-ಚಳಿ ನಿವಾರಣೆಗಾಗಿ ಮುಂಜಾನೆಯ ಸೂರ್ಯನ ಬಿಸಿಲಿಗೆ ಮೈ ಒಡ್ಡುತ್ತೀರಾ
-ಆರೋಗ್ಯ ವೃದ್ದಿಸುತ್ತೆ ಸೂರ್ಯ ರಶ್ಮಿ
ಚಳಿಗಾಲದಲ್ಲಿ ಸೂರ್ಯನ ಕಿರಣಗಳಿಗೆ ನಿಮ್ಮನ್ನುನೀವು ಒಗ್ಗಿಕೊಳ್ಳುವುದರಿಂದ ಹಲವು ಲಾಭಗಳನ್ನು ಪಡೆಯಬಹುದು. ತ್ವಚೆಯ ಅಲರ್ಜಿ ನಿವಾರಿಸಲು ಇದು ಅತ್ಯುತ್ತಮ. ವಿಟಮಿನ್ ಡಿ ಹೇರಳವಾಗಿ ನಮ್ಮ ದೇಹಕ್ಕೆ ಸಿಗುವಂತೆ ಮಾಡಲು ಸೂರ್ಯ ಕಿರಣವೇ ಅತ್ಯುತ್ತಮ ಮಾರ್ಗ.
ಚಳಿಗಾಲದಲ್ಲಿ ನಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದ ಲಾಭಗಳನ್ನು ಸೂರ್ಯನ, ಬೆಳಗಿನ ಹಾಗೂ ಸಂಜೆಯ ಕಿರಣಗಳು ನೀಡುತ್ತವೆ. ಹತ್ತರಿಂದ ಇಪ್ಪತ್ತು ನಿಮಿಷಗಳ ಕಾಲ ಸೂರ್ಯನ ಬಿಸಿಲಿಗೆ ನಿಮ್ಮನ್ನು ನೀವು ಒಡ್ಡಿಕೊಂಡರೆ ಸಾಕು ಅನೇಕ ಲಾಭಗಳಿವೆ.
ಇದರಿಂದ ಮೂಳೆಗಳು ಬಲಗೊಳ್ಳುತ್ತವೆ. ಕ್ಯಾಲ್ಸಿಯಂ ಸಮಸ್ಯೆ ದೂರವಾಗಿ, ಸ್ನಾಯುಗಳು ಗಟ್ಟಿಯಾಗುತ್ತದೆ. ಕೀಲು ನೋವಿನಂಥ ಸಮಸ್ಯೆಗಳು ದೂರವಾಗುತ್ತವೆ. ಹಾಗಾಗಿ ಈ ಸಮಸ್ಯೆ ಇರುವವರು ನಿತ್ಯ ಬಿಸಿಲಿಗೆ ನಿಲ್ಲಬೇಕು.
ಮೆದುಳಿನ ಆರೋಗ್ಯ ಕಾಪಾಡಲೂ ಸಹಾ ಇದು ಸಹಕಾರಿ ಮತ್ತು ನಿದ್ರಾಹೀನತೆ ಸಮಸ್ಯೆ ದೂರವಾಗಿ, ಮಾನಸಿಕ ಒತ್ತಡವೂ ಕಡಿಮೆಯಾಗುತ್ತದೆ.