ಹಾಸನಾಂಬೆ ದೇವಾಲಯದಲ್ಲಿ ಇಸ್ಕಾನ್ ಲಡ್ಡು..!?
– ತಿರುಪತಿ ವಿವಾದ ಹಿನ್ನೆಲೆ ಇಸ್ಕಾನ್ ಸಂಸ್ಥೆ ಜೊತೆ ಚರ್ಚೆ
– ಸಿದ್ದೇಶ್ವರ ಜಾತ್ರ ಮಹೋತ್ಸವಕ್ಕೆ ಸಕಲ ಸಿದ್ಧತೆ
– ಅಕ್ಟೋಬರ್ 28ರಂದು ಹಾಸನಾಂಬೆ ಬಾಗಿಲು ಓಪನ್
NAMMUR EXPRESS NEWS
ಹಾಸನ: ತಿರುಪತಿ ದೇವಸ್ಥಾನದ ಲಾಡುವಿನಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣವಾದ ಬಗ್ಗೆ ವಿವಾದ ಕೇಳಿಬಂದ ಹಿನ್ನಲೆಯಲ್ಲಿ ಹಾಸನಾಂಬೆ ದೇವಾಲಯದಲ್ಲಿ ಈ ವರ್ಷದಿಂದ ಇಸ್ಕಾನ್ ಲಡ್ಡು ವಿತರಣೆ ಮಾಡಲು ಚಿಂತನೆ ನಡೆಸಿದೆ.
ರಾಜ್ಯದಲ್ಲಿ ಪ್ರಸಿದ್ಧ ದೇವಾಲಯಗಳಲ್ಲಿ ಈ ದೇವಾಲಯ ಒಂದಾಗಿದ್ದು ಹಾಸನ ಜಿಲ್ಲಾಡಳಿತ ಈ ಕ್ರಮ ತೆಗೆದುಕೊಂಡಿದೆ.
ಡಿಸಿ ಸಿ. ಸತ್ಯಭಾಮ ಮಾತನಾಡಿ, ಈವರ್ಷದ ಹಾಸನಾಂಬೆ ಬಾಗಿಲು ಅಕ್ಟೋಬರ್ 28ರಂದು ತೆರೆಯಲಾಗುವುದು. ಜೊತೆಗೆ ಶ್ರೀ ಸಿದ್ದೇಶ್ವರ ಜಾತ್ರ ಮಹೋತ್ಸವಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಭಕ್ತರಿಗೆ ಕೊಡುವ ಲಾಡು ಬಗ್ಗೆ ಯೋಚಿಸಿ ಸ್ವಚ್ಛತೆ, ಭಕ್ತಿಭಾವದಿಂದ ಕೊಡಲು ಮುಂದಾಗಿದ್ದು, ಈವರ್ಷದಿಂದ ೩೦೦ ರೂ ಕೊಟ್ಟು ಟಿಕೆಟ್ ಪಡೆದವರಿಗೂ ಒಂದು ಲಾಡು ಕೊಡಲಾಗುತ್ತಿದೆ. ೧ ಸಾವಿರ ನೀಡಿ ಟಿಕೆಟ್ ಪಡೆದವರಿಗೆ ಎರಡು ಲಡ್ಡು ಕೊಡಲು ನಿರ್ಧರಿಸಲಾಗಿದೆ. ಹೂವಿನ ಅಲಂಕಾರ, ನಗರ ಸೌಂದರ್ಯಿಕರಣ ಎಲ್ಲಾವುದರ ಬಗ್ಗೆ ಗಮನ ಕೊಡಲಾಗಿದೆ. ಈ ಬಾರಿ ತಿರುಪತಿಯಲ್ಲಿ ತಿಮ್ಮಪ್ಪನ ಲಡ್ಡು ವಿವಾದ ಹಿನ್ನೆಲೆಯಲ್ಲಿ ಹಾಸನಾಂಬೆ ದೇವಾಲಯದ ಪಾವಿತ್ರ್ಯತೆ ಹಾಗು ಲಡ್ಡಿನ ಗುಣಮಟ್ಟ ಕಾಪಾಡಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದ್ದು ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು ವಿತರಣೆಗೆ ಚಿಂತನೆ ನಡೆಸಿದೆ. ಈ ಸಂಬಂಧ ಈಗಾಗಲೇ ಇಸ್ಕಾನ್ ಸಂಸ್ಥೆ ಜೊತೆ ಸಮಾಲೋಚನೆ ನಡೆಸಿದ್ದು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.