುವ ದುಷ್ಕರ್ಮಿಗಳು, ಕಣ್ಣಿಗೆ ಕಾರದಪುಡಿ ಎಸೆದು ಹಲ್ಲೆ ಮಾಡಿದ್ದಾರೆ. ನಂತರ ಶವ ತೂಗು ಹಾಕಿ ವಿಕೃತಿ ಮೆರೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಂದು ಬೆಳ್ಳಂಬೆಳಿಗ್ಗೆ ಮರದಲ್ಲಿ ನೇತಾಡುತ್ತಿರುವ ಶವ ನೋಡಿದ ಸ್ಥಳೀಯರು ಬೆಚ್ಚಿ ಬಿದ್ದಿದ್ದು, ಇಂದು ಡಂಬಳದಲ್ಲಿ ಕಾಂಗ್ರೆಸ್ ಪಕ್ಷದಿಂದ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ ಕಾರ್ಯಕರ್ತರಲ್ಲಿ ಆತಂಕ ಮೂಡಿದೆ. ಯಾವ ಕಾರಣಕ್ಕಾಗಿ ಈ ಕೊಲೆ ನಡೆದಿದೆ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಘಟನೆಯ ಸುದ್ದಿ ತಿಳಿದ ಮುಂಡರಗಿ ಠಾಣೆಯ ಇನ್ಸ್‌ಪೆಕ್ಟ‌ರ್ ಮಂಜುನಾಥ್ ಕುಸುಗಲ್ಲ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆ ಯಾವ ಕಾರಣಕ್ಕಾಗಿ ನಡೆದಿರಬಹುದು ಎಂದು ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೊಲೆ ಮಾಡಿದ ಆರೋಪಿಗಳ ಪತ್ತೆಗೆ ಜಾಲ ಬೀಸಿರುವ ಮುಂಡರಗಿ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

Categories
ಗದಗ

ಉದ್ಘಾಟನೆ ವೇಳೆ ರಾಮ ಮಂದಿರದ ಮೇಲೆ ಹದ್ದು ಹಾರಾಟ!

ಉದ್ಘಾಟನೆ ವೇಳೆ ರಾಮ ಮಂದಿರದ ಮೇಲೆ ಹದ್ದು ಹಾರಾಟ!
– ಪೂಜೆ ವೇಳೆ ಆಂಜನೇಯ ಪ್ರತ್ಯಕ್ಷ
– ರಾಮ ನಾಮ ಸ್ಮರಣೆ ವೇಳೆ ಬಂದ ಹನುಮ!

NAMMUR EXPRESS NEWS
ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ಪ್ರಾಣ ಪ್ರತಿಷ್ಠಾ ಸಮಾರಂಭವು ದೈವಿಕ ದೃಶ್ಯಕ್ಕೆ ಸಾಕ್ಷಿಯಾಯಿತು, ಈ ಕಾರ್ಯಕ್ರಮ ನಡೆಯುತ್ತಿರುವಾಗ ಹದ್ದು ದೇವಾಲಯದ ಮೇಲೆ ಸುತ್ತುತ್ತಿರುವುದು ಕಂಡುಬಂದಿದೆ. ಸಮಾರಂಭದಲ್ಲಿ ಹದ್ದಿನ ಉಪಸ್ಥಿತಿಯನ್ನು ದೈವಿಕ ಆಶೀರ್ವಾದದ ಸಂಕೇತವಾಗಿ ಮತ್ತು ಭಗವಾನ್ ರಾಮನ ಉಪಸ್ಥಿತಿಯ ಸಂಕೇತವಾಗಿ ನೋಡಲಾಗಿದೆ. ಹಿಂದೂ ಪುರಾಣಗಳ ಪ್ರಕಾರ, ಹದ್ದುಗಳು ವಿಷ್ಣುವಿನ ವಾಹನಗಳು ಎಂದು ನಂಬಲಾಗಿದೆ, ಅದರಲ್ಲಿ ರಾಮನ ಅವತಾರವೆಂದು ಪರಿಗಣಿಸಲಾಗಿದೆ.

ಹದ್ದಿನ ದರ್ಶನವು ರಾಮಲಲ್ಲಾ ಪ್ರತಿಷ್ಠಾಪನೆಗೆ ನಿಗೂಢ ಸ್ಪರ್ಶವನ್ನು ನೀಡಿದೆ ಮತ್ತು ಸಮಾರಂಭದಲ್ಲಿ ಹಾಜರಿದ್ದ ಭಕ್ತರಲ್ಲಿ ವಿಸ್ಮಯ ಮತ್ತು ಆಶ್ಚರ್ಯದ ಭಾವನೆಯನ್ನು ಸೃಷ್ಟಿಸಿದೆ. ವಾತಾವರಣವು ಭಕ್ತಿ ಮತ್ತು ಆಧ್ಯಾತ್ಮಿಕತೆಯ ಪ್ರಜ್ಞೆಯಿಂದ ತುಂಬಿರುವುದರಿಂದ ಇದು ಅದೃಷ್ಟದ ಸಂಕೇತ ಮತ್ತು ದೇವಾಲಯದ ಭವಿಷ್ಯಕ್ಕೆ ಸಕಾರಾತ್ಮಕ ಶಕುನ ಎಂದು ಅನೇಕರು ನಂಬುತ್ತಾರೆ. ಮಾಲಿನಿ ಪಾರ್ಥಸಾರಥಿ ಅವರು ಸಾಮಾಜಿಕ ಮಾಧ್ಯಮ ಪ್ಲಾಟ್ಸಾರ್ಮ್ ಎಕ್ಸಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಶಂಖದ ದೈವಿಕ ಶಬ್ದವು ಮೊಳಗಿದಾಗ ಹದ್ದು ದೇವಾಲಯದ ಸುತ್ತಲೂ ಸುತ್ತುತ್ತಿರುವುದನ್ನು ತೋರಿಸುತ್ತದೆ.

ಗದಗ: ಎಲ್ಲಿ ರಾಮನೋ ಅಲ್ಲಿ ಹನುಮನು ಅನ್ನುವ ಮಾತನ್ನು ನಾವು ಕೇಳಿದ್ದೇವೆ. ಆ ಮಾತು ರಾಮ ಮಂದಿರ ಲೋಕಾರ್ಪಣೆಯ ಸಂದರ್ಭದಲ್ಲಿ ಕೆಲವು ಕಡೆ ನಿಜವಾಗಿದೆ. ಗದಗ ಜಿಲ್ಲೆಯ ಎರಡು ಕಡೆ ರಾಮನ ಪೂಜೆ, ಭಜನೆ ನಡೆಯುತ್ತಿದ್ದ ಸ್ಥಳಕ್ಕೆ ಆಂಜನೇಯ ಆಗಮಿಸಿ, ಪೂಜೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡದ್ದು ಕಂಡುಬಂತು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾನ ಹಿನ್ನೆಲೆಯಲ್ಲಿ ಮುಳಗುಂದ ಪಟ್ಟಣದ ಶ್ರೀರಾಮ ಮಂದಿರದಲ್ಲಿ ಪೂಜೆ ಏರ್ಪಡಿಸಲಾಗಿತ್ತು. ಅಲ್ಲಿ ಶ್ರೀರಾಮ ದೇವರ ಪೂಜೆ ವೇಳೆ ವಾನರ ರೂಪಿ ಹನುಮ ಪ್ರತ್ಯಕ್ಷನಾಗಿದ್ದಾನೆ! ಗರ್ಭಗುಡಿ ಹೊಸ್ತಿಲಲ್ಲಿ ಕುಳಿತು ಶ್ರೀರಾಮನ ದರ್ಶನ ಪಡೆದ ಹನುಮ ಅಚ್ಚರಿ ಮೂಡಿಸಿದ್ದಾನೆ. ರಾಮನ ದರ್ಶನ ಮಾಡಿ ಅಲ್ಲಿಗೆ ಬಂದ ಭಕ್ತರ ಜತೆಗೆ ಪ್ರೀತಿಯಿಂದ ಮೈದಡವಿಸಿಕೊಂಡು ತೆರಳಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಕೂಡಾ ಪೂಜೆಯ ವೇಳೆ ಹನುಮ ಆಗಮಿಸಿದ್ದಾನೆ. ಶ್ರೀ ರಾಮನ ಆರಾಧನೆ ಕಾರ್ಯಕ್ರಮಕ್ಕೆ ರಾಮನ ಬಂಟ ಹನುಮಂತ ಬಂದಿದ್ದು ಎಲ್ಲರಿಗೂ ಖುಷಿ ನೀಡಿತು. ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಶ್ರೀ ರಾಮ ಹಾಗೂ ಮಾರುತಿ ದೇವರ ಪೂಜೆ, ಹವನ ನಡೆಯುತ್ತಿತ್ತು. ಸೋಮೇಶ್ವರ ದೇವಸ್ಥಾನದಲ್ಲಿ ನಡೆದ ಯಜ್ಞದ ಸಮಯದಲ್ಲಿ ಕಾಣಿಸಿಕೊಂಡ ಹನುಮ ತುಂಬ ಹೊತ್ತು ಯಜ್ಞ ಕುಂಡದ ಬಳಿ ಕುಳಿತು ಯಜ್ಞವನ್ನು ವೀಕ್ಷಿಸಿದ್ದಾನೆ. ಹೋಮ ಮುಗಿಯುವವರೆಗೂ ಹನುಮ ಅಲ್ಲಿಯೇ ಇದ್ದು ಜನರಲ್ಲಿ ಅಚ್ಚರಿ ಮೂಡಿಸಿತು. ಹೋಮ ಕುಂಡದ ಪಕ್ಕದಲ್ಲಿ ಕುಳಿತ ಹನುಮ ಅಲ್ಲಿದ್ದ ದೀಪವನ್ನು ಹಿಡಿದುಕೊಂಡಿತು. ಅದನ್ನು ತೆಗೆದು ಮತ್ತೊಂದು ದಿಕ್ಕಿನಲ್ಲಿ ಇಟ್ಟರೆ ಅಲ್ಲಿಗೂ ಹೋಗಿ ಕುಳಿತುಕೊಂಡಿತು. ಕೊನೆಗೆ ಹೋಮ ಮುಗಿಯುತ್ತಿದ್ದಂತೆಯೇ ಅಲ್ಲಿಂದ ಹೊರಟಿತು.

Categories
ಗದಗ ರಾಜ್ಯ

ಮೂವರು ಯಶ್ ಅಭಿಮಾನಿಗಳ ಸಾವು!

ಮೂವರು ಯಶ್ ಅಭಿಮಾನಿಗಳ ಸಾವು!
– ಯಶ್ ಕಟೌಟ್ ಕಟ್ಟಲು ಹೋಗಿ ಕರೆಂಟ್ ಶಾಕ್!
– ಮುಗಿಲು ಮುಟ್ಟಿದ ಆಕ್ರಂದನ!

NAMMUR EXPRESS NEWS
ಗದಗ: ರಾಕಿಂಗ್ ಸ್ಟಾರ್ ಯಶ್ ನ ಹುಟ್ಟುಹಬ್ಬದ ಪ್ರಯುಕ್ತ ಬ್ಯಾನರ್ ಕಟ್ಟಲು ಹೋಗಿ ಮೂರು ಜನ ಮೃತಪಟ್ಟ ಘಟನೆ ಗದಗದಲ್ಲಿ ನಡೆದಿದೆ. ಇಂದು ಕನ್ನಡದ ನಟ ಯಶ್ ನ 39ನೆಯ ಹುಟ್ಟುಹಬ್ಬ. ಈ ಪ್ರಯುಕ್ತ ಅಭಿಮಾನಿಗಳು ರಾಜ್ಯಾದ್ಯಂತ ಕಟೌಟ್, ಬ್ಯಾನರ್ ಹಾಕುವ ಮೂಲಕ ವಿವಿಧ ರೀತಿಯಲ್ಲಿ ಬರ್ಥಡೇ ಆಚರಣೆ ಮಾಡುತ್ತಿದ್ದಾರೆ. ಅದೇ ರೀತಿ ಹುಟ್ಟುಹಬ್ಬವನ್ನು ಆಚರಿಸಲು ಹೋಗಿ, ನಿನ್ನೆ ರಾತ್ರಿ ಗದಗದ ಲಕ್ಷ್ಮೀಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ಯಶ್ ಅಭಿಮಾನಿಗಳಾದ ಹನುಮಂತ ಹರಿಜನ (21), ಮುರುಳಿ ನಡವಿನಮನಿ(20), ನವೀನ್ ನೀಲಪ್ಪ(19) ಎಂಬುವರು ಯಶ್ ನ 25 ಅಡಿಯ ಕಟೌಟ್ ಕಟ್ಟುವ ವೇಳೆ ಕರೆಂಟ್ ಲೈನ್ ಮೇಲೆ ಲೈನ್ ತಾಗಿ ವಿದ್ಯುತ್ ಪ್ರವಹಿಸಿ ಮೂರೂ ಜನ ಮೃತಪಟ್ಟಿದ್ದಾರೆ. ಇದೀಗ ಅವರ ಅಂತ್ಯಕ್ರಿಯೆ ನಡೆಯುತ್ತಿದೆ. ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

Categories
ಗದಗ

ನಾಗರಹಾವನೇ ನುಂಗಿತ್ತು ನಾಗರ ಹಾವು?!

ನಾಗರಹಾವನೇ ನುಂಗಿತ್ತು ನಾಗರ ಹಾವು?!
– ಗದಗದ ಶಿರಹಟ್ಟಿಯಲ್ಲೊಂದು ವಿಚಿತ್ರ ಘಟನೆ
– ವಿಚಿತ್ರ ಘಟನೆ ನೋಡಿ ಜನರಿಗೇ ಭಯ

NAMMUR EXPRESS NEWS
ಗದಗ: ನಾಗರ ಹಾವೊಂದು ಇನ್ನೊಂದು ನಾಗರ ಹಾವನ್ನು ನುಂಗಿದ ವಿಚಿತ್ರ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಅನ್ನದಾನೀಶ್ವರ ಪ್ರೌಢಶಾಲೆ ಆವರಣದಲ್ಲಿ ನಡೆದಿಡೆ. ನಾಗರಹಾವು ಗಾತ್ರದಲ್ಲಿ ತನ್ನಷ್ಟೇ ದೊಡ್ಡದಿರುವ ಮತ್ತೊಂದು ನಾಗರಹಾವನ್ನು ಸಾಕಷ್ಟು ನುಂಗಿದ ಸ್ಥಿತಿಯಲ್ಲಿ ಕಂಡುಬಂದಿತ್ತು ಮತ್ತು ಅದು ಹೆಚ್ಚು ಹೆಚ್ಚು ಭಾಗವನ್ನು ನುಂಗಿಕೊಳ್ಳುತ್ತಾ ಸಾಗುತ್ತಿತ್ತು. ಈ ದೃಶ್ಯವನ್ನು ನೋಡಲು ನೂರಾರು ಮಂದಿ ಮಂದಿ ಅಲ್ಲಿ ನೆರೆದಿದ್ದರು. ಕೆಲವರು ಅದನ್ನು ಓಡಿಸಲು ಪ್ರಯತ್ನ ಮಾಡಿದರಾದರೂ ಕೆಲವರು ಹಾಗೆಲ್ಲ ಮಾಡುವುದು ಬೇಡ ಎಂದರು. ಆದರೆ, ನುಂಗಲಾದ ಹಾವು ಹೆಚ್ಚು ಪ್ರತಿರೋಧ ತೋರಿಸುತ್ತಿದ್ದಂತೆ ಕಾಣಲಿಲ್ಲ.

ಒಂದೋ ಅದು ಮೊದಲೇ ಸತ್ತಿರುವ ಸಾಧ್ಯತೆ ಇದೆ. ಇಲ್ಲವೇ ಅದು ನುಂಗಿದ ಬಳಿಕ ಉಸಿರು ಕಳೆದುಕೊಂಡಿರುವ ಸಾಧ್ಯತೆಯೂ ಇದೆ. ಕೆಲವರು ನಾಗರ ಹಾವು ಯಾವುದೇ ಆಹಾರ ಸಿಗದೆ ಈ ರೀತಿಯಾಗಿ ತನ್ನದೇ ಜಾತಿಯ ಹಾವನ್ನು ತಿಂದಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ರೀತಿಯ ವಿದ್ಯಮಾನಗಳು ನಡೆಯುತ್ತವೆ ಎಂದು ಉರಗ ತಜ್ಞರೂ ಹೇಳುತ್ತಾರೆ. ಆದರೆ, ಈ ಘಟನೆಯಲ್ಲಿ ನಿಜ ಸಂಗತಿ ಏನೆಂದು ಗೊತ್ತಿಲ್ಲ. ಸದ್ಯ ಹಾವು ನುಂಗುವ ದೃಶ್ಯ ಸ್ಥಳಿಯರ ಮೊಬೈಲ್‌ನಲ್ಲಿ ಸೆರೆಯಾಗಿ ಎಲ್ಲೆಡೆ ವೈರಲ್‌ ಆಗಿದೆ

Categories
ಗದಗ

ಒಂದೇ ಮುಖ ಎರಡು ದೇಹ: ವಿಚಿತ್ರ ಕರು ಜನನ!

ಒಂದೇ ಮುಖ ಎರಡು ದೇಹ: ವಿಚಿತ್ರ ಕರು ಜನನ!
– ಗದಗ ಜಿಲ್ಲೆ ಮುಂಡರಗಿ ತಾಲೂಕಿನಲ್ಲಿ ವಿಚಿತ್ರ ಕರು

NAMMUR EXPRESS NEWS
ಗದಗ: ಎರಡು ದೇಹ ಒಂದೇ ಮುಖವಿರುವ ವಿಚಿತ್ರ ಎಮ್ಮೆ ಕರುವೊಂದು ಜನನವಾಗಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದಲ್ಲಿ ನಡೆದಿದೆ. ಒಂದೇ ಮುಖ, ಎರೆಡು ದೇಹ, ಎಂಟು ಕಾಲು, ಮೂರು ಕಿವಿ ಹೊಂದಿದ ಎಮ್ಮೆ ಕರು ಜನನವಾಗಿದೆ, ಹಮ್ಮಿಗಿ ಗ್ರಾಮದ ಚಂದ್ರಪ್ಪ ಷಣ್ಮುಖಪ್ಪ ಈಟಿ ಅನ್ನೋರಿಗೆ ಸೇರಿದ ಎಮ್ಮೆ ಇದಾಗಿದೆ. ಮಂಗಳವಾರ ರಾತ್ರಿಯಿಂದಲೇ ಕರುಗೆ ಜನ್ಮ ನೀಡಲು ತಾಯಿ ಎಮ್ಮೆ ಸಾಕಷ್ಟು ತೊಂದರೆ ಪಟ್ಟಿದೆ. ಬುಧವಾರ ಬೆಳಿಗ್ಗೆ ಪಶು ವೈದ್ಯರ ಮೂಲಕ ಕರು ಹೊರಕ್ಕೆ ತೆಗೆಯಲಾಗಿದ್ದು,ಕರು ಹೊರಬಂದ ಕೆಲ ಹೊತ್ತಿನಲ್ಲಿ ಹೆಣ್ಣು ಕರು ಸಾವನ್ನಪ್ಪಿದೆ. ವಿಚಿತ್ರ ಕರು ಜನನ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದ್ದು, ತಾಯಿ ಎಮ್ಮೆಗೆ ಸದ್ಯ ಪಶು ವೈದ್ಯರು ಚಿಕಿತ್ಸೆ ನಿಡಿದ್ದು, ಅಪಾಯದಿಂದ ಪಾರಾಗಿದೆ.

Categories
ಗದಗ

ನಾಗರ ಪಂಚಮಿಯಂದೇ ನಾಗ ಪವಾಡ!

ನಾಗರ ಪಂಚಮಿಯಂದೇ ನಾಗ ಪವಾಡ!
– ನಾಗರ ಪಂಚಮಿ ಹಬ್ಬದಂದೇ 2 ಹಾವು ಪ್ರತ್ಯಕ್ಷ!
– ನೀರು ಕುಡಿಸಿ ಸೆರೆ ಹಿಡಿದ ಉರಗ ತಜ್ಞ
– ಇಲ್ಲಿ ಜೀವಂತ ಹಾವುಗಳಿಗೆ ನಡೆಯುತ್ತೆ ಜಲಾಭಿಶೇಕ!
– ಗರ್ಭಗುಡಿಯಿಂದ ಹೊರಬಂದ ನಾಗರಾಜ!

NAMMUR EXPRESS NEWS
ಗದಗ: ನಾಗರ ಪಂಚಮಿ ದಿನವೇ ಎರಡು ಕಡೆ ಪ್ರತ್ಯಕ್ಷವಾದ ನಾಗರ ಹಾವಿಗೆ ನೀರು ಕುಡಿಸುವ ಮೂಲಕ ಉರಗ ತಜ್ಞ ಸಾಗರ ಧರಣಿ ಎನ್ನುವವರ ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದು ಎಲ್ಲ ಪ್ರೀತಿಗೆ ಪಾತ್ರನಾಗಿದ್ದಾನೆ. ಗದಗ ಜಿಲ್ಲೆಯ ಲಕ್ಷ್ಮೀಶ್ವರ ಪಟ್ಟಣದ ಜಂಟ್ಲಿ ಬಸವೇಶ್ವರ ದೇವಸ್ಥಾನದ ಹೊಸಮನಿ ಎಂಬುವರ ಮನೆಯಲ್ಲಿ ಸುಮಾರು 5/6 ಅಡಿ ಉದ್ದದ ನಾಗರ ಹಾವು ಪ್ರತ್ಯಕ್ಷವಾಗಿದೆ. ಹಾವು ನೋಡಿದ ಮನೆಯವರು ಗಾಬರಿಗೊಂಡಿದ್ದಾರೆ. ದೂರದಿಂದಲೇ ಭಕ್ತಿಯಿಂದ ಪೂಜೆ ಮಾಡಿ ಹೊರ ಹೋಗುವಂತೆ ಪ್ರಾರ್ಥಿಸಿದ್ದಾರೆ.

ಕೂಡಲೇ ಸಾಗರ ಅವರಿಗೆ ಪೋನ್ ಮುಖಾಂತರ ತಿಳಿಸಿದಾಗ ತಕ್ಷಣ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಸಾಗರ ಮನೆಯಲ್ಲಿ ಪ್ರತ್ಯಕ್ಷವಾಗಿದ್ದ ಸೆಪ್ಟಿಕಲ್ ಕೋಬ್ರಾ ಎನ್ನಲಾಗುವ ನಾಗರಹಾವನ್ನು ತಮ್ಮ ಚಾಣಾಕ್ಷತದಿಂದ ತನ್ನ ಹಿಡಿತಕ್ಕೆ ತೆಗೆದುಕೊಂಡು ಕೆಲಹೊತ್ತು ಆಟವಾಡಿಸಿ ಬಾಟಲಿಯಿಂದ ನೀರು ಕುಡಿಸಿ ಬಳಿಕ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾನೆ. ಕೆಲ ಹೊತ್ತಿನ ಬಳಿಕ ಕುಂದ್ರಳ್ಳಿ ತಾಂಡಾದ ಮನೆಯಲ್ಲಿ ನಾಗರ ಹಾವು ಬಂದಿದೆ ಎಂಬ ಸುದ್ದಿ ತಿಳಿದು ಅಲ್ಲಿಗೂ ತೆರಳಿದ ಸಾಗರ ಧರಣಿ ಅದನ್ನು ಸಹ ಕ್ಷಣಾರ್ಧದಲ್ಲಿಯೇ ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾನೆ. ಯುವಕನ ಧೈರ್ಯ ಮತ್ತು ಬುದ್ದಿವಂತಿಕೆಯಿಂದ ಹಾವನ್ನು ಹಿಡಿಯುತ್ತಿರುವದನ್ನು ನೋಡಿದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜೀವಂತ ಹಾವುಗಳಿಗೆ ನಡೆಯುತ್ತೆ ಪೂಜೆ ಜಲಾಭಿಶೇಕ!

ಉಡುಪಿಯ ಮಜೂರಿನಲ್ಲಿ ಜೀವಂತ ನಾಗರ ಹಾವಿಗೆ ಜಲಾಭಿಷೇಕ, ಆರತಿ ಪೂಜೆ ಪುನಸ್ಕಾರಗಳು ನೆರವೇರಿತು. ನಾಗರ ಪಂಚಮಿಯ ಪ್ರಯುಕ್ತ ಜೀವಂತ ನಾಗರ ಹಾವಿಗೆ ಜಲಾಭಿಷೇಕ ಮತ್ತು ಆರತಿ ಕಾರ್ಯಕ್ರಮ ಸೋಮವಾರ ಬೆಳಗ್ಗೆ ನಡೆಸಲಾಯಿತು. ಮಜೂರಿನ ಉರಗ ತಜ್ಞ ಗೋವರ್ಧನ್ ಭಟ್ ಗಾಯಗೊಂಡ ಹಾವುಗಳನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುವ ಹವ್ಯಾಸವನ್ನು ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ರಿಕ್ಷಾ ಅಡಿಗೆ ಬಿದ್ದ ಹಾವನ್ನು ರಕ್ಷಿಸಿ, ಶುಶೂಷೆ ನೀಡುತ್ತಿದ್ದಾರೆ. ಮತ್ತೊಂದು ಹಾವನ್ನು ನಾಯಿ ಕಚ್ಚಿ ಗಾಯಗೊಳಿಸಿತ್ತು. ಎರಡು ಹಾವುಗಳಿಗೆ ಗೋವರ್ಧನ್ ಭಟ್ ರವರು ಶುಶೂಷೆ ನೀಡುತ್ತಿದ್ದಾರೆ. ಆ ಹಾವುಗಳಿಗೆ ಜಲಾಭಿಷೇಕ ನೆರವೇರಿಸಿ ಆರತಿ ಎತ್ತಿದ್ದಾರೆ.

ಅಂತೂ ಗರ್ಭಗುಡಿಯಿಂದ ಹೊರಬಂದ ನಾಗರಾಜ!

ಉತ್ತರ ಕನ್ನಡ ಗೋಕರ್ಣ ಮಹಾಬಲೇಶ್ವರ ಮಂದಿರದಲ್ಲಿ ಹಲವು ದಿನಗಳಿಂದ ಗರ್ಭಗುಡಿ ಬಾಗಿಲಿನ ಮೇಲೆ ಠಿಕಾಣಿ ಹೂಡಿದ್ದ ನಾಗರಹಾವು ಅಂತೂ ತಾನಾಗಿಯೇ ಹೊರಗೆ ಹೋಗಿದ್ದು ಆತಂಕ ದೂರವಾಗಿದೆ. ಐದು ದಿನಗಳ ಹಿಂದೆ ಸಂಜೆ ದೇವರ ದರ್ಶನಕ್ಕೆ ಭಕ್ತರನ್ನು ಬಿಡುವ ಸಮಯದಲ್ಲಿ ಕಾಣಿಸಿಕೊಂಡಿತ್ತು. ನಂತರ ಹೊರ ತೆಗೆದು ಸುರಕ್ಷಿತವಾಗಿ ಬಿಡಲು ಉರಗ ತಜ್ಞರಾದ ಅಶೋಕ ನಾಯ್ಕ ತದಡಿ, ಸ್ನೇಕ್ ಬಾಬಣ್ಣ ನಿರಂತರ ಪ್ರಯತ್ನಿಸಿದ್ದರು. ಆದರೂ, ಬಾಗಿಲ ಮೇಲ್ಬಾಗದ ಚಿಕ್ಕ ಸಂಧಿಯಲ್ಲಿ ಹಾವು ಸೇರಿಕೊಂಡ ಕಾರಣ ಹೊರತರಲಾಗಲಿಲ್ಲ.

ಉರಗ ತಜ್ಞರು ಗದ್ದಲವಿದ್ದಾಗ ಹಾವು ಹೊರ ಬರುವುದಿಲ್ಲ ಮತ್ತು ಯಾರಿಗೂ ತೊಂದರೆ ನೀಡುವುದಿಲ್ಲ” ಎಂಬ ಭರವಸೆ ನೀಡಿದ್ದರು. ಅದರಂತೆ ನಿತ್ಯ ಭಕ್ತರು ದರ್ಶನ ಪಡೆದು ಬರುತ್ತಿದ್ದರೂ ಯಾವುದೇ ತೊಂದರೆ ನೀಡಿರಲಿಲ್ಲ . ಮಂದಿರದವರು ಸಹ ತೀವ್ರ ನಿಗಾ ಇಟ್ಟಿದ್ದರು. ಹಲವು ದಿನ ಒಂದೇ ಸ್ಥಳದಲ್ಲಿ ಉಳಿದುಕೊಂಡಿದ್ದ ಹಾವು ಶನಿವಾರ ಬೆಳಗಿನ ಜಾವ ಹೊರ ಹೋಗಿದ್ದು ದೇವಸ್ಥಾನದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮೂಲಕ ದೇವಸ್ಥಾನ ಆಡಳಿತದವರಿಗೆ ಮತ್ತು ಸಿಬ್ಬಂದಿ ಆತಂಕ ದೂರವಾಗಿದೆ.

ಇದನ್ನೂ ಓದಿ : ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!

Categories
ಗದಗ

ಹಿಂದೂ ಮುಸ್ಲಿಂ ಸಾಮರಸ್ಯದ ಹಬ್ಬ!

ಹಿಂದೂ ಮುಸ್ಲಿಂ ಸಾಮರಸ್ಯದ ಹಬ್ಬ!
– ಗದಗದ ಮುಂಡರಗಿಯಲ್ಲಿ ಕತ್ತಲ ರಾತ್ರಿಯ ಮಡಿಕೆ ಖರೀದಿ ಹಬ್ಬ
– ಪಾದಯಾತ್ರೆ ಮುಖಾಂತರ ಬರಿಗಾಲ ನಡಿಗೆ ವಿಶೇಷ!

NAMMUR EXPRESS NEWS
ಗದಗ ಜಿಲ್ಲಾ ಮುಂಡರಗಿ ತಾಲೂಕಿನ ಮಕ್ತುಂಪುರ ಗ್ರಾಮದ ವಾಲ್ಮೀಕಿ ಸಮಾಜ ಬಾಂಧವರು ಹಾಗೂ ಉಪ್ಪಾರ ಸಮಾಜದ ಕಲ್ಲಪ್ಪನವರ ಕುಟುಂಬ ಹಾಗೂ ಅಯ್ಯಪ್ಪನವರ,ಮಕಾಂದಾರ ಕುಟುಂಬವರ್ಗದವರು ಒಗ್ಗಾಟ್ಟಾಗಿ ಬಂದು ಕತ್ತಲ ರಾತ್ರಿಯ ನಿಮಿತ್ಯವಾಗಿ ಮಕ್ತುಂಪೂರ ಗ್ರಾಮದಿಂದ ಮುಂಡರಗಿ ಪಟ್ಟಣಕ್ಕೆ ಬರಿಗಾಲಿನಿಂದ ಪಾದಯಾತ್ರೆಯ ಮುಖಾಂತರ ಮುಂಡರಗಿ ಪಟ್ಟಣಕ್ಕೆ ಬಂದು ಮಡಿಕೆಯನ್ನು ಖರೀದಿಸುವುದು ವಿಶೇಷವಾಗಿತ್ತು. ಸೋಮವಾರ ಕತ್ತಲರಾತ್ರಿ ನಿಮಿತ್ತ ಹೊಸ ಮಡಿಕೆಯಲ್ಲಿ ಜೊಳದ ಕಿಚಡಿಯನ್ನು ತಯಾರಿಸಿ ರಾತ್ರಿ ಸಮಾಜ ಭಾಂದವರು ಕೂಡಿಕೊಂಡು ದೀಡ ನಮಸ್ಕಾರ ಹಾಕುವುದರೊಂದಿಗೆ ಅಲೈ ದೇವರಿಗೆ ನೈವೇದ್ಯ ಅರ್ಪಿಸುವುದು ಹಿಂದಿನಿಂದ ಕಾಲದ ಬಂದ ಪ್ರತೀತಿ.

ಇನ್ನೊಂದು ವಿಶೇಷವೆಂದರೆ ಈ ಹೊಸ ಮಡಿಕೆಯಲ್ಲಿ ಜೋಳದ ಕಿಚಡಿಯನ್ನು ತಯಾರಿಸುವಾಗ ಒಮ್ಮೆ ಹಚ್ಚಿದ ಓಲೆಯು ಆರುವುದೇ ಇಲ್ಲ ಹಾಗೂ ಕಿಚಡಿ ಆಗುವವರೆಗೂ ಒಲೆಯನ್ನು ಸಹ ಊದುವುದಿಲ್ಲ ಅಂತಹ ವಿಶೇಷತೆ ಇದರಲ್ಲಿದೆ
ಕತ್ತಲರಾತ್ರಿ ನಿಮಿತ್ತ ಹೊಸ ಮಡಿಕೆಯ ಖರೀದಿಯನ್ನು ಮಾಡಿ ಪಾದಯಾತ್ರೆ ಮುಖಾಂತರ ಬರಿಗಾಲಿನಿಂದ ತೆಗೆದುಕೊಂಡು ಹೋಗುವುದು ಮುಂಡರಗಿ ಪಟ್ಟಣದಲ್ಲಿ ಕಂಡು ಬಂತು.

ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ?

HOW TO APPLY : NEET-UG COUNSELLING 2023