-ಆರೋಗ್ಯಯುತವಾದ ಚರ್ಮವನ್ನು ನಿಮ್ಮದಾಗಿಸಿಕೊಳ್ಳಿ
-ಇಲ್ಲಿದೆ ಸೂಕ್ತ ಸಲಹೆಗಳು
ನಾವು ಸೇವಿಸುವ ಆಹಾರವು ಉತ್ತಮ ಪೋಷಕಾಂಶಗಳನ್ನು ಹೊಂದಿದಾಗ ಮಾತ್ರ ಉತ್ತಮವಾದ ಮತ್ತು ಆರೋಗ್ಯಯುತವಾದ ಚರ್ಮವನ್ನು ಪಡೆಯಲು ಸಾಧ್ಯವಾಗುತ್ತದೆ.
ಚರ್ಮವು ಮನುಷ್ಯನ ದೇಹದಲ್ಲಿ ಅತಿ ಮುಖ್ಯವಾದ ಅಂಗವಾಗಿದೆ. ಆರೋಗ್ಯಯುತ ಚರ್ಮವನ್ನು ಪಡೆಯಲು ನಾವು ಹಲವಾರು ರೀತಿಯ ಉತ್ತಮ ಆಹಾರಗಳನ್ನು ಸೇವಿಸಿದಾಗ ಮಾತ್ರ ಉತ್ತಮ ಚರ್ಮ ನಮ್ಮದಾಗುತ್ತದೆ.ಉತ್ತಮ ಚರ್ಮ ಪಡೆಯಲು ನಾವು ಹಲವಾರು ರೀತಿಯ ವಿಟಮಿನ್ಗಳು ಇರುವ ಆಹಾರಗಳನ್ನು ಸೇವಿಸಬೇಕು. ಅದರಲ್ಲಿ ವಿಟಮಿನ್ ಎ ಅಂಶವು ನಮ್ಮ ಚರ್ಮದ ರಕ್ಷಣೆಗೆ ತುಂಬಾ ಸಹಕಾರಿಯಾಗಿದೆ. ವಿಟಮಿನ್ ಎ ಅಂಶವು ಚರ್ಮದ ಆರೋಗ್ಯಕ್ಕೆ ಒಂದು ವರ ಎಂದರೆ ತಪ್ಪಾಗುವುದಿಲ್ಲ.
ಚರ್ಮಕ್ಕೆ ವಿಟಮಿನ್ ಎ ಪ್ರಯೋಜನಗಳು
ವಿಟಮಿನ್-ಎ ರೆಟಿನಾಲ್ ಎಂಬ ಅಂಶವನ್ನು ಒಳಗೊಂಡಿದ್ದು, ಇದು ಹೊಸ ಚರ್ಮದ ಕೋಶಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ವಿಟಮಿನ್-ಎ ನಲ್ಲಿ ಅತಿ ಹೆಚ್ಚಿನ ಮಟ್ಟದ ಆಂಟಿಆಕ್ಸಿಡೆಂಟ್ಗಳಿವೆ , ಅದರಲ್ಲೂ ಬೀಟಾ ಕೆರೋಟಿನ್ ಇದ್ದು ಇದು ವಯಸ್ಸಾಗುವಿಕೆ ಲಕ್ಷಣಗಳನ್ನು ತಡೆಯುತ್ತದೆ. ಇದಲ್ಲದೆ ವಿಟಮಿನ್ ಎ ಸೂರ್ಯನ ನೇರಳಾತೀತ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ವಿಟಮಿನ್-ಎ ಅಂಶಗಳು ಹೇರಳವಾಗಿರುವ ತರಕಾರಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.ಅವುಗಳ ಸೇವನೆಯಿಂದ ಉತ್ತಮವಾದ ಮತ್ತು ಆರೋಗ್ಯಯುತವಾದ ಚರ್ಮವನ್ನು ನೀವು ಪಡೆದುಕೊಳ್ಳಬಹುದು.
ಟೊಮ್ಯಾಟೋ
ಟೊಮೇಟೊಗಳನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕೆಂಪಾಗಿರುವ ಟೊಮ್ಯಾಟೋ ಗಳಲ್ಲಿ ವಿಟಮಿನ್-ಎ ಅಂಶವಿರುತ್ತದೆ.
ಕ್ಯಾರೆಟ್
ಪರಿಸರದಲ್ಲಿ ಉಂಟಾಗುವ ಮಾಲಿನ್ಯ , ಹೊಗೆ, ಧೂಳಿನಿಂದ ನಮ್ಮ ಚರ್ಮದ ಕಾಂತಿಯನ್ನು ಕಳೆದುಕೊಳ್ಳುತ್ತದೆ.ಇದನ್ನು ತಡೆಯಲು ನಮ್ಮ ಚರ್ಮಕ್ಕೆ ವಿಟಮಿನ್ ಇ ಮತ್ತು ಆಂಟಿಆಕ್ಸಿಡೆಂಟ್ ಗಳು ಬೇಕು. ವಿಟಮಿನ್ ಎ ಹೇರಳವಾಗಿರುವ ಕ್ಯಾರೆಟ್ ಸೇವಿಸಿದರೆ ಆರೋಗ್ಯವು ಚೆನ್ನಾಗಿರುತ್ತದೆ ಮತ್ತು ಚರ್ಮದ ಕಾಂತಿ ವರ್ಧಿಸುತ್ತದೆ.ದೇಶ-ವಿದೇಶಗಳಲ್ಲಿ ಬಳಸುವ ತರಕಾರಿ ಎಂದರೆ ಅದು ಕ್ಯಾರೆಟ್ ಆಗಿದೆ.
ಹಸಿರು ಎಲೆಗಳ ತರಕಾರಿಗಳು
ಹಸಿರು ಎಲೆಗಳಿಂದ ಕೂಡಿರುವ ಪಾಲಕ್ ಮತ್ತು ಮೆಂತ್ಯ ಸೊಪ್ಪುಗಳು ಹೇರಳವಾದ ವಿಟಮಿನ್ ಅನ್ನು ಒಳಗೊಂಡಿದೆ.ಮೆಂತ್ಯ ಮತ್ತು ಪಾಲಾಕ್ ಸೊಪ್ಪಿನಿಂದ ತಯಾರಿಸಿದ ಖಾದ್ಯಗಳನ್ನು ಯಾವಾಗಲೂ ಸೇವಿಸುವುದರಿಂದ ಉತ್ತಮವಾದ ಚರ್ಮದ ಆರೋಗ್ಯ ಪಡೆಯಬಹುದು.