ಐತಿಹಾಸಿಕ ದಾಖಲೆ ಬರೆದ ಚಿನ್ನದ ಬೆಲೆ!
– ಅಯ್ಯೋ ಬಂಗಾರ ಬಲು ಬಾರ!
– 67 ಸಾವಿರಕ್ಕೆ ಏರಿದ ಬಂಗಾರದ ರೇಟ್
NAMMUR EXPRESS NEWS
ಚಿನ್ನ ಎಂದರೆ ಎಲ್ಲರಿಗೂ ಕೂಡ ತುಂಬಾ ಇಷ್ಟ, ಏಪ್ರಿಲ್, ಮೇ ತಿಂಗಳು ಮದುವೆ ಸೀಸನ್ ಗಳು, ಹಬ್ಬಗಳು ಆರಂಭವಾಗುತ್ತಾ ಇದೆ. ಸಹಜವಾಗಿ ಎಲ್ಲರೂ ಕೂಡ ಬಂಗಾರವನ್ನ ಖರೀದಿಸಲು ಮುಗಿ ಬೀಳುತ್ತಾರೆ ಆದರೆ ಈ ಸಂದರ್ಭದಲ್ಲಿ ಬಂಗಾರ ಬಲು ದುಬಾರಿಯಾಗಿದೆ. ಬಂಗಾರವನ್ನ ತೆಗೆದುಕೊಳ್ಳುವುದು ನಮ್ಮ ಕಷ್ಟಕಾಲಕ್ಕೆ ಏನಾದರೂ ಸಹಾಯ ಆಗುತ್ತದೆ ಎಂದು, ಮಹಿಳೆಯರು ತುಂಬಾ ಇಷ್ಟಪಡುವಂಥದ್ದು ಎಂದೇ ಹೇಳಬಹುದು. ಆದರೆ ಈ ಚಿನ್ನವನ್ನ ನಾವು ಖರೀದಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿಗಳು ಎದುರಾಗಿದೆ. ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಬಂಗಾರವನ್ನ ತೆಗೆದುಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿಗಳು ಬಂದಿದೆ. ಚಿನ್ನದ ಬೆಲೆ ಐತಿಹಾಸಿಕ ದಾಖಲೆಯನ್ನು ಬರೆದಿದೆ. ಚಿನ್ನದ ಬೆಲೆ 10 ಗ್ರಾಂ ಗೆ 67 ಸಾವಿರ ಗಡಿ ದಾಟಿದ್ದು, ಬಂಗಾರ ಯಾವತ್ತೂ ಕೂಡ ಈ ರೇಟ್ ಗೆ ತಲುಪಿರಲಿಲ್ಲ. ಮುಂದಿನ ತಿಂಗಳಿಂದ ಮದುವೆ ಸೀಸನ್ ಗಳು ಕೂಡ ಇದ್ದು ಅಕ್ಷಯ ತೃತೀಯ ಕೂಡ ಇದೆ. ಇದೇ ರೀತಿಯ ಮುಂದಿನ ದಿನಗಳಲ್ಲೂ ಕೂಡ ಚಿನ್ನದ ಬೆಲೆ ಏರಿಕೆಯಾಗುತ್ತದೆ ಎಂಬುದನ್ನ ಜ್ಯುವೆಲರಿ ಮಾಲೀಕರು ಹೇಳುತ್ತಾರೆ.