ಮಂಗನ ಕಾಯಲೆಗೆ ಬರಲಿದೆ ಹೊಸ ಲಸಿಕೆ!
– ಅರೋಗ್ಯ ಇಲಾಖೆ -ಐಸಿಎಂಆರ್ ಜೊತೆ ತಯಾರಿಕೆ
– ರಾಜ್ಯದಲ್ಲಿ ಈ ವರ್ಷ ಎಷ್ಟು ಜನರ ಸಾವು?
NAMMUR EXPRESS NEWS
ಉಡುಪಿ: ಮಂಗನ ಕಾಯಿಲೆಗೆ ಹೊಸ ಲಸಿಕೆ ತಯಾರಿಸುವ ಸಂಬಂಧ ಐಸಿಎಂಆರ್ ಜೊತೆ ಚರ್ಚಿಸಲಾಗಿದ್ದು, ಲಸಿಕೆ ತಯಾರಿಸಲು ಒಪ್ಪಿಗೆ ದೊರೆತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮಂಗನ ಕಾಯಿಲೆ ನಿಯಂತ್ರಣ ಕುರಿತು ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸಚಿವರು ಮಾತನಾಡಿದರು. ಮಂಗನ ಕಾಯಿಲೆಗೆ ಹಳೆಯ ಲಸಿಕೆ ಬಳಸುವಂತಿಲ್ಲ ಎಂಬ ಆದೇಶದ ಹಿನ್ನೆಲೆಯಲ್ಲಿ ಹೊಸ ಲಸಿಕೆ ತಯಾರಿಸಲು ಐಸಿಎಂಆರ್ಗೆ 2 ತಿಂಗಳ ಹಿಂದೆ ಮನವಿ ಮಾಡಲಾಗಿತ್ತು. ಅದರಂತೆ, ಹೈದರಾಬಾದ್ನ ಇಂಡಿಯನ್ ಇಮ್ಯುನಾಲಜಿಕಲ್ ಸಂಸ್ಥೆ ಸಂಶೋಧನೆ ಹಾಗೂ ಲಸಿಕೆ ತಯಾರಿಸುವ ಹೊಣೆ ಹೊತ್ತಿದ್ದು, ಮುಂದಿನ ವರ್ಷ ಹೊಸ ಲಸಿಕೆ ಲಭ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವರ್ಷ ಮಂಗನ ಕಾಯಿಲೆಗೆ ಇಬ್ಬರು ಮೃತಪಟ್ಟಿದ್ದು, ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಎಷ್ಟು ಕೇಸ್?
ಉತ್ತರ ಕನ್ನಡ 38, ಶಿವಮೊಗ್ಗ 25 ಹಾಗೂ ಚಿಕ್ಕಮಗಳೂರಿ ನಲ್ಲಿ 6 ಮಂದಿಗೆ ಕೆಎಫ್ಡಿ ಸೋಂಕು ದೃಢಪಟ್ಟಿದ್ದು, 20 ಸಕ್ರಿಯ ಪ್ರಕರಣ ಗಳಿವೆ. ಸಾವು ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿದ್ದು, ಔಷಧ ಪೂರೈಕೆ ಜತೆಗೆ ಸೋಂಕು ಹರಡದಂತೆ ಕ್ರಮ ತೆಗೆದುಕೊಳ್ಳಲಾಗಿದೆ