Categories
ಅಡಿಕೆ-ದರ ಚಿನ್ನದ ದರ

ಅಡಿಕೆ ದರ ಲಕ್ಷದ ಸನಿಹಕ್ಕೆ… ಚಿನ್ನವೂ ಏರಿಕೆ!

ಅಡಿಕೆ ದರ ಲಕ್ಷದ ಸನಿಹಕ್ಕೆ… ಚಿನ್ನವೂ ಏರಿಕೆ!
– ಮಲೆನಾಡ ಅಡಿಕೆಗೆ ಭಾರೀ ಡಿಮ್ಯಾಂಡ್
– ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಉತ್ಸಾಹ

NAMMUR EXPRESS NEWS
ಮಲೆನಾಡು/ ಕರಾವಳಿ: ರಾಜ್ಯದಲ್ಲಿ ಅಡಿಕೆ ದರವು ನಿರೀಕ್ಷೆಯನ್ನು ಮೀರಿ ಏರಿಕೆ ಕಾಣುತ್ತಿದೆ. ಇದರಿಂದಾಗಿ ಅಡಿಕೆ ಬೆಳೆಗಾರರಲ್ಲಿ ನಿಮ್ಮದಿ ಮೂಡಿದೆ. ಅಚ್ಚರಿಯೇನೆಂದರೆ ಕ್ವಿಂಟಾಲ್ ಗೆ 96,000 ರೂ ಗೆ ಅಡಿಕೆ ದರ ತಲುಪಿದೆ.
ಅತಿದೊಡ್ಡ ಅಡಕೆ ಮಾರುಕಟ್ಟೆ ಎಂದೇ ಹೇಳಲಾಗುವ ಶಿವಮೊಗ್ಗ ಎಪಿಎಂಸಿಯಲ್ಲಿ ಸರಕು ಅಡಿಕೆ ದರ ಕ್ವಿಂಟಾಲ್ ಗೆ ಒಂದು ಲಕ್ಷ ರೂ. ತಲುಪುವ ಆಶಾಭಾವನೆ ಮೂಡಿಸಿದೆ. ಏಪ್ರಿಲ್ 24ರಂದು ಸರಕು ಅಡಕೆ ಕ್ವಿಂಟಾಲ್ ಗೆ 96,340 ರೂ. ದರ ಸಿಕ್ಕಿದೆ.
ಅಂದಹಾಗೆ ಅತಿ ಹೆಚ್ಚು ಆವಕವಾಗುವ ಬೆಟ್ಟೆ, ರಾಶಿ, ಇಡಿ ಧಾರಣೆ ಕೂಡ 60 ಸಾವಿರ ರೂ. ಆಸುಪಾಸಿನಲ್ಲಿದೆ. ಚಾಲಿ ಅಡಕೆ ದರ 40 ರಿಂದ 45 ಸಾವಿರ ರೂ. ನಡುವೆ ಇದೆ. ದಶಕದ ಹಿಂದೆ ಸರಕು ಅಡಿಕೆ ದರ ಕ್ವಿಂಟಾಲ್ ಗೆ 95,000 ರೂ., ರಾಶಿ ಇಡಿ ಅಡಿಕೆ ದರ 80,000 ರೂ. ಗಡಿ ದಾಟಿತ್ತು. ಇದೀಗ ಸರಕು ಅಡಿಕೆಗೆ ಕ್ವಿಂಟಾಲ್ ಗೆ 96 ಸಾವಿರ ರೂ. ದರ ಬಂದಿದೆ.

ಅಕ್ಷಯ ತೃತೀಯಕ್ಕೆ ಕುಗ್ಗದ ಆಭರಣ ಖರೀದಿ ಉತ್ಸಾಹ

ಬೆಂಗಳೂರು : ಅಕ್ಷಯ ತೃತೀಯಕ್ಕೆ ದಿನಗಣನೆ ಆರಂಭವಾಗಿದ್ದು, ಈ ಬಾರಿ ವಜ್ರ, ಬೆಳ್ಳಿ ಆಭರಣ ಗಳಿಗೆ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ.
ಈ ವರ್ಷ ಏ.30ರಂದು ಅಕ್ಷಯ ತೃತೀಯವಿದ್ದು, ಗ್ರಾಹಕರು ಒಂದು ತಿಂಗಳು ಮೊದಲೇ ಮುಂಗಡ ಬುಕಿಂಗ್ ಮಾಡಿ ಆ ದಿನದ ದರಕ್ಕೆ ಆಭರಣಗಳನ್ನು ಮನೆಗೆ ಕೊಂಡೊಯ್ಯಲು ಮುಂದಾಗಿದ್ದಾರೆ. ಬಂಗಾರದ ಬೆಲೆ ದುಬಾರಿಯಾದರೂ ಖರೀದಿದಾರರಲ್ಲಿ ಉತ್ಸಾಹ ಕುಂದಿಲ್ಲ, ಬದಲಿಗೆ ಮತ್ತಷ್ಟು ಹೆಚ್ಚಾಗಿದೆ.
ವಜ್ರದ ಆಭರಣಗಳು ಹೆಚ್ಚು ಆಕರ್ಷಕವಾಗಿದ್ದು, ದುಬಾರಿಯಾದರೂ ಗ್ರಾಹಕರು ಖರೀದಿಗೆ ಒಲವು ತೋರುತ್ತಿದ್ದಾರೆ. ಜತೆಗೆ ಬೆಳ್ಳಿ ಆಭರಣಗಳ ಬುಕಿಂಗ್ ಕೂಡ ಹೆಚ್ಚಾಗಿದೆ. ಈ ಬಾರಿಯ ಅಕ್ಷಯ ತೃತೀಯಕ್ಕೆ ಕಳೆದ ವರ್ಷಕ್ಕಿಂತ ಶೇ.20ರಷ್ಟು ಗ್ರಾಹಕರ ಸಂಖ್ಯೆಯಲ್ಲಿ ಏರಿಕೆಯಾಗಲಿದೆ ಎಂದು ತಿಳಿಸಿದರು.

Categories
ಚಿನ್ನದ ದರ

ಗಾಯತ್ರಿ ಜ್ಯುವೆಲ್ಲರ್ಸ್ ಇಂದಿನ ಚಿನ್ನದ ದರ ಎಷ್ಟಿದೆ?

ಗಾಯತ್ರಿ ಜ್ಯುವೆಲ್ಲರ್ಸ್ ಇಂದಿನ ಚಿನ್ನದ ದರ ಎಷ್ಟಿದೆ?
– ಚಿನ್ನದ ದರ ಹಾಗೂ ಬೆಳ್ಳಿ ದರ ದಿನದಿಂದ ದಿನಕ್ಕೆ ಏರಿಕೆ ?

NAMMUR EXPRESS NEWS

ಚಿನ್ನದ ದರ 22 ಕ್ಯಾರೆಟ್ – 8,720 ಗ್ರಾಂ

ಬೆಳ್ಳಿ ದರ – 97. 30

Categories
ಚಿನ್ನದ ದರ

ಇಂದಿನ ಚಿನ್ನದ ದರ ಎಷ್ಟಿದೆ?

ನ್ಯಾಷನಲ್ ಗೋಲ್ಡ್ ಅಂಡ್ ಡೈಮೆಂಡ್ಸ್
ಇಂದಿನ ಚಿನ್ನದ ದರ ಎಷ್ಟಿದೆ?
– ಚಿನ್ನದ ದರ ಹಾಗೂ ಬೆಳ್ಳಿ ದರ ಮತ್ತೆ ಏರಿಕೆ..?

NAMMUR EXPRESS NEWS

ಚಿನ್ನದ ದರ 22 ಕ್ಯಾರೆಟ್ – 8,770 ಗ್ರಾಂ

ಬೆಳ್ಳಿ ದರ   –  96.80 ಗ್ರಾಂ

Categories
ಚಿನ್ನದ ದರ

ನ್ಯಾಷನಲ್ ಗೋಲ್ಡ್ ಅಂಡ್ ಡೈಮೆಂಡ್ಸ್

ನ್ಯಾಷನಲ್ ಗೋಲ್ಡ್ ಅಂಡ್ ಡೈಮೆಂಡ್ಸ್
ಇಂದಿನ ಚಿನ್ನದ ದರ ಎಷ್ಟಿದೆ?
– ಚಿನ್ನದ ದರ ಹಾಗೂ ಬೆಳ್ಳಿ ದರ ಮತ್ತೆ ಏರಿಕೆ..?

NAMMUR EXPRESS NEWS

ಚಿನ್ನದ ದರ 22 ಕ್ಯಾರೆಟ್ – 8,745 ಗ್ರಾಂ

ಬೆಳ್ಳಿ ದರ   –  95.00 ಗ್ರಾಂ

Categories
ಚಿನ್ನದ ದರ

ಗಾಯತ್ರಿ ಜ್ಯುವೆಲ್ಲರ್ಸ್ ಇಂದಿನ ಚಿನ್ನದ ದರ ಎಷ್ಟಿದೆ?

ಗಾಯತ್ರಿ ಜ್ಯುವೆಲ್ಲರ್ಸ್ ಇಂದಿನ ಚಿನ್ನದ ದರ ಎಷ್ಟಿದೆ?
– ಚಿನ್ನದ ದರ ಹಾಗೂ ಬೆಳ್ಳಿ ದರ ಕಡಿಮೆಯಾಗುತ್ತಾ?

NAMMUR EXPRESS NEWS

ಚಿನ್ನದ ದರ 22 ಕ್ಯಾರೆಟ್ – 8,560 ಗ್ರಾಂ

ಬೆಳ್ಳಿ ದರ – 94. 70

Categories
ಚಿನ್ನದ ದರ

ಇಂದಿನ ಚಿನ್ನದ ದರ ಎಷ್ಟಿದೆ?

ನ್ಯಾಷನಲ್ ಗೋಲ್ಡ್ ಅಂಡ್ ಡೈಮೆಂಡ್ಸ್
ಇಂದಿನ ಚಿನ್ನದ ದರ ಎಷ್ಟಿದೆ?
– ಚಿನ್ನದ ದರ ಹಾಗೂ ಬೆಳ್ಳಿ ದರ ಕಡಿಮೆಯಾಗುತ್ತಾ?

NAMMUR EXPRESS NEWS

ಚಿನ್ನದ ದರ 22 ಕ್ಯಾರೆಟ್ – 8,285 ಗ್ರಾಂ

ಬೆಳ್ಳಿ ದರ   –  91.30 ಗ್ರಾಂ

Categories
ಚಿನ್ನದ ದರ

ಇಂದಿನ ಚಿನ್ನದ ದರ ಎಷ್ಟಿದೆ?

ನ್ಯಾಷನಲ್ ಗೋಲ್ಡ್ ಅಂಡ್ ಡೈಮೆಂಡ್ಸ್
ಇಂದಿನ ಚಿನ್ನದ ದರ ಎಷ್ಟಿದೆ?
– ಚಿನ್ನದ ದರ ಹಾಗೂ ಬೆಳ್ಳಿ ದರ ಕಡಿಮೆಯಾಗುತ್ತಾ?

NAMMUR EXPRESS NEWS

ಚಿನ್ನದ ದರ 22 ಕ್ಯಾರೆಟ್ – 8,310 ಗ್ರಾಂ

ಬೆಳ್ಳಿ ದರ   –  90.00 ಗ್ರಾಂ

Categories
ಚಿನ್ನದ ದರ ರಾಜ್ಯ

ಚಿನ್ನದ ದರ ಸಾರ್ವಕಾಲಿಕ ಗರಿಷ್ಠ!

ಚಿನ್ನದ ದರ ಸಾರ್ವಕಾಲಿಕ ಗರಿಷ್ಠ!

* ಬೆಳ್ಳಿ ದರವೂ ಲಕ್ಷ ರೂ. ತಲುಪುವ ಸಾಧ್ಯತೆ!
* ಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿರುವ ಹೂಡಿಕೆದಾರರು!

NAMMUR EXPRESS NEWS
ಮುಂಬಯಿ: ದಸರಾ ಹಬ್ಬದ ಸಡಗರದ ನಡುವೆ ಚಿನ್ನದ ದರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದೆ.
ಚಿನಿವಾರ ಪೇಟೆಯಲ್ಲಿ ಅ. 7ರಂದು ಪ್ರತಿ ಗ್ರಾಂಗೆ 250ರೂ. ಹೆಚ್ಚಳದೊಂದಿಗೆ 10 ಗ್ರಾಂ ಶುದ್ದ ಚಿನ್ನದ ದರ 78,700 ರೂ.ಗೆ ತಲುಪಿತು. ಇದುವರೆಗಿನ ಗರಿಷ್ಠ ದರವಾಗಿದೆ.
ಬೆಳ್ಳಿ ದರವೂ 1 ಕೆ.ಜಿ.ಗೆ 94,000 ರೂ.ಗೆ ತಲುಪಿದ್ದು, ಸದ್ಯದಲ್ಲೇ 1 ಲಕ್ಷ ರೂ. ಮುಟ್ಟಬಹುದೆಂದು ಅಂದಾಜಿಸಲಾಗಿದೆ. ಮಧ್ಯ ಪ್ರಾಚ್ಯದಲ್ಲಿ ಯುದ್ಧದ ಬಿಕ್ಕಟ್ಟು, ಭೌಗೋಳಿಕ ಉದ್ವಿಗ್ನತೆಗಳಿಂದಾಗಿ ಸತತ ಆರು ದಿನಗಳಿಂದ ಷೇರುಪೇಟೆಯಲ್ಲಿ ಇಳಿಮುಖ ಪ್ರವೃತ್ತಿ ಮುಂದುವರಿದಿದೆ.
ಜಾಗತಿಕ ಅಸ್ಥಿರತೆಯಿಂದಾಗಿ ಹೂಡಿಕೆದಾರರು ಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿರುವುದು ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ

Categories
ಚಿನ್ನದ ದರ

ಚಿನ್ನದ ಬೆಲೆ ಗಗನದತ್ತ: ಜನರಿಗೆ ಶಾಕ್!

ಚಿನ್ನದ ಬೆಲೆ ಗಗನದತ್ತ: ಜನರಿಗೆ ಶಾಕ್!
– ಚಿನ್ನದ ಬೆಲೆಯಲ್ಲಿ ಹೊಸ ಹೊಸ ಮೈಲಿಗಲ್ಲು
– ಬೆಳ್ಳಿ ಬೆಲೆಯೂ ಕೂಡ ದಾಖಲೆ ಮಟ್ಟಕ್ಕೆ ಏರಿಕೆ

NAMMUR EXPRESS NEWS
ಹಬ್ಬದ ಋುತುವಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಏರುಮುಖಿಯಾಗಿದೆ. ಇದೇ ಟ್ರೆಂಡ್‌ ಮುಂದುವರಿದರೆ ಆಭರಣ ಚಿನ್ನ ಹತ್ತು ಗ್ರಾಂಗೆ 77,000 ರೂ. ದಾಟಲಿದ್ದು, ಬೆಳ್ಳಿ ಕೆ.ಜಿಗೆ ಒಂದು ಲಕ್ಷ ರೂ. ದಾಟಲಿದೆ ಎಂದು ಆಭರಣ ವ್ಯಾಪಾರಿಗಳು ಅಂದಾಜಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ 22 ಕ್ಯಾರಟ್‌ ಚಿನ್ನದ ದರವು ಹತ್ತು ಗ್ರಾಂಗೆ 72,220 (ಗ್ರಾಂಗೆ 7.220 ರೂ.) ಹಾಗೂ 24 ಕ್ಯಾರಟ್‌ ಚಿನ್ನ ಹತ್ತು ಗ್ರಾಂಗೆ 78,050 (ಒಂದು ಗ್ರಾಂಗೆ 7,805), ಬೆಳ್ಳಿ ಕೆ.ಜಿಗೆ 93,100 ರೂ. ತಲುಪಿದೆ.
ಕಳೆದ ಜುಲೈನಲ್ಲಿ ಕೇಂದ್ರ ಸರಕಾರವು ಅಬಕಾರಿ ಸುಂಕ ಇಳಿಸಿದ ಬಳಿಕ ಖರೀದಿ ಭರಾಟೆ ಜೋರಾಗಿದೆ. ಅದರ ಜತೆಗೆ ಈ ಸಲ ಮುಂಗಾರು ಉತ್ತಮವಾಗಿರುವ ಕಾರಣ ಹಬ್ಬದ ಋುತುವಿನಲ್ಲಿ ಆಭರಣ ಖರೀದಿ ಜೋರಾಗುವ ನಿರೀಕ್ಷೆ ಇದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನ ಹಿಂದೆಂದಿಗಿಂತಲೂ ಈ ಸಲ ಚಿನ್ನ, ಬೆಳ್ಳಿ ಖರೀದಿಗೆ ಮುಂದಾಗಬಹುದು ಎನ್ನುವುದು ಚಿನಿವಾರ ಪೇಟೆ ನಿರೀಕ್ಷೆ.
ಸಾಮಾನ್ಯವಾಗಿ ವಾರ್ಷಿಕ 10% ಏರಿಕೆ ಕಾಣುತ್ತಿದ್ದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ದರ ಈ ಬಾರಿ ಅತ್ಯಧಿಕ 40% ಏರಿಕೆ ಕಂಡಿದೆ. ಯುದ್ಧ ಸೇರಿದಂತೆ ಜಾಗತಿಕ ರಾಜಕೀಯ-ಭೌಗೋಳಿಕ ಪರಿಸ್ಥಿತಿಗಳೂ ಇದಕ್ಕೆ ಕಾರಣ. ಜತೆಗೆ, ಅಮೆರಿಕದ ಫೆಡರಲ್‌ ರಿಸರ್ವ್‌ ಇತ್ತೀಚೆಗೆ ಬಡ್ಡಿದರ ಇಳಿಸಿರುವುದು ಹಾಗೂ ಈ ದರವನ್ನು ಮತ್ತಷ್ಟು ಇಳಿಕೆ ಮಾಡುವ ನಿರೀಕ್ಷೆಯೂ ಚಿನ್ನದ ದರದ ನಾಗಾಲೋಟಕ್ಕೆ ಮತ್ತೊಂದು ಕಾರಣ ಎಂದು ತಜ್ಞರು ಹೇಳಿದ್ದಾರೆ.

Categories
ಚಿನ್ನದ ದರ

ಬಂಗಾರ ಬಲು ಭಾರ!

ಬಂಗಾರ ಬಲು ಭಾರ!

– ಮತ್ತೆ ಏರಿಕೆ ಕಂಡ ಚಿನ್ನದ ದರ: ಆಭರಣ ಪ್ರಿಯರಿಗೆ ಶಾಕ್‌
– ಬೆಳ್ಳಿಯ ಬೆಲೆ ಕೂಡ ಏರಿಕೆ: ಯಾವುದಕ್ಕೆ ಎಷ್ಟು?

NAMMUR EXPRESS NEWS

ಬೆಂಗಳೂರು: ಮತ್ತೆ ಚಿನ್ನದ ದರ ಏರಿಕೆ ಕಂಡಿದ್ದು, ಗ್ರಾಹರಿಗೆ ಶಾಕ್‌ ನೀಡಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,765 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,380 ಇದೆ. 22 ಕ್ಯಾರೆಟ್‌ನ 8 ಗ್ರಾಂ ಚಿನ್ನದ ಬೆಲೆ ₹ 54,120. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 67,650 ಮತ್ತು ₹ 6,76,500 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ ಎಂಟು ಗ್ರಾಂ ಚಿನ್ನದ ಬೆಲೆ ₹ 59,040 ಇದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹ 73,800 ಮತ್ತು ₹ 7,38,000 ವೆಚ್ಚವಾಗಲಿದೆ.

ಬೆಳ್ಳಿ ಧಾರಣೆ

ಬೆಳ್ಳಿಯ ಬೆಲೆ ಕೂಡ ಏರಿಕೆಯಾಗಿದೆ. ಬೆಳ್ಳಿ ಒಂದು ಗ್ರಾಂಗೆ ₹ 93.25 ಹಾಗೂ 8 ಗ್ರಾಂಗೆ ₹ 746 ಇದೆ. 10 ಗ್ರಾಂಗೆ ₹ 932.50 ಹಾಗೂ 1 ಕಿಲೋಗ್ರಾಂಗೆ ₹ 93,250 ಬೆಲೆ ಬಾಳುತ್ತದೆ.