ನಮ್ಮೂರ್ ಎಕ್ಸ್ ಪ್ರೆಸ್ ಹಾಸನ ಜಿಲ್ಲಾ ಅಪ್ಡೇಟ್ಸ್
ಎನ್.ಡಿ.ಎ ಪರೀಕ್ಷೆಯಲ್ಲಿ ಹಾಸನ ವಿದ್ಯಾರ್ಥಿಯ ಸಾಧನೆ
ಕೇಂದ್ರ ಲೋಕಸೇವಾ ಆಯೋಗವು ನಡೆಸುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹುದ್ದೆಗೆ ನಡೆದ ಲಿಖಿತ ಪರೀಕ್ಷೆಯಲ್ಲಿ ವಿದ್ಯಾಸೌಧ ಪದವಿಪೂರ್ವ ಕಾಲೇಜಿನ ಅನಂತ ವರುಣ್ ಎಂಬ ವಿದ್ಯಾರ್ಥಿಯು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್ ಡಿ ಎ)ಯು ನಡೆಸುವ ಸಂದರ್ಶನಕ್ಕೆ ಹಾಸನ ಜಿಲ್ಲೆಯಿಂದ ಆಯ್ಕೆಗೊಂಡು ಉನ್ನತ ಸಾಧನೆಗೈದಿದ್ದಾನೆ ಸಾಧನೆಗೈದ ವಿದ್ಯಾರ್ಥಿಯನ್ನು ವಿದ್ಯಾಸೌಧ ಸಂಸ್ಥೆಯ ಮುಖ್ಯಸ್ಥರು,ಆಡಳಿತ ಮಂಡಳಿ , ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ
ಖಾಸಗಿ ಕಾಲೇಜು ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ
ಹಾಸನ: ನಗರದ ಖಾಸಗಿ ಪಿಯು ಕಾಲೇಜಿನಲ್ಲಿ ಎರಡು ದಿನಗಳ ಹಿಂದೆ
ಮುಸ್ಲಿಂ ಧರ್ಮಗುರುವೊಬ್ಬರು ಕುರಾನ್ ಪಠಣ ವೇಳೆ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಖಂಡಿಸಿ ಎಬಿವಿಪಿ ಮತ್ತು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಕಾಲೇಜಿನ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಜ್ಞಾನ ದೇಗುಲ ಒಂದು ಧರ್ಮಕ್ಕೆ ಅಥವಾ ಒಂದು ಜಾತಿಗೆ ಸೀಮಿತವಾಗಬಾರದು, ಅದರಲ್ಲೂ ದೇಶ ವಿರೋಧಿ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ನಾಯಕರಿಂದ ವಿದ್ಯಾರ್ಥಿಗಳಿಗೆ ಭಾಷಣ ಮಾಡಿಸಿರುವುದು ತಪ್ಪು. ಕೂಡಲೇ ಅವರನ್ನು ಕಾಲೇಜಿಗೆ ಆಹ್ವಾನ ಮಾಡಿ ಭಾಷಣ ಮಾಡಿಸಿರುವ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಭಯೋತ್ಪಾದಕ ಚಟುವಟಿಕೆಯಲ್ಲಿ ಗುರುತಿಸಿಕೊಂಡಿರುವ ಸಂಘಟನೆಯ ಮುನೀರ್ ಅಹಮದ್ ಎಂಬ ಸಾಲಗಾರ ವ್ಯಕ್ತಿಯನ್ನು ಕಾಲೇಜಿನಲ್ಲಿ ಮಕ್ಕಳಿಗೆ ಭಾಷಣ ಮಾಡಲು ಕರೆತಂದು ಹಿಂದೂ ಧರ್ಮದ ವಿರೋಧಿ ನೀತಿ ಬಗ್ಗೆ ಪ್ರವಚನ ಮಾಡಲು ಅವಕಾಶ ನೀಡಿರುವುದಕ್ಕೆ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ಆಡಳಿತ ಮಂಡಳಿಯವರು ಧರ್ಮ ಗುರುವನ್ನ ಕರೆದುಕೊಂಡು ಬಂದ ಉಪನ್ಯಾಸಕನ್ನ ಕಾಲೇಜಿನಿಂದ ಅಮಾನತು ಪಡಿಸಬೇಕು ಎಂದು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಆಡಳಿತ ಆಡಳಿತ ಮಂಡಳಿಯವರು ಪ್ರತಿಭಟನಾಕಾರರ ಮನವೊಲಿಸಿ ಮುಂದೆ ಈ ರೀತಿ ತಪ್ಪುಗಳಾಗದಂತೆ ಕ್ರಮ ವಹಿಸಲಾಗುವುದು ಎಂದು ಹೇಳಿದರು. ಎಬಿವಿಪಿ ನಗರ ಸಂಚಾಲಕ ದರ್ಶನ್, ಬಿಜೆಪಿ ಮುಖಂಡ ವೇಣುಗೋಪಾಲ್, ರಕ್ಷಿತ್ ಭಾರಧ್ವಜ್, ಜಿಲ್ಲಾ ಸಂಘಟನಾ ಸಂಚಾಲಕ ಶ್ರೀನಿವಾಸ್
ಮೊದಲಾದವರಿದ್ದರು. ಪ್ರತಿಭಟನೆ ಹಿನ್ನೆಲೆ ಕಾಲೇಜು ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಹಾಸನ ನಗರದ ಕೆಲವು ಭಾಗಗಳಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 6.30 ರವರೆಗೂ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಹಾಸನ ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಸಂತೆಪೇಟೆ ಸರ್ಕಲ್, ಸಿದ್ದಯ್ಯನಗರ, ಗಾಂಧಿಬಜಾರ್, ತಣ್ಣೀರುಹಳ್ಳ ವಿಜಯನಗರ, ಕೆ.ಹೆಚ್.ಬಿ. ಶ್ರೀನಗರ, ಎನ್. ಆರ್ ವೃತ್ತ ಹಾಸನಾಂಬ ದೇವಾಲಯ ಸುತ್ತಮುತ್ತ ಹುಣಸಿನಕೆರೆ, ಮೈಕ್ರೋವೇವ್, ಬಿಟ್ಟಗೋಡನಹಳ್ಳಿ ಮೆಡಿಕಲ್ ಕಾಲೇಜು, ಡಿ.ಸಿ ಕಛೇರಿ, ಎಸ್.ಪಿ ಕಛೇರಿ, ಆಜಾದ್ ರೋಡ್, ವಲ್ಲಬಾಯ್ ರೋಡ್, ನಗರ ಸಭೆ ಕಾರ್ಯಾಲಯ, ಕಟ್ಟಿನಕೆರೆ ಮಾರ್ಕೆಟ್, ದೇವೆಗೌಡನಗರ, ಹನುಮಂತಪುರ, ಅಗಿಲೆ, ಎರೆಬೋರೆಕಾವಲು, ಚನ್ನಪಟ್ಟಣ, ಹೊಸಕೊಪ್ಪಲು, ದೇವಮ್ಮ ಬಡಾವಣೆ, ಮಾರ್ಗನಹಳ್ಳಿ, ಬೈಲಹಳ್ಳಿ ಬಸವೇಶ್ವರನಗರ, ಹೊಯ್ಸಳ ರೆಸಾರ್ಟ್, ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಇಲಾಖೆ ಕೋರಿದೆ.