-ನೈಸರ್ಗಿಕ ಪದಾರ್ಥದ ಕಡೆ ಗಮನಹರಿಸಿ.
-ಈ ತೊಂದರೆ ಇದ್ದರೆ ಮೌತ್ ವಾಶ್ ಬೇಡ
ಬೆಂಗಳೂರು : ಬಾಯಿಂದ ದುರ್ವಾಸನೆ ಬರಬಾರದೆಂದು,ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗಲೆಂದು ನಾವು ಮೌತ್ ವಾಶ್ ಗಳನ್ನು ಬಳಸುತ್ತೇವೆ.ಇದರಿಂದ ಬಾಯಿ ಸ್ವಚ್ಚವಾಗುವ ಅನುಭವ ನಮಗೆ ದೊರೆಯುತ್ತದೆ.
ಆದರೆ ಈ ಮೌತ್ ವಾಶ್ ಗಳನ್ನು ಬಳಸುವುದರಿಂದ ತೊಂದರೆ ಸಹಾ ಕಂಡುಬರುತ್ತದೆ.
ಮೌತ್ ವಾಶ್ ಬಳಸುವುದರಿಂದ ಬಾಯಲ್ಲಿ ಅಲರ್ಜಿಯಾಗುವ ಸಂಭವವಿದೆ. ಹಾಗೇ ಬಾಯಿಯಲ್ಲಿ ಉರಿ, ನಾಲಿಗೆ ರುಚಿ ಕೆಡುವುದು, ಕೆಲವರಿಗೆ ಹಲ್ಲುಗಳು ಕಂದು ಬಣ್ಣಕ್ಕೆ ತಿರುಗುವ ಸಾಧ್ಯತೆ ಹೆಚ್ಚಿರುತ್ತದೆ.
ಇದರಿಂದಾಗಿ ಇಂತಹ ಸಮಸ್ಯೆ ಇರುವವರು ಮೌತ್ ವಾಶ್ ಬಳಸಬೇಡಿ. ಅದರ ಬದಲು ಲವಂಗ, ಏಲಕ್ಕಿಯಂತಹ ನೈಸರ್ಗಿಕ ಪದಾರ್ಥಗಳನ್ನು ಬಳಸುವುದು ಉತ್ತಮವಾಗಿರುತ್ತದೆ.