- ಕರೋನಾ ನಡುವೆ ಈಗ ಮಂಗನ ಕಾಯಲೆ ಭೀತಿ
- ಶಿವಮೊಗ್ಗ ಜಿಲ್ಲೆಯಲ್ಲಿ ಕಾಯಲೆ ಹೆಚ್ಚಳ?
NAMMUR EXPRESS NEWS
ತೀರ್ಥಹಳ್ಳಿ: ಕರೋನಾ ಸೋಂಕಿನ ಬೆನ್ನಲ್ಲೇ ಮಂಗನಕಾಯಿಲೆ ಭೀತಿ ಮಲೆನಾಡಿನ ಹಳ್ಳಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೇಸ್ ಕಡಿಮೆಯಾದರೂ ಚಳಿ ಹೆಚ್ಚಿದಂತೆ ರೋಗ ಹೆಚ್ಚಳ ಆತಂಕವೂ ಇದೆ.
ತೀರ್ಥಹಳ್ಳಿ ತಾಲ್ಲೂಕಿನ ಕೂಡಿಗೆಗ್ರಾಮದ ಮಹಿಳೆಯೊಬ್ಬಳಲ್ಲಿ ಮಂಗನಕಾಯಿಲೆಯ ವೈರಾಣು ಪತ್ತೆಯಾಗಿದೆ. ಹೀಗಾಗಿ ಮೊದಲ ಕೇಸ್ ದಾಖಲಾಗಿದೆ.
ಮಾಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕೂಡಿಗೆ ಗ್ರಾಮದ ಮಹಿಳೆಯಲ್ಲಿ ಮಂಗನಕಾಯಿಲೆಯ ಲಕ್ಷಣ ಕಾಣಿಸಿಕೊಂಡಿದೆ. ಸದ್ಯ ಅವರು ತಾಲ್ಲೂಕಿನ ಜೆ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸುಧಾರಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಂಗನಕಾಯಿಲೆ ಪತ್ತೆಯಾದ ಗ್ರಾಮದ ಸುತ್ತಲಿನ ಪ್ರದೇಶಗಳಲ್ಲಿ ಮಂಗಗಳು ವರದಿಯಾಗಿಲ್ಲ. ಮೊನ್ನೆಯಷ್ಟೇ ಮಂಗಗಳ ಉಣುಗು ಪರೀಕ್ಷೆಯಲ್ಲಿ ರೋಗದ ಲಕ್ಷಣಗಳು ಕಂಡಿದ್ದವು. ಮಲೆನಾಡಿನಲ್ಲಿ ಮಂಗಗಳು ಹೆಚ್ಚಿದ್ದು ಮತ್ತಷ್ಟು ಭಯ ಹುಟ್ಟಿಸಿದೆ.